More

    ಗಾಂಜಾ ಮಾರಾಟ, ರೌಡಿಸಂ ಮಟ್ಟ ಹಾಕುವುದು ಗುರಿ: ಎಸ್ಪಿ ಮಿಥುನ್‌ಕುಮಾರ್

    ಶಿವಮೊಗ್ಗ: ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ಮತ್ತು ಸೇವನೆ ಹಾಗೂ ರೌಡಿಸಂನ್ನು ಮಟ್ಟ ಹಾಕುವುದು ನನ್ನ ಗುರಿಯಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
    ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ಡಿಎಆರ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗಾಂಜಾವನ್ನು ನಿಯಂತ್ರಣಕ್ಕೆ ತರುವ ಕೆಲಸ ಆಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಗಾಂಜಾಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
    ರೌಡಿಪಟ್ಟಿಯಲ್ಲಿ ಇರುವವರು ಮತ್ತು ಪುಡಿ ರೌಡಿಗಳ ಮೇಲೆ ನಮ್ಮವರು ನಿಗಾ ಇರಿಸಲಿದ್ದು ರೌಡಿಸಂ ಹೆಚ್ಚಾಗುವುದಕ್ಕೆ ಆಸ್ಪದ ನೀಡುವುದಿಲ್ಲ. ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರ ಜತೆಗೆ ಮಾಧ್ಯಮಗಳ ಸಹಕಾರವೂ ಅವಶ್ಯವಾಗಿದೆ. ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಏನೇ ಮಾಹಿತಿಗಳಿದ್ದರೂ ನೇರವಾಗಿ ನನ್ನ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
    ಶಿವಮೊಗ್ಗ ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದುವರಿದ ಜಿಲ್ಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಸಣ್ಣಪುಟ್ಟ ಗಲಭೆಗಳು ಆಗಿರುವುದು ಗಮನದಲ್ಲಿದೆ. ಕೋಮುಗಲಭೆಗಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ನಡೆಯುವುದರಿಂದ ಈಗಲೇ ಅದರ ಬಗ್ಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಹೇಳುವುದು ಸರಿಯಲ್ಲ. ಅವಶ್ಯಕತೆ ಇದ್ದಾಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಎಎಸ್ಪಿ ಡಾ. ವಿಕ್ರಂ ಆಮ್ಟೆ, ಡಿವೈಎಸ್ಪಿ ಬಾಲರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts