More

    ಸೌಲಭ್ಯಗಳ ನಿರೀಕ್ಷೆಯಲ್ಲಿ ಪತ್ರಿಕಾ ವಿತರಕರು

    ದಾವಣಗೆರೆ : ದಿನವೂ ಬೆಳಕು ಹರಿಯುತ್ತಿದ್ದಂತೆ ಮನೆ ಮನೆಗೆ ದಿನಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಕೆಲಸ ಸುಲಭವಲ್ಲ. ಮಳೆ, ಚಳಿ, ಗಾಳಿ ಯಾವುದನ್ನೂ ಲೆಕ್ಕಿಸದೆ ದುಡಿಯುತ್ತಾರೆ. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಈ ಕಾಯಕ ಜೀವಿಗಳು ಸಂಘಟಿತರಾಗಿ, ತಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸುತ್ತಿದ್ದಾರೆ.
     ದಾವಣಗೆರೆ ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘವು 2021 ರಲ್ಲಿ ಸ್ಥಾಪನೆಯಾಗಿ ಕಳೆದ ಎರಡು ವರ್ಷಗಳಲ್ಲಿ ಹಲವು ಉಪಯುಕ್ತ ಚಟುವಟಿಕೆಗಳ ಮೂಲಕ ತಮ್ಮ ವೃತ್ತಿ ನಿರತರ ಬದುಕಿಗೆ ಆಸರೆಯಾಗಿ ನಿಂತಿದೆ. ಕಷ್ಟ ಕಾಲದಲ್ಲಿ ಕೈ ಹಿಡಿಯುವ ಶಕ್ತಿಯಾಗಿ ಈ ಸಂಘಟನೆ ರೂಪುಗೊಂಡಿದೆ.
     ಪತ್ರಿಕಾ ವಿತರಕರು ಅಥವಾ ಹಂಚುವವರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಕುಟುಂಬದ ಸದಸ್ಯರಿಗೆ ಸಂಘಟನೆಯ ವತಿಯಿಂದ ಒಂದಿಷ್ಟು ಧನ ಸಹಾಯ ಮಾಡಲಾಗಿದೆ. ಅಪಘಾತಕ್ಕೀಡಾದ ವಿತರಕರ ಚಿಕಿತ್ಸೆಗೆ ನೆರವು ನೀಡಲಾಗಿದೆ. 8 ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯುವ ವ್ಯವಸ್ಥೆಯಾಗಿದೆ. ಮುಂಬರುವ ದಿನಗಳಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯ ನೆರವು ಒದಗಿಸುವ ಚಿಂತನೆಯಿದೆ.
     ದಾವಣಗೆರೆ ನಗರದಲ್ಲೇ 260 ಜನ ಪತ್ರಿಕಾ ವಿತರಕರು ಮತ್ತು ಹಂಚುವವರಿದ್ದಾರೆ. 60ಕ್ಕೂ ಹೆಚ್ಚು ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ. ಬೆಳ್ಳಂಬೆಳಗ್ಗೆ 3.30ರಿಂದ ಇವರ ಕೆಲಸ ಆರಂಭವಾಗುತ್ತದೆ. ಇವರಿಗೆ ಕುಳಿತು ಕೆಲಸ ಮಾಡಲು ಒಂದು ನಿಗದಿತ ಜಾಗವಿಲ್ಲ. ಅದಕ್ಕಾಗಿ ತಮಗೊಂದು ಸ್ಥಳ ಮಂಜೂರು ಮಾಡಿ ಅಲ್ಲಿ ಶೆಡ್ ನಿರ್ಮಿಸಿಕೊಡಬೇಕು. ಅಲ್ಲಿ ವಿದ್ಯುದ್ದೀಪ ಮತ್ತು ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬುದು ಈ ಶ್ರಮ ಜೀವಿಗಳ ಬಹು ದಿನಗಳ ಬೇಡಿಕೆಯಾಗಿದೆ.
     ಜಿಲ್ಲಾಡಳಿತದಿಂದ ಪತ್ರಿಕಾ ವಿತರಕರಿಗೆ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಸಬ್ಸಿಡಿ ನೀಡಬೇಕು ಎಂಬುದು ಅವರ ಮತ್ತೊಂದು ಬೇಡಿಕೆಯಾಗಿದೆ. ಮನೆ ಮನೆಗೆ ಪತ್ರಿಕೆ ಹಂಚುವಾಗ ಅಪಘಾತಗಳಾದ ಉದಾಹರಣೆಯಿದೆ. ಕೋವಿಡ್ ಸಂದರ್ಭದಲ್ಲಿ ಅನೇಕರು ಮೃತಪಟ್ಟಿದ್ದು ಅವರ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ನೆರವು ಸಿಕ್ಕಿಲ್ಲ.
     ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟನೆ ಕಾರ್ಯ ಪ್ರವೃತ್ತವಾಗಿದೆ. ಈ ಸಂಘಟನೆಯ ವತಿಯಿಂದ ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
     …
     (ಕೋಟ್)
     ಮಹಾನಗರ ಪಾಲಿಕೆಯಿಂದ ಪತ್ರಿಕಾ ವಿತರಕರಿಗೆ ಗುರುತಿನ ಚೀಟಿಗಳನ್ನು ನೀಡಬೇಕು. ಪಾಲಿಕೆಯ ಬಜೆಟ್‌ನಲ್ಲಿ ನಮಗೆಂದೇ ಅನುದಾನ ಮೀಸಲಿಡಬೇಕು. ಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ ಅದನ್ನು ವಿನಿಯೋಗಿಸುವಂತಾಗಬೇಕು. ಉನ್ನತ ಶಿಕ್ಷಣ ಪಡೆಯುವ ಮಕ್ಕಳಿಗೆ ಸ್ಕಾಲರ್‌ಶಿಪ್ ಸಿಗಬೇಕು.
      ಕೆ. ಅರುಣ್ ಕುಮಾರ್, ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ
     ಚಿತ್ರ: ಡಿವಿಜಿ ಕೆ. ಅರುಣ್‌ಕುಮಾರ್ 02
     (ಮಗ್‌ಶಾಟ್)
     …
     (ಕೋಟ್)
     ಪತ್ರಿಕಾ ವಿತರಕರಿಗೆ ನಮ್ಮದೇ ಆದ ಜಾಗವಿಲ್ಲ. ವಿಮೆ ಮುಂತಾದ ಸೌಲಭ್ಯಗಳಿಲ್ಲ. ಮಕ್ಕಳ ಶಿಕ್ಷಣ, ಆರೋಗ್ಯದ ಬಗ್ಗೆ ಸರ್ಕಾರ ಗಮನಿಸಿ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ.
      ಟಿ.ಪಿ. ನಾಗರಾಜ್, ಸಂಘದ ಗೌರವ ಸಲಹೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts