More

    ‘ಇ-ಆಸ್ತಿ’ ಚುರುಕು, ದಾಖಲೆಗಳ ಡಿಜಿಟಲೀಕರಣ

    ರಮೇಶ ಜಹಗೀರದಾರ್ ದಾವಣಗೆರೆ
     ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ದಾಖಲೆಗಳ ಡಿಜಿಟಲೀಕರಣ ಕಾರ್ಯ ಚುರುಕುಗೊಂಡಿದೆ. ‘ಇ-ಆಸ್ತಿ’ ಜಾರಿಗೊಳ್ಳುವ ಮೂಲಕ ನಿಮ್ಮ ಸ್ವತ್ತಿಗೆ ಸಂಬಂಧಿಸಿದ ಮಾಹಿತಿಯು ಇನ್ನುಮುಂದೆ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.
     ನಗರದಲ್ಲಿ 1.75 ಲಕ್ಷ ಸ್ವತ್ತುಗಳಿದ್ದು ಕಳೆದ ಒಂದು ವರ್ಷದಲ್ಲಿ 30 ಸಾವಿರ ಆಸ್ತಿಗಳ ಡಿಜಿಟಲೀಕರಣ ಮಾಡಲಾಗಿದೆ. ಇನ್ನೂ 1.40 ಲಕ್ಷ ಸ್ವತ್ತುಗಳು ಇ-ಆಸ್ತಿಗೆ ಒಳಪಡಬೇಕಿದೆ. ಈ ಹಿನ್ನೆಯಲ್ಲಿ ಮಾರ್ಚ್ ಅಂತ್ಯದ ವರೆಗೆ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ.
     ಖಾಲಿ ನಿವೇಶನ, ಮನೆಗಳು, ವಾಣಿಜ್ಯ ಮಳಿಗೆ, ಕೈಗಾರಿಕೆಗಳು ಸೇರಿ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಎಲ್ಲ ವಿವರಗಳು ಇನ್ನು ಮುಂದೆ ಇ-ಆಸ್ತಿಯಲ್ಲಿ ದಾಖಲಾಗಲಿವೆ. ಇದುವರೆಗೆ ಮ್ಯಾನುಯಲ್ ಪದ್ಧತಿ ಇತ್ತು. ಸಾರ್ವಜನಿಕರ ಆಸ್ತಿಯ ವಿವರಗಳು ಕಚೇರಿಯ ದಾಖಲೆ ಪುಸ್ತಕಗಳಲ್ಲಿ ಧೂಳು ಹಿಡಿಯುತ್ತಿದ್ದವು. ಯಾವುದು ಸರಿ, ಯಾವುದು ನಿಯಮ ಬಾಹಿರ ಎಂಬ ಲೆಕ್ಕ ಸಿಗುತ್ತಿರಲಿಲ್ಲ.
     ಈಗ ಎನ್‌ಐಸಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಆಧರಿಸಿ ಹಳೆಯ ದಾಖಲೆಗಳಿಗೆ ಹೊಸ ಸ್ವರೂಪ ನೀಡಲಾಗುತ್ತಿದೆ. ಇದರಿಂದ ಪಾರದರ್ಶಕತೆ ಬರಲಿದೆ. ವಂಚನೆ ಪ್ರಕರಣಗಳನ್ನು ತಡೆಗಟ್ಟಬಹುದು. ಬೋಗಸ್ ಆಗುವುದು ತಪ್ಪಲಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಮಹಾನಗರ ಪಾಲಿಕೆಗೆ ಆದಾಯವೂ ಜಾಸ್ತಿಯಾಗಲಿದೆ.
     ನಗರಸಭೆ, ಪುರಸಭೆ ಇನ್ನಿತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ಪ್ರಕ್ರಿಯೆ ಕೆಲ ವರ್ಷಗಳ ಹಿಂದೆಯೇ ಆಗಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 2021 ರಿಂದ ಶುರುವಾಯಿತು. ಆದರೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 2023 ರ ಏಪ್ರಿಲ್‌ನಿಂದ ಚಾಲನೆ ನೀಡಲಾಗಿದೆ.
     …
     

     ವಾರ್ಡ್ ಮಟ್ಟದಲ್ಲಿ ಸೇವೆ
     ವಾರ್ಡ್ ಮಟ್ಟದಲ್ಲಿ ಎಲ್ಲರಿಗೂ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪಾಲಿಕೆಯ ಸಿಬ್ಬಂದಿ ಕಂಪ್ಯೂಟರ್ ಇನ್ನಿತರ ಉಪಕರಣಗಳ ಸಮೇತ ಅಲ್ಲಿಗೆ ಹೋಗುತ್ತಾರೆ. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ತೆರಿಗೆ ರಸೀದಿ, ಕ್ರಯಪತ್ರ, ಆಧಾರ್ ಕಾರ್ಡ್, ಸ್ವತ್ತಿನ ಫೋಟೋ, ಮಾಲೀಕನ ಭಾವಚಿತ್ರ, ಕಟ್ಟಡ ಪರವಾನಗಿ ಇತ್ಯಾದಿ ದಾಖಲೆಗಳನ್ನು ತೆಗೆದುಕೊಂಡು ಹೋದರೆ ಇ-ಆಸ್ತಿ ಮಾಡಿ ಕೊಡಲಾಗುತ್ತದೆ.
     ಇಂಟರ್ನೆಟ್ ಬಳಸಿಕೊಂಡು, ಮೂರ್ನಾಲ್ಕು ಲಾಗಿನ್‌ಗಳ ಮೂಲಕ ಪ್ರಕ್ರಿಯೆ ನಡೆಯುತ್ತದೆ. ಒಬ್ಬರ ಇ-ಆಸ್ತಿ ಮಾಡಿಕೊಡಲು ಕನಿಷ್ಠ 20 ನಿಮಿಷವಾದರೂ ಬೇಕು. ಮೂರು ವಲಯಗಳಿಂದ ದಿನಕ್ಕೆ ಕನಿಷ್ಠ 300 ಅರ್ಜಿಗಳು ಬರುತ್ತಿವೆ. ಅದನ್ನು ನಿರ್ವಹಣೆ ಮಾಡಲು ಅಗತ್ಯ ಸಿಬ್ಬಂದಿಯ ಕೊರತೆಯಿದೆ.
     ಸದ್ಯದಲ್ಲೆ 15 ಜನ ಆಪರೇಟರ್‌ಗಳನ್ನು ಈ ಕಾರ್ಯಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ತಿಂಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಪ್ರಗತಿ ಸಾಧಿಸುವ ಗುರಿಯಿದೆ. ಆದರೆ ಇ-ಆಸ್ತಿ ಪ್ರಕ್ರಿಯೆ ಶೇ. 100 ರಷ್ಟು ಪೂರ್ಣಗೊಳ್ಳಬೇಕಾದರೆ ಇನ್ನೂ 6 ತಿಂಗಳಾದರೂ ಬೇಕಾಗುತ್ತದೆ ಎನ್ನುತ್ತವೆ ಮೂಲಗಳು.
     ಹಳೆಯ ನಗರದಲ್ಲಿ ಕೆಲವು ಆಸ್ತಿಗಳನ್ನು  ಇ-ಆಸ್ತಿ ವ್ಯಾಪ್ತಿಗೆ ತರಲು ಸಾಧ್ಯವಾಗುತ್ತಿಲ್ಲ. ಈಗಲೂ ಕೆಲವು ಸ್ವತ್ತುಗಳು ತಾತ, ಮುತ್ತಾತನ ಹೆಸರಿನಲ್ಲಿವೆ. ಮತ್ತೆ ಕೆಲವು ವಿವಾದದಿಂದ ಕೂಡಿವೆ. ಇದನ್ನು ಬಿಟ್ಟು ಇನ್ನೂ ಕೆಲವು ಆಸ್ತಿಗಳು ನೋಂದಣಿಯೆ ಆಗಿಲ್ಲವಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts