More

    ಮಲದ ಗುಂಡಿ ಸ್ವಚ್ಛತೆಗೆ ಯುವಕನ ಬಳಕೆ

    ದಾವಣಗೆರೆ : ನಗರದ ಪ್ರವಾಸಿ ಮಂದಿರ ರಸ್ತೆಯ ಬದಿಯಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸಲು ಯುವಕನೊಬ್ಬನನ್ನು ಇಳಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
     ಯಾವುದೇ ಪರಿಕರಗಳಿಲ್ಲದೇ ಯುವಕನನ್ನು ಮಲದ ಗುಂಡಿಗೆ ಇಳಿಸಲಾಗಿತ್ತು. ನಮ್ಮ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿ ಅದನ್ನು ತಡೆದಿದ್ದಾಗಿ ಮ್ಯಾನ್ಯುಯಲ್ ಸ್ಕಾೃವೆಂಜರ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್. ಉಚ್ಚಂಗೆಪ್ಪ ಸುದ್ದಿಗಾರರಿಗೆ ತಿಳಿಸಿದರು.
     ಮ್ಯಾನ್ಯುಯಲ್ ಸ್ಕಾೃವೆಂಜರ್ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ರ ಪ್ರಕಾರ ಮಲದ ಗುಂಡಿಗೆ ಇಳಿಸುವುದು ಅಪರಾಧವಾಗಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಕೆಲಸಕ್ಕೆ ಬಳಸಲಾದ ಯುವಕನಿಗೆ ಪರಿಹಾರ ನೀಡಬೇಕು. ಇದರ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
     ಎರಡು ತಿಂಗಳ ಹಿಂದೆ ನಗರದಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಆಗ ಮಲದ ಗುಂಡಿಗೆ ಇಳಿಸಲಾಗಿದ್ದ ವ್ಯಕ್ತಿ ಇತ್ತೀಚೆಗೆ ಮೃತಪಟ್ಟಿದ್ದಾಗಿ ತಿಳಿಸಿದರು. ಈ ರೀತಿಯ ಘಟನೆಗಳು ನಡೆಯದಂತೆ ಮಹಾನಗರ ಪಾಲಿಕೆಯವರು ಎಚ್ಚರ ವಹಿಸಬೇಕು. ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು ಎಂದು ಆಗ್ರಹಿಸಿದರು.
     ಸಂಘದ ಅಧ್ಯಕ್ಷ ಎನ್. ವಾಸುದೇವ್, ಉಪಾಧ್ಯಕ್ಷ ಎನ್. ಮಂಜುನಾಥ್, ಸದಸ್ಯ ಎಚ್. ಶ್ರೀನಿವಾಸ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts