More

    ಸುಳ್ಯ -ಮಡಿಕೇರಿ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ

    ಸುಳ್ಯ: ಧಾರಾಕಾರ ಮಳೆಗೆ ಮಾಣಿ-ಮೈಸೂರು ಹೆದ್ದಾರಿಯ ಕೊಯನಾಡು ಗಣಪತಿ ದೇವಾಲಯ ಬಳಿಯ ಸೇತುವೆ ಹಾಗೂ ಕೊಯನಾಡು -ದೇವರಕೊಲ್ಲಿ ಮಧ್ಯೆ ರಸ್ತೆಯಲ್ಲಿ ಭಾರಿ ಪ್ರಮಾಣದ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಸುಳ್ಯ -ಮಡಿಕೇರಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಡಾ.ಸತೀಶ್ ಆದೇಶ ಹೊರಡಿಸಿದ್ದಾರೆ.
    ನೀರಿನ ಸೆಳೆತದಿಂದ ಸುಳ್ಯ -ಮಡಿಕೇರಿ ರಸ್ತೆಯ ಕೊಯನಾಡಿನ ಗಣಪತಿ ದೇವಾಲಯ ಬಳಿಯಿರುವ ಸೇತುವೆಯ ಎರಡೂ ಬದಿಯ ಮಣ್ಣು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಳು ಚೀಲ ಇರಿಸಲಾಗಿದೆ. ಈ ರಸ್ತೆಯಲ್ಲೇ ಭಾರಿ ಗಾತ್ರದ ಲಾರಿ, ಟ್ಯಾಂಕರ್, ಕಂಟೇನರ್‌ಗಳ ಸಂಚಾರವನ್ನೂ ನಿಷೇಧಿಸಲಾಗಿದೆ. ಕೇವಲ ದ್ವಿಚಕ್ರ ವಾಹನ, ಕಾರು ಹಾಗೂ ಬಸ್‌ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗುರುವಾರ ಬೆಳಗ್ಗೆ ಸಂಪಾಜೆ ಗೇಟ್ ಬಳಿಯಲ್ಲಿ ಅನೇಕ ಘನ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts