More

    ನಾನು ಆಧುನಿಕ ಕೌರವ, ನಟ ದರ್ಶನ್​ ಪೌರಾಣಿಕ ಕೌರವ; ಸಚಿವ ಬಿ.ಸಿ. ಪಾಟೀಲ್​

    ಬೆಂಗಳೂರು: ನಟ ದರ್ಶನ್​ ಕಷ್ಟಪಟ್ಟು ಬೆಳೆದು ಇಡೀ ರಾಜ್ಯದಲ್ಲಿ ಅಭಿಮಾನಿಗಳ ದೊಡ್ಡ ಪಡೆಯನ್ನೇ ಕಟ್ಟಿದ್ದಾರೆ. ನಾವು ರಾಜಕೀಯ ಕಾರ್ಯಕ್ರಮಕ್ಕೆ ಜನರನ್ನು ಕರೆ ತರುತ್ತೇವೆ. ಆದರೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ದರ್ಶನ್ ಅವರ ‘ರಾಬರ್ಟ್’ ಸಿನಿಮಾದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಿದ್ದರು.
    – ಹೀಗೆಂದು ನಟ ದರ್ಶನ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು ಒಂದು ಕಾಲದಲ್ಲಿ ಚಿತ್ರನಟ, ನಿರ್ಮಾಪಕರೂ ಆಗಿದ್ದ, ಈಗ ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ್.

    ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿನ ಆ ಪಾತ್ರ ದರ್ಶನ್‌ಗಾಗಿ ಸೃಷ್ಟಿಸಿದಂತಿತ್ತು. ‘ಕುರುಕ್ಷೇತ್ರ’ ಸಿನಿಮಾದಲ್ಲಿ ದರ್ಶನ್ ಕೌರವನ ಪಾತ್ರ ಮಾಡಿದ್ದರು ಎಂದ ಬಿ.ಸಿ. ಪಾಟೀಲ್, ನನ್ನದು ಆಧುನಿಕ ಕೌರವನ ಪಾತ್ರ, ದರ್ಶನ್​ದು ಪೌರಾಣಿಕ ಕೌರವನ ಪಾತ್ರ ಎಂದು ಪಾತ್ರಗಳ ವ್ಯತ್ಯಾಸವನ್ನು ಹೇಳಿದರು. ರೈತರ ಮನೆಗೆ ನಾನು ನಿಮ್ಮ ಜೊತೆ ಬರುತ್ತೇನೆ ಎಂದು ದರ್ಶನ್​ ಹೇಳಿದ್ದರು. ಆಗ ಅದನ್ನು ನನಗೆ ನಂಬಲು ಆಗಿರಲಿಲ್ಲ. ಆದರೆ ಈಗ ಅವರು ಬಂದೇ ಬಿಟ್ಟಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ರಾಯಭಾರಿ ಆಗಿದ್ದಾರೆ. ಆದರೆ ದರ್ಶನ್​ ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ರಾಯಭಾರಿ ಆಗಿದ್ದಾರೆ ಎಂದು ಬಿ.ಸಿ. ಪಾಟೀಲ್​ ಶ್ಲಾಘಿಸಿದರು.
    ದರ್ಶನ್‌ ಹೃದಯ ಶ್ರೀಮಂತಿಕೆ ವರ್ಣನಾತೀತ. ಅವರು ಎಷ್ಟು ಎತ್ತರವಿದ್ದಾರೋ ಅಷ್ಟೇ ವಿಶಾಲ ಹೃದಯದವರು. ನಾನು ಫಾರ್ಮ್​ ಹೌಸ್​ಗೆ ಭೇಟಿ ನೀಡಿದ್ದೇನೆ. ಅಲ್ಲಿ ಅವರು 150 ಜನರಿಗೆ ಜೀವನ ಕೊಟ್ಟಿದ್ದಾರೆ. ಆ ಫಾರ್ಮ್​ ಒಂದು ಮಿನಿ ಝೂನಂತಿದೆ ಎಂದು ಕೃಷಿ ಸಚಿವ ಪಾಟೀಲ್​ ದರ್ಶನ್​ ಅವರನ್ನು ಪ್ರಶಂಸಿಸಿದರು.

    ನಾನು ಆಧುನಿಕ ಕೌರವ, ನಟ ದರ್ಶನ್​ ಪೌರಾಣಿಕ ಕೌರವ; ಸಚಿವ ಬಿ.ಸಿ. ಪಾಟೀಲ್​

    ರಾಜ್ಯ ಕೃಷಿ ಇಲಾಖೆಯ ರಾಯಭಾರಿ ಆಗಲು ಸಂಭಾವನೆ ಪಡೆಯದೇ ಒಪ್ಪಿಕೊಂಡ ನಟ ದರ್ಶನ್​ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧನ್ಯವಾದ ತಿಳಿಸಿದ್ದು, ಅವರ ಉದಾರತೆಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ದರ್ಶನ್​ ತಾವೇ ಒಂದು ಫಾರ್ಮ್​ ಹೌಸ್​ ಕೂಡ ಮಾಡಿ, ಅಲ್ಲಿನ ದುಡಿಮೆಯಲ್ಲೂ ಎತ್ತರಕ್ಕೆ ಬೆಳೆದಿದ್ದಾರೆ. ಇದೀಗ ಅವರು ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆಯ ರಾಯಭಾರಿ ಆಗಿದ್ದಾರೆ. ಅವರಿಗೆ ರಾಜ್ಯದ ಜನತೆ ಹಾಗೂ ಕೃಷಿಕರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಸಿಎಂ ಹೇಳಿದರು. ದರ್ಶನ್​ ಅವರ ಜನಪ್ರಿಯತೆ ಕುರಿತು ಇಲ್ಲಿ ಸೇರಿರುವ ಜನಸಮೂಹವನ್ನು ನೋಡಿದರೆ ಅರ್ಥವಾಗುತ್ತದೆ. ಇದೇ ಕಾರ್ಯಕ್ರಮವನ್ನು ವಿಧಾನ ಸೌಧದ ಮುಂಭಾಗದಲ್ಲಿ ಮಾಡಿದ್ದಿದ್ದರೆ 50 ಸಾವಿರ ಜನರು ಸೇರುತ್ತಿದ್ದರು ಎಂದು ದರ್ಶನ್​ ಜನಪ್ರಿಯತೆ ಕುರಿತು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

    ರೈತರ ಅನ್ನದಿಂದಲೇ ರಕ್ತ ಇರುವುದು. ಹೀಗಾಗಿ ನಮಗೂ ರೈತರಿಗೂ ನಡುವೆ ರಕ್ತಸಂಬಂಧವಿದೆ. ರಾಯಭಾರಿಯಾಗಿ ನಾನು ಕೃಷಿ ಇಲಾಖೆಯ ಸವಲತ್ತುಗಳ ಬಗ್ಗೆ ನಾಡಿನ ರೈತರಿಗೆ ತಿಳಿಸುತ್ತೇನೆ.
    |ದರ್ಶನ್​ ನಟ ಹಾಗೂ ರಾಜ್ಯ ಕೃಷಿ ಇಲಾಖೆ ರಾಯಭಾರಿ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನಟ ದರ್ಶನ್​ ಈಗ ಕರ್ನಾಟಕ ಕೃಷಿ ಇಲಾಖೆ ರಾಯಭಾರಿ; ಯಾವುದೇ ಸಂಭಾವನೆ ಪಡೆಯದೇ ಅಂಬಾಸಡರ್..

     

    VIDEO| ಹಾಟ್​ ಲುಕ್​ನಲ್ಲಿ ಸೊಂಟ ಕುಣಿಸಿದ್ದಾರೆ ಜೊತೆ ಜೊತೆಯಲಿ ಖ್ಯಾತಿಯ ಅನು! ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts