More

    ದಸರಾ ಹುಲಿವೇಷಕ್ಕಿಲ್ಲ ಅವಕಾಶ

    ಮಂಗಳೂರು: ಈ ಬಾರಿಯ ದಸರಾ ಹಬ್ಬಕ್ಕೆ ಶಾರದಾ ಮೂರ್ತಿ ಸ್ಥಾಪಿಸಿದರೂ ಯಾವುದೇ ಸಭಾ-ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹುಲಿವೇಷ ತಂಡಕ್ಕೆ ಅವಕಾಶ ನೀಡದಿರಲು ಧಾರ್ಮಿಕ ಪರಿಷತ್ ನಿರ್ಣಯ ಕೈಗೊಂಡಿದೆ.
    ದಸರಾ ಹಬ್ಬದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕಾೃನಿಂಗ್, ಮಾಸ್ಕ್ ಕಡ್ಡಾಯಗೊಳಿಸಿ, ಜಾರಿಗೆ ತರಲು ಸ್ವಯಂಸೇವಕರನ್ನು ಬಳಸಿಕೊಳ್ಳಬೇಕು. ದೇವಸ್ಥಾನದ ಒಳಗೆ ಸಾಮಾಜಿಕ ಅಂತರದಲ್ಲಿ ಕುರ್ಚಿಗಳನ್ನು ಇರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮ ನೇರಪ್ರಸಾರ ಮಾಡುವುದು, ಯಾವುದೇ ದೊಡ್ಡ ಗಾತ್ರದ ಶಾಮಿಯಾನ, ಚಪ್ಪರ ಹಾಕಲು ಅವಕಾಶ ನೀಡದಂತೆ ದೇವಸ್ಥಾನಗಳಿಗೆ ಸೂಚಿಸುವುದು, ಹಬ್ಬದಲ್ಲಿ ಸಂತೆಗೆ ಅವಕಾಶ ನೀಡದಿರುವುದಕ್ಕೆ ತೀರ್ಮಾನಿಸಲಾಗಿದೆ.
    ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ.ಸೂರ್ಯ ಕಶೆಕೋಡಿ, ಸೂರ್ಯನಾರಾಯಣ ಭಟ್, ಹಾಗೂ ವಿವಿಧ ದೇವಸ್ಥಾನಗಳ ಆಡಳಿತ ಮುಖ್ಯಸ್ಥರು ಇದ್ದರು.

    ದೀಪಾವಳಿಗೆ ಪಟಾಕಿ ನಿಷೇಧ
    ಮುಂಬರುವ ದೀಪಾವಳಿ ಹಬ್ಬದಲ್ಲಿ ಸುಡುಮದ್ದು/ಪಟಾಕಿ ಶೇಖರಣೆ, ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರೂ ಆಗಿರುವ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts