More

    ನವಿಲು ಗರಿ ಹಾರ ಹಾಕಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ರಾ ದರ್ಶನ್ ಪುಟ್ಟಣ್ಣಯ್ಯ? ಪ್ರಾಣಿ ಪ್ರಿಯರಿಂದ ವ್ಯಕ್ತವಾಯ್ತು ಆಕ್ರೋಶ…

    ಮಂಡ್ಯ: ರೈತ ಸಂಘದ ಮುಖಂಡ, ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ ಆರೋಪ ಎದುಸರಿಸುತ್ತಿದ್ದು, ಬಂಧನದ ಭೀತಿ ಎದುರಾಗಿದೆ.

    ಜನಮನ ದರ್ಶನ, ಇದು ಭರವಸೆಯ ಯಾನ ಹೆಸರಿನಲ್ಲಿ ಕ್ಷೇತ್ರದಾದ್ಯಂತ ಪಾದಯಾತ್ರೆ ಮಾಡುತ್ತಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು, ಬೆಂಬಲಿಗರು ನವಿಲು ಗರಿಯಿಂದ ಸಿದ್ಧಗೊಂಡ ಹಾಕಿದ್ದರು. ಪಾಂಡವಪುರದ ವಿಶ್ವೇಶ್ವರಯ್ಯ ನಗರದಲ್ಲಿ ಬೃಹತ್ ನವಿಲು ಗರಿ ಹಾರ ಹಾಕಿಸಿಕೊಂಡು ದರ್ಶನ್ ಪುಟ್ಟಣ್ಣಯ್ಯ ಫೋಸ್ ನೀಡಿದ್ದರು.

    ಇದನ್ನೂ ಓದಿ: ದಶಪಥ ಹೆದ್ದಾರಿ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲ; ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ.ಸುರೇಶ್

    ನವಿಲು ಗರಿ ಹಾರ ಹಾಕಿಸಿಕೊಳ್ಳುವ ಮೂಲಕ ದರ್ಶನ್ ಪುಟ್ಟಣ್ಣಯ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಾಣಿ ಪ್ರಿಯರು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ದರ್ಶನ್ ಪುಟ್ಟಣ್ಣಯ್ಯ ನಡೆ ವಿರುದ್ಧ ಆಕ್ರೋಶ ಕೇಳಿ ಬಂದಿದೆ.

    ಹಾರ ಹಾಕಿಸಿಕೊಂಡ ದರ್ಶನ್ ಪುಟ್ಟಣ್ಣಯ್ಯ, ಹಾರ ಮಾಡಿಸಿ ಹಾಕಿದ ಬೆಂಬಲಿಗರಿಗೂ ಬಂಧನ ಭೀತಿ ಎದುರಾಗಿದೆ ಎಂದು ಹೇಳಲಾಗಿದೆ. ಚುನಾವಣೆಗಾಗಿ ಇತ್ತೀಚೆಗೆ ದರ್ಶನ್ ಅಮೇರಿಕಾದಿಂದ ವಾಪಸ್ಸಾಗಿದ್ದರು. Wildlife (Taxidermy) Rules 1973, section 3, 5, 2(e) ಪ್ರಕಾರ ನವಿಲು ಗರಿಯ ಹಾರ ಹಾಕಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಹಾರವನ್ನ ವಶಪಡಿಸಿಕೊಂಡು ಅರಣ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

    ಇದನ್ನೂ ಓದಿ: ಉರಿಗೌಡ – ದೊಡ್ಡ ನಂಜೇಗೌಡರ ಹೆಸರಿನ ತಾತ್ಕಾಲಿಕ ದ್ವಾರ ತೆರವುಗೊಳಿಸಿದ್ರೆ ಏನಾಯ್ತು? ನಾವು ಶಾಶ್ವತ ದ್ವಾರ ನಿರ್ಮಾಣ ಮಾಡ್ತೇವೆ; ಸಿ.ಟಿ.ರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts