More

    ಜಾತೀಯತೆ, ಮೌಢ್ಯ ಖಂಡಿಸಿದ ಶರಣರು

    ದಾವಣಗೆರೆ : ಹನ್ನೆರಡನೇ ಶತಮಾನದಲ್ಲಿ ಜಗತ್ತಿಗೆ ಕಾಯಕ ಶ್ರದ್ಧೆ ಪರಿಚಯಿಸಿದ ಕಲ್ಯಾಣದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರಮುಖರು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
     ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನ ದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ, ಮಾತನಾಡಿದರು.
     12ನೇ ಶತಮಾನದಲ್ಲಿ ವ್ಯಾಪಕವಾಗಿದ್ದ ಜಾತೀಯತೆ, ಮೌಢ್ಯತೆ ಖಂಡಿಸಿ ತಮ್ಮ ಹೆಸರನ್ನೇ ಅಂಕಿತವನ್ನಾಗಿರಿಸಿಕೊಂಡ ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯ. ಅವರ ವಚನದಲ್ಲಿನ ತತ್ವಾದರ್ಶ ಸಮಾಜಕ್ಕೆ ಇಂದಿಗೂ ಮಾದರಿ ಎಂದು ತಿಳಿಸಿದರು.
     ಅಂಬಿಗರ ಚೌಡಯ್ಯ ಅವರ ಮಾತು ಕಟುವಾದರೂ ದಿಟವನ್ನೆ ನುಡಿದು ದಿಟ್ಟ ನಿಲುವಿನೊಂದಿಗೆ ನಡೆದವರು. ಮಹಾಯೋಗಿ ವೇಮನರು 15ನೇ ಶತಮಾನ ಕಂಡ ಅದ್ಭುತ ಶಾಸ್ತ್ರಜ್ಞರಾಗಿದ್ದರು. ಸಮಾಜದಲ್ಲಿನ ಜಾತೀಯತೆ, ಅಸಮಾನತೆ ಖಂಡಿಸಿದ ಮಹಾಯೋಗಿ. ಕನ್ನಡಕ್ಕೆ ಸರ್ವಜ್ಞ, ತಮಿಳಿಗೆ ತಿರುವಳ್ಳವರ್ ಅವರಂತೆ ತೆಲುಗು ಭಾಷೆಗೆ ವೇಮನರೇ ಮಹಾಕವಿ ಎಂಬುದು ಇಂದಿಗೂ ಪ್ರಚಲಿತವಾಗಿದೆ ಎಂದರು.
     ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತನಾಡಿ, ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ ಎಂಬಂತೆ ಅಂಬಿಗರ ಚೌಡಯ್ಯ ಇವರು ರಚಿಸಿದ 15,000 ವಚನಗಳ ಪೈಕಿ ಕೆಲವು ವಚನಗಳು ಮಾತ್ರ ಉಳಿದಿವೆ. ಮಹಾಯೋಗಿ ವೇಮನರ ಸಾಹಿತ್ಯ ಸಮಾಜಕ್ಕೆ ಅಗತ್ಯ. ಶರಣರ ಆದರ್ಶ ಪಾಲಿಸಿವುದು ನಮ್ಮ ಕರ್ತವ್ಯ ಎಂದು ಹೇಳಿದರು.
     ಕನ್ನಡ ಪ್ರಾಧ್ಯಾಪಕ ಸಾಲಿಮನಿ ಮಾರುತಿ ಉಪನ್ಯಾಸ ನೀಡಿದರು. ಪುಟಗನಾಳು ಗಂಗಾಮತಸ್ಥರ  ಸಮಾಜದ ಉಪಾಧ್ಯಕ್ಷ ಟಿ. ಮಂಜುನಾಥ, ಜಿಲ್ಲಾ ಗಂಗಾಮತಸ್ಥರ  ಸಮಾಜ ನಿರ್ದೇಶಕ ಸಿ.ವಿ. ಅಂಜಿನಪ್ಪ, ಲೆಕ್ಕಪತ್ರಾಧಿಕಾರಿ ವೆಂಕಟೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts