More

    ಜಿಲ್ಲೆಯಲ್ಲಿ 6 ಕರೊನಾ ಪ್ರಕರಣ ಪತ್ತೆ

    ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 6 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 295ಕ್ಕೆ ಏರಿದೆ.

    ಬೆಂಗಳೂರಿನಿಂದ ವಾಪಸಾಗಿದ್ದ ನಗರದ ತರಳಬಾಳು ಬಡಾವಣೆಯ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 37, 64 ಹಾಗೂ 55 ವರ್ಷದ ಮೂವರು ಪುರುಷರು, 30 ವರ್ಷದ ಮಹಿಳೆ ಇದ್ದಾರೆ.

    ಹಾವೇರಿಯಿಂದ ಹಿಂತಿರುಗಿದ್ದ ಹರಿಹರ ವಾಸಿ 65 ವರ್ಷದ ಪುರುಷನಲ್ಲಿ ಪಾಸಿಟಿವ್ ವರದಿಯಾಗಿದೆ. ದಾವಣಗೆರೆಯ ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದ ರ‌್ಯಾಂಡಮ್ ಕರೊನಾ ಪರೀಕ್ಷೆಯಲ್ಲಿ ಹಗೇದಿಬ್ಬ ವೃತ್ತದ 68 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

    ಸೋಂಕಿನಿಂದ ಚೇತರಿಸಿಕೊಂಡ ಆರು ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಚನ್ನಗಿರಿಯ ಕುಂಬಾರ ಬೀದಿಯ ನಾಲ್ವರು, ಗೌಡರ ಬೀದಿಯ ಒಬ್ಬರು, ದಾವಣಗೆರೆ ಆನೆಕೊಂಡ ವಾಸಿ ಒಬ್ಬರಿದ್ದಾರೆ. ಈವರೆಗೆ ಒಟ್ಟು 246 ಮಂದಿ ಚೇತರಿಸಿಕೊಂಡಿದ್ದಾರೆ. 42 ಸಕ್ರಿಯ ಪ್ರಕರಣಗಳಿವೆ.

    ಭಾನುವಾರ 18 ಜನರನ್ನು ಅವಲೋಕನೆಗೆ ಒಳಪಡಿಸಲಾಗಿದೆ. 21 ಜನರನ್ನು ಮನೆಯಲ್ಲಿ, 18 ಮಂದಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 603 ಜನರ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts