More

    ಇಂದು ವಿಶ್ವ ಪುತ್ರಿಯರ ದಿನ: ಬಾಳಿನ ಕಣ್ಣು ಹೆಣ್ಣು

    ಒಂದು ಕಾಲಕ್ಕೆ ಹೆಣ್ಣು ಹುಟ್ಟುವುದೇ ತಪು್ಪ ಎನ್ನುವಂತಹ ವಾತಾವರಣ ಇತ್ತು. ಆದರೆ, ಇಂದು ತಮಗೂ ಹೆಣ್ಮಕ್ಕಳೇ ಆಗಲೀ ಎಂದು ಬಯಸುವವರಿದ್ದಾರೆ. ಹೆಣ್ಮಕ್ಕಳ ಸಾಧನೆಯನ್ನು ಕಂಡು ಹೆಮ್ಮಪಡುತ್ತಿದ್ದಾರೆ. ಇಂದು ವಿಶ್ವ ಪುತ್ರಿಯರ ದಿನದ ಅಂಗವಾಗಿ, ಹಿರಿತೆರೆ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ನಟಿಯರು, ತಾವು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದಾರೆ.

    ಹಲವು ವರ್ಷಗಳ ಹಿಂದೆ, ಹೆಣ್ಣು ಭ್ರೂಣ ಹತ್ಯೆ ಎಂಬ ಪಿಡುಗು ಸಮಾಜದಲ್ಲಿತ್ತು. ಇದೀಗ ಅದೆಲ್ಲವೂ ಕಡಿಮೆ ಆಗಿದೆ. ಮದುವೆಯೊಂದೇ ಅಂತಿಮ ಎನ್ನುವ ಬದಲು ಆಕೆಗೂ ಒಂದು ಭವಿಷ್ಯವಿದೆ. ಆಕೆಯೂ ಸಮಾನಳು, ಸಮಾಜದಲ್ಲಿ ಆಕೆಗೂ ಒಂದು ಸ್ಥಾನ ಸಿಗಬೇಕೆಂದು ಸಾಕಷ್ಟು ಮಂದಿ ಧ್ವನಿ ಎತ್ತುತ್ತಿದ್ದಾರೆ. ಪ್ರತಿ ಮನೆಯಲ್ಲಿಯೂ ಈ ರೀತಿ ಚರ್ಚೆಗಳು ನಡೆಯುತ್ತಿವೆ. ನಾನೂ ಒಂದು ಹೆಣ್ಣಾಗಿರುವುದರಿಂದ ಮನೆಯಲ್ಲಿ ನನ್ನ ಕೆಲಸದ ಬಗ್ಗೆ ಹೆಮ್ಮೆ ಇದೆ. ಅದನ್ನೇ ಜೋಪಾನವಾಗಿ ಕಾಯ್ದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ.

    | ಸಂಜನಾ ಆನಂದ್

    ನಾನು ಸಾಗಿ ಬಂದ ದಾರಿ ನೋಡಿ ಮನೆಯವರು ಹೆಮ್ಮೆ ಪಡುತ್ತಿದ್ದಾರೆ. ಸಂಬಂಧಿಕರೆಲ್ಲ, ನಿಮ್ಮನೆಗೆ ಇವಳು ಹುಡುಗಿ ಅಲ್ಲ ಬಿಡಿ, ಗಂಡು ಮಗ ಇದ್ದಂತೆ ಎನ್ನುತ್ತಾರೆ. ಆದರೆ, ಆ ಹೋಲಿಕೆ ನನಗೆ ಇಷ್ಟವಾಗುವುದಿಲ್ಲ. ಲಿಂಗ ತಾರತಮ್ಯ ಮಾಡುವುದೇಕೆ? ಹೆಣ್ಣು ಸಹ ಧೈರ್ಯವಂತೆ. ಆಕೆಯೂ ಸಾಧಕಿ. ನಾನು ಸ್ತ್ರೀವಾದಿ ಎಂದು ಹೇಳಿಕೊಳ್ಳುವುದಿಲ್ಲ. ಅದರ ಬದಲಿಗೆ ಮಾನವತಾವಾದಿ ಎಂದು ಹೇಳಿಕೊಳ್ಳುತ್ತೇನೆ. ಎಲ್ಲದರಲ್ಲೂ ಸಮಾನತೆ ಬಯಸುತ್ತೇನೆ. ಇಬ್ಬರಿಗೂ ಸಮಾನವಾದ ಗೌರವ ಸಿಗಬೇಕು. ಸಿನಿಮಾ ಇಂಡಸ್ಟ್ರಿಗೆ ಬಂದಾಗ ಆರಂಭದಲ್ಲಿ ಮನೆಯವರಿಗೆ ಭಯವಿತ್ತು. ಇದೀಗ ಯಾವ ಭಯವೂ ಇಲ್ಲ. ಕಲಿಯುತ್ತೇವೆ, ಏನಾದರೂ ಸಾಧಿಸುತ್ತೇವೆ ಎಂಬ ಛಲ ಇಟ್ಟುಕೊಂಡು ಬಂದರೆ ಎಲ್ಲವೂ ಸಾಧ್ಯ.

    | ರಂಜನಿ ರಾಘವನ್

    ಚಿಕ್ಕವಯಸ್ಸಿನಿಂದ ನನಗೂ, ನನ್ನಕ್ಕನಿಗೂ ಸ್ವಾತಂತ್ರ್ಯ ಇತ್ತು. ನಾವು ಯಾರಿಗೂ ಕಡಿಮೆ ಇಲ್ಲ ಎಂಬ ವಿಶ್ವಾಸವನ್ನು ಅಪ್ಪ-ಅಮ್ಮ ಕೊಟ್ಟಿದ್ದರಿಂದ ಆತ್ಮವಿಶ್ವಾಸ ಬಂತು. ನಗರಗಳಲ್ಲಿ ಹುಡುಗ-ಹುಡುಗಿ ಮಧ್ಯೆ ಅಂತರ ಕಡಿಮೆ ಆಗಿದೆ. ಹಾಗಂತ ಎಲ್ಲಾ ಕಡೆ ಅದೇ ರೀತಿ ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ಮಗ, ಮಗಳು ಇದ್ದಾಗ ಇಬ್ಬರನ್ನೂ ಬೇರೆ ರೀತಿ ನೋಡಿಕೊಳ್ಳಲಾಗುತ್ತದೆ. ಒಳ್ಳೆಯ ಉದ್ದೇಶದಿಂದ ಆದರೆ ಪರವಾಗಿಲ್ಲ. ಆದರೆ, ಮಗಳು ಹೊರೆ ಎಂಬ ಉದ್ದೇಶದಿಂದ ನೋಡುವುದು ತಪು್ಪ. ಹೆಣ್ಮಕ್ಕಳನ್ನು ರಕ್ಷಣೆ ಮಾಡುವುದಕ್ಕೆ ಯೋಚಿಸುವವರು, ಮಗನನ್ನು ಚೆನ್ನಾಗಿ ಬೆಳೆಸಿದರೆ ಮಗಳಿಗೆ ರಕ್ಷಣೆ ಬೇಕಾಗುವುದಿಲ್ಲ. ಹಾಗಾಗಿ ಗಂಡುಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದು ಬಹಳ ಮುಖ್ಯ.

    | ಶ್ರದ್ಧಾ ಶ್ರೀನಾಥ್

    ಗಂಧರ್ವರಿಗೆ ಹಾಡುವುದಕ್ಕೆ ಹೋದೆಯಾ? ಎಸ್​ಪಿಬಿಗೆ ಇಳಯರಾಜ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts