More

    ಮಾದಕ ವಸ್ತುಗಳ ಸೇವನೆಯಿಂದ ಜೀವನ ಹಾಳು

    ನವಲಗುಂದ: ಯುವಜನತೆ ಮಾದಕ ವಸ್ತುಗಳು, ಮದ್ಯಪಾನ, ಗುಟ್ಖಾ ಸೇರಿ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಇದು ಅತ್ಯಂತ ಕಳವಳದ ಸಂಗತಿ ಎಂದು ಎಸ್​ಪಿ ಗೋಪಾಲ ಬ್ಯಾಕೋಡ ಹೇಳಿದರು.

    ಶುಕ್ರವಾರ ಪಟ್ಟಣ ಶ್ರೀ ಶಂಕರ ಮಹಾವಿದ್ಯಾಲಯ ಹಾಗೂ ಜನಸ್ನೇಹಿ ಪೊಲೀಸ್ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

    ನಿಮ್ಮ ಪಾಲಕರು ಕಷ್ಟ ಪಟ್ಟು ನಿಮ್ಮನ್ನು ದಡ ಸೇರಿಸಲು ಶ್ರಮವಹಿಸುತ್ತಿದ್ದಾರೆ ಎಂಬುದನ್ನು ಅರಿತು ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಸಲಹೆ ನೀಡಿರು.

    ಪ್ರಾಚಾರ್ಯ ಶ್ರೀನಿವಾಸ ಬಡಿಗೇರ ಮಾತನಾಡಿ, ಯುವಕರು ಯೋಗ, ಧ್ಯಾನ, ಪಠ್ಯ ಹಾಗೂ ಪಠ್ಯೇತರ ಚಟುವಟಿಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್​ಐ ಜಗನ್ನಾಥ ಭಟ್ರಳ್ಳಿ, ಕಾಲೇಜ್ ಸಿಬ್ಬಂದಿ ಜೆ.ಪಿ. ಲಮಾಣಿ, ಎ.ಜೆ. ಜಕ್ಕನಗೌಡರ, ಗುರು ಚಿಣಗಿ, ಆರ್.ಪಿ. ಚವ್ಹಾಣ, ಪಿ.ಜಿ. ಕೊಪ್ಪದ. ಎನ್​ಸಿಸಿ ವಿದ್ಯರ್ಥಿಗಳು ಇದ್ದರು. ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts