More

    ದತ್ತ ಜಯಂತಿಗ ಅರ್ಚಕರ ನೇಮಕ; ಹಿಂದು ಸಂಘಟನೆಗಳಿಂದ ಸಂಭ್ರಮಾಚರಣೆ

    ಚಿಕ್ಕಮಗಳೂರು: ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಹಚ್ಚಹಸುರಿನ ಧಾರ್ವಿುಕ ತಾಣ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದು, ಮುಸ್ಲಿಮರಿಬ್ಬರಿಗೂ ಅವಕಾಶ ಕಲ್ಪಿಸುವ ಮೂಲಕ 50 ವರ್ಷಗಳ ವಿವಾದಕ್ಕೆ ‘ಸೌಹಾರ್ದಯುತ ಪರಿಹಾರ’ ಮಾರ್ಗವನ್ನು ರಾಜ್ಯ ಸರ್ಕಾರ ಕಂಡುಕೊಂಡಿತ್ತು.

    ನ.30ರಂದು ಬಾಬಾಬುಡನ್​ ಗಿರಿಯ ದತ್ತಪೀಠದಲ್ಲಿ ಡಿಸೆಂಬರ್ 6, 7, 8 ರಂದು ದತ್ತ ಜಯಂತಿ ಆಚರಿಸಲು ಹೈಕೋರ್ಟ್​ ಅನುಮತಿ ನೀಡಿತ್ತು. ಇದೀಗ ದತ್ತಾತ್ರೇಯ ಪೀಠಕ್ಕೆ ಅರ್ಚಕರ ನೇಮಕ ಆಗಿದ್ದು ಹಿಂದು ಸಂಘಟನೆಗಳು ಸಂಭ್ರಮಿಸಿವೆ.

    ಇನಾಂ ದತ್ತಾತ್ರೇಯ ಪೀಠದಲ್ಲಿ ಅರ್ಚಕರ ನೇಮಕವಾಗಿದ್ದು. ವಿಎಚ್​ಪಿ, ಬಜರಂಗದಳ ಸಂಭ್ರಮಾಚರಣೆ ನಡೆಸಿವೆ. ನಗರದ ಆಜಾದ್ ಪಾರ್ಕ್​ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಎಚ್​ಪಿ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

    ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ದ ಸಂದೀಪ್ ಅರ್ಚಕರಾಗಿ ನೇಮಕರಾಗಿದ್ದಾರೆ. ಇವರನ್ನು ವ್ಯವಸ್ಥಾಪನ ಸಮಿತಿ ಶಿಫಾರಸು ಮೇರೆಗೆ ನೇಮಕ ಮಾಡಿತ್ತು. ಈಗ ಅರ್ಚಕರ ಸಮ್ಮುಖದಲ್ಲಿ ಈ ಬಾರಿ ದತ್ತಜಯಂತಿ ಫಿಕ್ಸ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts