More

    ಮಾಲಿನ್ಯರಹಿತ ದೀಪಾವಳಿಗೆ ಮಾರ್ಗಸೂಚಿ

    ದಾವಣಗೆರೆ: ಕೋವಿಡ್ ರೋಗದ ಹಿನ್ನೆಲೆಯಲ್ಲಿ ನ.14 ರಿಂದ 17 ರವರೆಗೆ ಸರಳವಾಗಿ ಮತ್ತು ಮಾಲಿನ್ಯ ರಹಿತವಾಗಿ ದೀಪಾವಳಿ ಆಚರಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

    ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಪಟಾಕಿ ಮಾರಬೇಕು. ಮಳಿಗೆಗಳನ್ನು ನ.17 ರವರೆಗೆ ಮಾತ್ರ ತೆರೆದಿರಬೇಕು. ನಿಗದಿಪಡಿಸಿದ ಸ್ಥಳದಲ್ಲಿ ಮಾತ ಪಟಾಕಿ ಅಂಗಡಿ ಇಡಬೇಕು.

    ಮಳಿಗೆಗಳ ನಡುವೆ 6 ಮೀಟರ್ ಅಂತರವಿರಬೇಕು. ಪರವಾನಗಿ ಪ್ರತಿ ಪ್ರದರ್ಶಿಸಬೇಕು. ಮಳಿಗೆಗಳ ಸುತ್ತ ನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಗ್ರಾಹಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರಬೇಕು. ಕನಿಷ್ಠ 6 ಅಡಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಮುಖಗವಸು ಧರಿಸಬೇಕು.

    ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಪೊಲೀಸ್, ಆರೋಗ್ಯ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಆಡಳಿತ, ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts