More

    ದಾವಣಗೆರೆಯಲ್ಲಿ ರೇಸ್ ಫಾರ್-7 ಅಭಿಯಾನ

    ದಾವಣಗೆರೆ: ನಗರದಲ್ಲಿ ವಿರಳ ರೋಗಿ ದಿನಾಚರಣೆ ಪ್ರಯುಕ್ತ ಭಾನುವಾರ ರೇಸ್ ಫಾರ್-7 ಶೀರ್ಷಿಕೆ ಜತೆಗೆ ‘ಒಂದು ದೇಶ, ಒಂದು ದಿನ ವಿರಳ ರೋಗಿಗಳಿಗೆ- ಜೊತೆಯಾಗೋಣ ಬನ್ನಿ!’ ಎಂಬ ಧ್ಯೇಯ ವಾಕ್ಯದೊಡನೆ, 7 ಕಿ.ಮೀ. ಮ್ಯಾರಥಾನ್ ನಡೆಯಿತು.
     ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಸುರೇಶ್ ಹನಗವಾಡಿ ಮಾತನಾಡಿ, 2013ರಲ್ಲಿ ಪ್ರಾರಂಭಗೊಂಡ (ಒಆರ್‌ಡಿಐ) ವಿರಳ ರೋಗಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಯು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವೈದ್ಯಕೀಯ ಸೌಲಭ್ಯಗಳ ಆಭಿವೃದ್ಧಿ, ವೈಜ್ಞಾನಿಕ ಲೋಕದ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಅನೇಕ ಜಾಗೃತಿ ಕಾರ್ಯಕ್ರಮ ಸಂಘಟಿಸುತ್ತಿದೆ ಎಂದು ತಿಳಿಸಿದರು.
     2016ರಿಂದ ದೇಶಾದ್ಯಂತ ರೇಸ್ ಫಾರ್-7 ಎಂಬ ಅಭಿಯಾನವನ್ನು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
     ಉದ್ಯಮಿ ದೀಪಾ ಶಿವಕುಮಾರ ಉದ್ಘಾಟಿಸಿದರು. ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಎಂ.ಬಿ. ನಾಗೇಂದ್ರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು.
     ರೇಸ್ ಫಾರ್-7 ಅಭಿಯಾನದಲ್ಲಿ 150ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಡಾ. ಸೌಜನ್ಯಾ ನಿರೂಪಿಸಿದರು.
      ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್. ಷಣ್ಮುಖಪ್ಪ, ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮೂಗನಗೌಡ, ಡಾ. ಮೃತ್ಯುಂಜಯ ಹಿರೇಮಠ, ಅಶ್ವಿನಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಬಿ.ಟಿ. ಅಚ್ಯುತ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ, ವೈದ್ಯಕೀಯ ವಿದ್ಯಾರ್ಥಿಗಳು, ಸಾರ್ವಜನಿಕರು, ರೋಗಿಗಳು ಮತ್ತು ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts