More

    12 ಸಾವಿರ ರೂ. ಗೌರವಧನ ನಿಗದಿಗೆ ಆಗ್ರಹ

    ದಾವಣಗೆರೆ: ಮಾಸಿಕ 12 ಸಾವಿರ ರೂ. ಗೌರವಧನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಸೇರಿ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಪತ್ರ ರವಾನಿಸಿದರು.

    ಇಂದಿನಿಂದ 7 ದಿನ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಈ ಅವಧಿಯಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಜುಲೈ 10ರಿಂದ 42 ಸಾವಿರ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಯ ಎಲ್ಲ ಕೆಲಸ ನಿಲ್ಲಿಸುವರು ಎಂದು ಎಚ್ಚರಿಸಿದರು.

    ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ ಕುಕ್ಕುವಾಡ, ಭಾರತಿ, ಪರ್ವೀನ್‌ಬಾನು, ನೇತ್ರಾವತಿ, ರುಕ್ಕಮ್ಮ, ಭಾಗ್ಯ, ಮಂಜುಳಾ ಇದ್ದರು.

    ಬೇಡಿಕೆಗಳು: ಪ್ರೋತ್ಸಾಹಧನ, ಗೌರವಧನ ಬಿಡಿಬಿಡಿಯಾಗಿ ನೀಡುವ ಬದಲು ಎರಡನ್ನೂ ಒಟ್ಟಿಗೇ ಸೇರಿಸಿ ಮಾಸಿಕ 12 ಸಾವಿರ ರೂ. ಗೌರವ ಧನ ನೀಡಬೇಕು. ಆರೋಗ್ಯ ರಕ್ಷಣೆಗೆ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ ಪರಿಹಾರ ಹಣ ನೀಡಬೇಕು. ಜುಲೈ 10 ರೊಳಗೆ ಬೇಡಿಕೆ ಈಡೇರಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts