More

    ಪಕ್ಷೇತರ ಅಭ್ಯರ್ಥಿ ವಿನಯ ಕುಮಾರ್ 2ನೇ ಬಾರಿ ನಾಮಪತ್ರ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ ಕುಮಾರ್ ಬುಧವಾರ ಸಹಸ್ರಾರು ಬೆಂಬಲಿಗರು, ಅಭಿಮಾನಿಗಳೊಂದಿಗೆ ತೆರಳಿ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು.
     ವಿನಯ ಕುಮಾರ್ ಬೆಳಗ್ಗೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಖಡಕ್ ಷಾ ವಲಿ ಮಖಾನ್ ದರ್ಗಾಕ್ಕೆ ಭೇಟಿ ನೀಡಿದರು. ನಂತರ ಪಿಬಿ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಿಬಿ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟು ಶಕ್ತಿ ಪ್ರದರ್ಶನ ಮಾಡಿದರು. ಮಾರ್ಗ ಮಧ್ಯೆ ದೇವರಾಜ ಅರಸು, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
     ಜಿಲ್ಲಾಡಳಿತ ಭವನದ ವರೆಗೆ ರೋಡ್ ಶೋ ನಡೆಸಿ ನಂತರ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ ಕುಮಾರ್, ಜನರ ಬೆಂಬಲ, ಅಭಿಮಾನವನ್ನು ನೋಡಿದರೆ ತಮಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
     ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ. ನನಗೆ ಯಾರಿಂದಲೂ ಒತ್ತಡ ಬಂದಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಗೆಲುವಿನ ವಾತಾವರಣವಿದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರದಲ್ಲೂ ಬೆಂಬಲ ಸಿಗುತ್ತಿದೆ. ಜನರು ಬದಲಾವಣೆ ಬಯಸಿದ್ದಾರೆ. 10-20 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿದರು.
     ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಭಯ ಶುರುವಾಗಿದೆ. ಈಗಿನ ಸಂಸದರು ಹಾಗೂ ಶಾಮನೂರು ಕುಟುಂಬದವರು ಹಳ್ಳಿಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಶಾಲೆ, ಆಸ್ಪತ್ರೆಗಳು ದುಸ್ಥಿತಿಯಲ್ಲಿವೆ ಎಂದರು.
     ದಾವಣಗೆರೆ ರಾಜಕಾರಣದಲ್ಲಿ ಉಳ್ಳವರೇ ಬೆಳೆಯುತ್ತಿದ್ದಾರೆ. ಅಹಿಂದ ಮತದಾರರು ಮತ್ತು ಮೇಲ್ಜಾತಿಯ ಬಡವರನ್ನು ದೂರ ಇಡಲಾಗಿದೆ. ಅವರ ಧ್ವನಿಯಾಗಿ ನಾನು ಕೆಲಸ ಮಾಡುವೆ, ಈ ಬಾರಿ ಕಪ್ ನಮ್ಮದೇ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts