More

    ಮೇಕಪ್​ ಮ್ಯಾನ್​ ಸಾವಿಗೆ ದರ್ಶನ್​ ಕಂಬನಿ

    ದರ್ಶನ್​ ಅವರ ಬಳಿ ಎರಡು ದಶಕಗಳಿಂದ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್​ ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.

    ಇದನ್ನೂ ಓದಿ: ಚಿತ್ರಮಂದಿರ ತೆರೆಯುವಿಕೆಗೆ ಗ್ರೀನ್​ ಸಿಗ್ನಲ್​!; ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನಾಂಕ ಯಾವುದು?

    ದರ್ಶನ್​ ಚಿತ್ರರಂಗಕ್ಕೆ ಬಂದಾಗಿನಿಂದಲೂ, ಶ್ರೀನಿವಾಸ್​ ಅವರಿಗೆ ಮೇಕಪ್​ ಮಾಡುತ್ತಿದ್ದರು. ಶ್ರೀನಿವಾಸ್​ ಅವರ ನಿಧನಕ್ಕೆ ದರ್ಶನ್​ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲ, ದರ್ಶನ್​ ಅವರ ಅಭಿಮಾನಿಗಳು ಸಹ ಸೋಷಿಯಲ್​ ಮೀಡಿಯಾದಲ್ಲಿ ಶ್ರೀನಿವಾಸ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾಥಿರ್ಸಿದ್ದಾರೆ.

    ಶ್ರೀನಿವಾಸ್​ ಸಾವಿನ ಕುರಿತು ಟ್ವೀಟ್​ ಮಾಡಿರುವ ದರ್ಶನ್​, ‘ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದಲ್ಲಿನ ರಿಷಿ ಕಪೂರ್ ಪೂರ್ವಜರ ಹವೇಲಿಗೆ ಎದುರಾಯ್ತು ಕಂಟಕ; ಭೂತ ಪ್ರೇತದ ವದಂತಿ!

    ದರ್ಶನ್​ ಅಭಿನಯದ ಹಲವು ಚಿತ್ರಗಳಲ್ಲಿ ಅವರಿಗೆ ಮೇಕಪ್​ ಮಾಡಿದ್ದ ಶ್ರೀನಿವಾಸ್​, ಬೇರೆ ಚಿತ್ರಗಳಿಗೂ ಕೆಲಸ ಮಾಡಿದ್ದರು. ಶ್ರೀಮುರಳಿ ಅಭಿನಯದ ‘ಮದಗಜ’ಕ್ಕೂ ಅವರು ಮೇಕಪ್​ ಕಲಾವಿದನಾಗಿ ಕೆಲಸ ಮಾಡಿದ್ದು, ಆ ಚಿತ್ರತಂಡ ಸಹ ಸಂತಾಪ ಸೂಚಿಸಿದೆ.

    VIDEO: ಶಿವಣ್ಣ ಬರ್ತ್​ಡೇಗೆ ಸಂಯುಕ್ತಾ ಹೆಗ್ಡೆ ಡಿಫರೆಂಟ್​ ವಿಶ್​ ಹೇಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts