More

    ದರ್ಗಾಶಿರೂರ ಗ್ರಾಪಂನಲ್ಲಿ ಅವ್ಯವಹಾರ

    ಆಳಂದ: ದರ್ಗಾಶಿರೂರ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಮತ್ತು ೧೫ನೇ ಹಣಕಾಸಿನಡಿ ನಡೆದ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೇರೂರ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ರಾಹುಲ್ ಪಾಟೀಲ್ ಮಾತನಾಡಿ, ಖಾತ್ರಿಯಡಿ ಕೆಲಸ ಸಿಗದೆ ಸಾಕಷ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಕೆಲಸ ಮಾಡದ ಮುಂಬೈ, ಪುಣೆಯಲ್ಲಿರುವ ಜನರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ನಮ್ಮ ಹೊಲ- ನಮ್ಮ ರಸ್ತೆ ಕಾಮಗಾರಿಗಳು ಯಂತ್ರಗಳಿಂದ ನಡೆಸಲಾಗುತ್ತಿದೆ. ಕಸ ವಿಲೇವಾರಿ ಘಟಕ ಗ್ರಾಮದಿಂದ ದೂರವಿರಬೇಕು. ಆದರೆ ಕೇರೂರಿನಲ್ಲಿ ಹಳ್ಳಿಯ ಬಳಿಯೇ ಘಟಕ ನಿರ್ಮಿಸಲಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮಸಭೆ ಮಾಡದೆ ಮನಸ್ಸಿಗೆ ಬಂದಂತೆ ಬೋಗಸ್ ಬಿಲ್ ಮಾಡಿ, ಕಳಪೆ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ದೂರಿದರು.

    ಬೆಳಗ್ಗೆ ೧೦ಕ್ಕೆ ಪ್ರತಿಭಟನೆ ಆರಂಭವಾಗಿದ್ದು, ಮಧ್ಯಾಹ್ನ ೨ಗಂಟೆವರೆಗೂ ನಡೆಯಿತು. ಸಿಬ್ಬಂದಿಯನ್ನು ಪ್ರತಿಭಟನಾಕಾರರು ಕಚೇರಿ ಒಳಗೆ ಬಿಡಲಿಲ್ಲ. ಬಳಿಕ ಪೊಲೀಸ್ ಸಿಬ್ಬಂದಿ ಮಾಳಪ್ಪ, ಕಾರ್ಯದರ್ಶಿ ಗುಂಡಪ್ಪ ಘಂಟೆ ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಕಚೇರಿ ಕೆಲಸಗಳು ಆರಂಭವಾದವು.

    ಗ್ರಾಪಂ ಸದಸ್ಯ ಜಗನ್ನಾಥ ಚನ್ನಗುಂಡ, ಪ್ರಮುಖರಾದ ಶ್ರೀಶೈಲ ಘಂಟೆ, ಮಲ್ಲಯ್ಯ ಸ್ವಾಮಿ, ಪರಮೇಶ್ವರ ಬ್ಯಾಗೇಳಿ, ಸೋಮನಾಥ ಸಿಂಗೆ, ಮಹಾದೇವ ಚನ್ನಗುಂಡ, ರಾಜಕುಮಾರ ಪಾಟೀಲ್ ನಿಂಗದಳ್ಳಿ, ಬಸವರಾಜ ಉದ್ದನಶೆಟ್ಟಿ, ಕಾಂತಪ್ಪ, ಜೈಭೀಮ, ಶಿವಾನಂದ ನೀಲೂರೆ, ಕಾಶೀನಾಥ, ನೀಲಕಂಠ, ಲಾಡಪ್ಪ, ದಶರಥ, ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts