More

    ಶಿವರಾತ್ರಿಗೆ ರಾಬರ್ಟ್: ಮಾ. 11ಕ್ಕೆ ಚಿತ್ರಮಂದಿರದಲ್ಲಿಯೇ ದರ್ಶನ

    ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರ ಏಪ್ರಿಲ್​ನಲ್ಲಿಯೇ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ರಾಬರ್ಟ್’ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಅದು ಈಡೇರಲಿಲ್ಲ. ಇತ್ತ ಅಭಿಮಾನಿ ವಲಯದಲ್ಲಿ ಸಿನಿಮಾ ಬಿಡುಗಡೆ ಯಾವಾಗ ಎಂಬ ಕಾಯುವಿಕೆ ಕಾಡುತ್ತಲೇ ಇತ್ತು. ಇದೀಗ ಅವೆಲ್ಲದಕ್ಕೂ ಉತ್ತರವೆಂಬಂತೆ ಬಿಡುಗಡೆ ದಿನಾಂಕವನ್ನು ದರ್ಶನ್ ಘೊಷಿಸಿಕೊಂಡಿದ್ದಾರೆ. ಮಾರ್ಚ್ 11ರ ಮಹಾಶಿವರಾತ್ರಿ ಪ್ರಯುಕ್ತ ‘ರಾಬರ್ಟ್’ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಕನ್ನಡದಲ್ಲಿ ಒಂದಾದ ಮೇಲೊಂದರಂತೆ ಸ್ಟಾರ್ ನಟರು ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಘೊಷಿಸಿಕೊಳ್ಳುತ್ತಿದ್ದಾರೆ. ಪುನೀತ್ ‘ಯುವರತ್ನ’ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆ ಆಗಲಿದ್ದರೆ, ಏಪ್ರಿಲ್ 23ಕ್ಕೆ ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ3’ ಚಿತ್ರ ತೆರೆಕಾಣಲಿದೆ. ಇದೀಗ ಮಾರ್ಚ್ 11ಕ್ಕೆ ದರ್ಶನ್ ಆಗಮಿಸಲಿದ್ದಾರೆ.

    ಈ ಸಲದ ಜನ್ಮದಿನ ಆಚರಣೆ ಇಲ್ಲ

    ಇನ್ನು ಫೆಬ್ರವರಿ 16ಕ್ಕೆ ದರ್ಶನ್ ಬರ್ತ್​ಡೇ. ಆ ದಿನಕ್ಕಾಗಿ ಈಗಿನಿಂದಲೇ ಸಾಕಷ್ಟು ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಆದರೆ, ಈ ಸಲ ಜನ್ಮದಿನ ಆಚರಣೆ ಇಲ್ಲ ಎಂದು ಸ್ವತಃ ದರ್ಶನ್ ಮನವಿ ಮಾಡಿದ್ದಾರೆ. ‘ನೀವು ನನಗಾಗಿ ಹಣ ಖರ್ಚು ಮಾಡುವ ಬದಲು, ಅದೇ ಹಣವನ್ನು ನಿಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳಿ. ಏಕೆಂದರೆ, 2020ರಲ್ಲಿ ನನ್ನನ್ನೂ ಸೇರಿಸಿ ಯಾರೂ ಕೆಲಸ ಮಾಡಿಲ್ಲ. ಯಾರ ಕೈಯಲ್ಲಿಯೂ ಹಣವಿಲ್ಲ. ಹಾಗಾಗಿ ನಿಮ್ಮ ಮನೆಯನ್ನು ಮೊದಲು ನೋಡಿ’ ಎಂದಿದ್ದಾರೆ ದರ್ಶನ್.

    ಓಟಿಟಿಗೂ ನಮಗೂ ಆಗಿಬರೋಲ್ಲ!

    ಬಹುವರ್ಷಗಳ ಬಳಿಕ ಫೇಸ್​ಬುಕ್ ಲೈವ್ ಬಂದ ದರ್ಶನ್ ಇತ್ತೀಚೆಗೆ ಟ್ರೆಂಡ್ ಆಗುತ್ತಿರುವ ಓಟಿಟಿ ಬಗ್ಗೆಯೂ ಮಾತನಾಡಿದ್ದಾರೆ. ‘ಸಿನಿಮಾದಲ್ಲಿ ಮೇಲಿಂದ ಬೀಳುತ್ತೇವೆ ಎಂಬುದನ್ನು ನಾವು ನೋಡುವುದಿಲ್ಲ. ಹಾಗೇ ಜಂಪ್ ಮಾಡಿದರೆ, ನಮಗೆಷ್ಟು ಕ್ಲಾಪ್ ಸಿಗುತ್ತದೆ ಎಂಬುದನ್ನು ನೋಡುತ್ತೇವೆ. ಆ ಕೆಲಸವನ್ನು ನೀವು ದೊಡ್ಡ ಪರದೆಯ ಮೇಲೆ ನೋಡುವುದನ್ನು ಬಿಟ್ಟು, ಮೊಬೈಲ್​ನಲ್ಲಿಯೋ ಟಿವಿಯಲ್ಲಿಯೋ ನೋಡಿದರೆ ಮಜ ಇರಲ್ಲ. ಎಲ್ಲ ಕಡೆಗೂ ಜನ ಇದ್ದಾರೆ. ಆದರೆ ಚಿತ್ರಮಂದಿರ ಮಾತ್ರ ಇನ್ನೂ ಪೂರ್ಣವಾಗಿ ತೆರೆದಿಲ್ಲ. ಇದರ ಹಿಂದೆ 5ಜಿ ಅನ್ನೋ ಮರ್ಮ ಇದೆ. ನಾವಂತೂ ನಮ್ಮ ಚಿತ್ರವನ್ನು ಓಟಿಟಿಗೆ ಕೊಡಲ್ಲ. ಶೇ. 25 ಆಸನ ವ್ಯವಸ್ಥೆ ನೀಡಿದರೂ ಚಿತ್ರಮಂದಿರಕ್ಕೇ ಬರುತ್ತೇವೆ’ ಎಂಬುದು ದರ್ಶನ್ ಮಾತು.

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts