More

    ಸುರಕ್ಷಾ ದೀಪಾವಳಿ ಆಚರಿಸುವ ಸಂಕಲ್ಪ

    ದಾವಣಗೆರೆ : ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಅಪಾಯಕಾರಿಯಲ್ಲದ ಅತ್ಯಂತ ಕಡಿಮೆ ಶಬ್ದ ಮಾಡುವ, ಪ್ರಾಣಿ, ಪಕ್ಷಿ, ಸಕಲ ಜೀವಿಗಳ ಬದುಕಿಗೆ ತೊಂದರೆಯಾಗದಂಥ ಹಸಿರು ಪಟಾಕಿಗಳನ್ನು ಬಳಸುತ್ತೇವೆ.
     ಪರಿಸರ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಅಮೃತ್ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ, ಸುರಕ್ಷಾ ದೀಪಾವಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದ್ದು ಹೀಗೆ.
     ವಿಷ, ಬೆಂಕಿ, ಶಬ್ದಗಳ ವಿಕೃತಿಗೆ ವಿದಾಯ ಹೇಳುತ್ತೇನೆ. ಪ್ರಕೃತಿಯ ಮಡಿಲಲ್ಲಿ ದೀಪಾವಳಿ ಆಚರಿಸುತ್ತೇನೆ. ನಿಸರ್ಗದೊಂದಿಗೆ ಸಹಬಾಳ್ವೆ ನಡೆಸುತ್ತೇನೆ. ದೀಪದಿಂದ ದೀಪ ಹಚ್ಚಿ ಮನೆ ಮನ ಬೆಳಗುತ್ತೇನೆ. ಆ ಮೂಲಕ ಪರಿಸರದ ಸಮತೋಲನಕ್ಕೆ ನನ್ನದೇ ಆದ ಕೊಡುಗೆ ನೀಡುತ್ತೇನೆ ಎಂದು ಸಂಕಲ್ಪ ಮಾಡಿದರು.
     ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ದೀಪಾವಳಿ ಹಬ್ಬವು ಎಲ್ಲರ ಮನೆ, ಮನಗಳಲ್ಲಿ ಬೆಳಕು ಹಚ್ಚಬೇಕು. ಇದು ಕೇವಲ ಪಟಾಕಿಗಳ ಹಬ್ಬವಲ್ಲ. ಪಟಾಕಿ ಕಾರ್ಖಾನೆಗಳಿಂದ ಹಲವು ದುರ್ಘಟನೆಗಳು ನಡೆದಿವೆ. ಹೆಚ್ಚು ಮಾಲಿನ್ಯವಾಗುತ್ತಿದ್ದು ಪರಿಸರ, ಪ್ರಾಣಿ, ಪಕ್ಷಿ ಹಾಗೂ ನಮ್ಮ ಜೀವನಕ್ಕೂ ತೊಂದರೆಯಾಗುತ್ತಿದೆ. ಸಾರ್ವಜನಿಕರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಮಕ್ಕಳು ಎಚ್ಚರಿಕೆಯಿಂದ ಮಾಲಿನ್ಯ ರಹಿತ ದೀಪಾವಳಿ ಆಚರಣೆ ಮಾಡಬೇಕು ಎಂದು ತಿಳಿಸಿದರು.
     ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜಾ, ಕರುನಾಡ ಕನ್ನಡ ಸೇನೆಯ ಅಧ್ಯಕ್ಷ ಕೆ.ಟಿ. ಗೋಪಾಲ ಗೌಡ, ಅಮೃತ್ ಯುವಕ ಸಂಘದ ಅಧ್ಯಕ್ಷ ಆರ್.ಬಿ. ಹನುಮಂತಪ್ಪ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ, ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್. ದೇವರಮನೆ, ನಾಗರಾಜ್ ಸುರುವೆ, ಮಾರುತಿ, ಪ್ರಸನ್ನ ಬೆಳಕೆರೆ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts