More

    ಕೊನೆಗೂ ಆ ಬಯೋಪಿಕ್ ಬರಲೇ ಇಲ್ಲ!

    ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಟ್ರೆಂಡ್ ಶುರುವಾಗುವುದಕ್ಕಿಂತ ಬಹಳ ವರ್ಷಗಳ ಮುಂಚೆಯೇ, ಕನ್ನಡದಲ್ಲೊಂದು ಬಯೋಪಿಕ್ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಅದು ಆಗ ಸಾಧ್ಯವಾಗಿರಲಿಲ್ಲ. ಆಮೇಲೆ ಪ್ರಯತ್ನಗಳಾದರೂ ಆ ಬಯೋಪಿಕ್ ತೆರೆಯ ಮೇಲೆ ಬರಲೇ ಇಲ್ಲ. ಇಷ್ಟಕ್ಕೂ ಆ ಬಯೋಪಿಕ್ ಯಾರದ್ದು ಅಂತೀರಾ? ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರದ್ದು.

    ಇದನ್ನೂ ಓದಿ: ಓಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ; ಮಲ್ಟಿಪ್ಲೆಕ್ಸ್ ಕಂಪನಿಗಳಿಗೆ ಶುರುವಾಯ್ತು ತಳಮಳ!

    ಮುತ್ತಪ್ಪ ರೈ ಅವರ ಪಾತ್ರ ಹಲವು ಚಿತ್ರಗಳಲ್ಲಿ ಬಂದಿದೆಯಾದರೂ, ಅವರ ಜೀವನವನ್ನಾಧರಿಸಿ ಯಾವುದೇ ಚಿತ್ರ ಇದುವರೆಗೂ ಬಂದಿಲ್ಲ. ಆದರೆ, ಇಂಥ ಪ್ರಯತ್ನಗಳು ಮಾತ್ರ ಕನ್ನಡ ಚಿತ್ರರಂಗದಲ್ಲಿ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಇಂಥದ್ದೊಂದು ಪ್ರಯತ್ನ ಮೊದಲ ಬಾರಿಗೆ ಆಗಿದ್ದು ಬಹುಶಃ 2004ರಲ್ಲಿ. ನಿರ್ಮಾಪಕ ಧನರಾಜ್ ಅವರು, ದರ್ಶನ್ ಅಭಿನಯದಲ್ಲಿ ಮುತ್ತಪ್ಪ ರೈ ಅವರ ಬಯೋಪಿಕ್ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವಿಷಯವಾಗಿ ಪಂಚತಾರಾ ಹೋಟೆಲ್‌ವೊಂದರಲ್ಲಿ ಪತ್ರಿಕಾಗೋಷ್ಠಿ ಸಹ ನಡೆದಿತ್ತು. ಆದರೆ, ಆ ನಂತರ ಚಿತ್ರ ಮುಂದುವರೆಯಲೇ ಇಲ್ಲ.

    ಅದಾಗಿ ಸುಮಾರು ಹತ್ತು ವರ್ಷಗಳ ನಂತರ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಅವರು ಮುತ್ತಪ್ಪ ರೈ ಅವರ ಬಯೋಪಿಕ್ ಮಾಡುವುದಕ್ಕೆ ಮುಂದಾದರು. ರೈ ಪಾತ್ರವನ್ನು ಸುದೀಪ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಚಿತ್ರಕ್ಕೆ ‘ಅಪ್ಪ’ ಎಂಬ ಟೈಟಲ್ ಇಡಲಾಗಿದೆ ಎಂದು ಸಾಕಷ್ಟು ಸುದ್ದಿಯೂ ಆಗಿತ್ತು. ಆ ನಂತರ ಏನಾಯಿತೋ ಗೊತ್ತಿಲ್ಲ, ಸುದೀಪ್ ಬದಲು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಭಿನಯದಲ್ಲಿ ಚಿತ್ರ ಪ್ರಾರಂಭವಾಯಿತು. ಮುತ್ತಪ್ಪ ರೈ ಅವರ ಬಿಡದಿ ಮನೆಯ ಬಳಿಯಲ್ಲೇ ಚಿತ್ರದ ಮುಹೂರ್ತ ಸಹ ನೆರವೇರಿತು. ಇನ್ನೇನು ಚಿತ್ರ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಚಿತ್ರ ನಿಂತೇ ಹೋದ ಸುದ್ದಿ ಬಂತು.

    ಇದನ್ನೂ ಓದಿ: ಕರೊನಾ ಹೊತ್ತಲ್ಲಿ ಚುನಾವಣೆ ವಿಷಯ ಪ್ರಸ್ತಾಪಿಸಿದ ಉಪೇಂದ್ರ!

    ಈ ಮಧ್ಯೆ, ‘ಚಕ್ರವರ್ತಿ’ ಚಿತ್ರದಲ್ಲಿನ ದರ್ಶನ್ ಅವರ ಪಾತ್ರವು ಮುತ್ತಪ್ಪ ರೈ ಅವರನ್ನೇ ಹೋಲುತ್ತದೆ ಎಂದು ಹೇಳಲಾಗಿತ್ತು. ಚಿತ್ರದ ನಾಯಕನ ಪಾತ್ರಕ್ಕೂ, ಮುತ್ತಪ್ಪ ರೈ ಅವರಿಗೂ ಕೆಲವು ಹೋಲಿಕೆಗಳಿದ್ದರೂ, ಅದೊಂದು ಕಾಲ್ಪನಿಕ ಕಥೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದರಿಂದ ಪ್ರಕರಣ ಅಲ್ಲಿಗೇ ಮುಗಿಯಿತು.

    ಹೀಗೆ ಹಲವು ಚಿತ್ರಗಳಲ್ಲಿ ಮುತ್ತಪ್ಪ ರೈ ಅವರನ್ನು ಹೋಲುವ ಪಾತ್ರಗಳಿದ್ದರೂ, ಅವರ ಅಧಿಕೃತ ಬಯೋಪಿಕ್ ಮಾತ್ರ ಇದುವರೆಗೂ ಬರಲೇ ಇಲ್ಲ.

    ರೈ ಸಿನಿಮಾ ಫಸ್ಟ್​ ಲುಕ್​ಗೇ ನಿಲ್ಲೋದಕ್ಕೆ ಬಚ್​ಕನಾ ಎಂಟ್ರಿ ಕಾರಣವಾಯಿತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts