More

    ಪ್ಲಾಸ್ಟಿಕ್ ಮುಕ್ತ ಚುನಾವಣೆಗೆ ಸಹಕರಿಸಲು ಮನವಿ

    ದಾವಣಗೆರೆ : ಮುಂಬರುವ ಲೋಕಸಭಾ ಚುನಾವಣೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಮುದ್ರಕರು ಹಾಗೂ ಕೇಬಲ್ ಆಪರೇಟರ್‌ಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮನವಿ ಮಾಡಿದರು.
     ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ, ಲೋಕಸಭಾ ಚುನಾವಣೆ ಸಂಬಂಧ ಮುದ್ರಣ ಮಾಲೀಕರು, ಕೇಬಲ್ ಆಪರೇಟರ್‌ಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
     ಫ್ಲೆಕ್ಸ್, ಪೋಸ್ಟರ್‌ಗಳನ್ನು ಮುದ್ರಣ ಮಾಡುವಾಗ ಪ್ಲಾಸ್ಟಿಕ್ ಬಳಸಬಾರದು. ಪರಿಸರಸ್ನೇಹಿ ಬಟ್ಟೆಯಲ್ಲಿ ಮುದ್ರಣ ಮಾಡಬೇಕು. ಕರಪತ್ರ, ಪೋಸ್ಟರ್ ಹಿಂಭಾಗದಲ್ಲಿ ಮುದ್ರಣ ಮಾಲೀಕರ ಸಂಪೂರ್ಣ ವಿವರ ಹಾಗೂ ಮುದ್ರಣ ಮಾಡುತ್ತಿರುವ ಪ್ರತಿಗಳ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ತಿಳಿಸಿದರು.
     ಮುದ್ರಣಕ್ಕೆ ನೀಡುವವರಿಂದ ಅಪೆಂಡಿಕ್ಸೃ್-ಎ ಅಡಿ ಅರ್ಜಿಯ ಸಂಪೂರ್ಣ ವಿವರ ಪಡೆದಿರಬೇಕು. ಮುದ್ರಣ ಮಾಡಿದ ಎರಡು ದಿನಗಳೊಳಗಾಗಿ ಮುದ್ರಕರು ಅಪೆಂಡಿಕ್ಸೃ್-ಬಿ ಅಡಿ ಜಿಲ್ಲಾ ದಂಡಾಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
     ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಬಾನು ಎಸ್. ಬಳ್ಳಾರಿ ಹಾಗೂ ಮುದ್ರಕರಾದ ಕೆ. ಮುರುಘೇಶಪ್ಪ, ಫ್ಲೆಕ್ಸ್ ಮುದ್ರಕರ ಸಂಘದ ಅಧ್ಯಕ್ಷ ಡಿ.ಸಿ.ಶ್ರೀನಿವಾಸ್, ಕೆ. ಚಿದಾನಂದ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts