More

    ದೈಹಿಕ-ಮಾನಸಿಕ ಸಮತೋಲನ ಮತ್ತು ನೃತ್ಯಾಭ್ಯಾಸ

    ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅನೇಕ ಪಾಲಕರು ಪ್ರೇರಣೆ ನೀಡುತ್ತಾರೆ. ಸಂಗೀತ, ನೃತ್ಯ, ಚಿತ್ರಕಲೆಯಂತಹ ತರಗತಿಗಳಿಗೆ ಮಕ್ಕಳನ್ನು ಸೇರಿಸಿ ಅವರ ಬಹುಮುಖ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗುತ್ತಾರೆ. ಅಂತಹ ಕ್ರಿಯೆಗಳಿಂದಾಗಿ ಮಕ್ಕಳಲ್ಲಿ ಮಾನಸಿಕವಾಗಿ, ಶಾರೀರಿಕವಾಗಿ ಅನೇಕ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

    ಭಾರತೀಯ ಪರಂಪರೆಯಲ್ಲಿ ನೃತ್ಯ, ಸಂಗೀತ ಹಾಗೂ ಇನ್ನಿತರ ಕಲೆಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಉಪನಿಷತ್ತು, ವೇದ, ಪುರಾಣಗಳಲ್ಲಿಯೂ ಸಹ ಇವುಗಳ ಬಗ್ಗೆ ವಿಶ್ಲೇಷಣೆಯನ್ನು ನೀಡಲಾಗಿದೆ. ಪರಂಪರಾಗತವಾಗಿ ಅದನ್ನು ಬೆಳೆಸಿಕೊಂಡು ಬರಲಾಗುತ್ತಿದೆ. ನೃತ್ಯ ಮಾಡುವುದನ್ನು ಮಕ್ಕಳು ರೂಢಿಸಿಕೊಳ್ಳುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.

    ದೈಹಿಕ-ಮಾನಸಿಕ ಸಮತೋಲನ ಮತ್ತು ನೃತ್ಯಾಭ್ಯಾಸಮಕ್ಕಳು ನೃತ್ಯವನ್ನು ಇಷ್ಟಪಡುತ್ತಾರೆ. ಕಲೆಯ ಬಗೆಗೆ ಒಂದು ರೀತಿಯ ಬಾಂಧವ್ಯ ಬೆಳೆಯುತ್ತದೆ. ಇತರ ಮಕ್ಕಳೊಂದಿಗೆ ಹೊಂದಾಣಿಕೆಯನ್ನು ಕಲಿಯುತ್ತಾರೆ. ಒಂದು ವಿಧವಾದ ಶಿಸ್ತು ಅವರಲ್ಲಿ ಮೈದಳೆಯುತ್ತದೆ. ನೃತ್ಯ ತರಗತಿಗಳ ಅಧ್ಯಯನದ ಪ್ರಕಾರ ಶಿಸ್ತು ಹಾಗೂ ಕ್ರಮದಲ್ಲಿ ನೃತ್ಯ ಮಾಡುವುದರಿಂದ ಮಕ್ಕಳಲ್ಲಿ ಸಂವೇದನಾಶೀಲತೆ, ದೇಹದಲ್ಲಿ ಸೂಕ್ಷ್ಮತೆ, ಬೇಕಾದ ರೀತಿಯಲ್ಲಿ ಬಾಗುವುದು, ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಬಲ ಮತ್ತು ತ್ರಾಣಶಕ್ತಿಯೂ ವೃದ್ಧಿಯಾಗುತ್ತದೆ. ಪದೇಪದೆ ಸಂಚಲನೆಯಲ್ಲಿರುವ ದೇಹವ್ಯವಸ್ಥೆಯಿಂದ ಮಾಂಸಖಂಡಗಳ ಚಟುವಟಿಕೆ ಹೆಚ್ಚಾಗುತ್ತದೆ. ನಮ್ಮ ದೇಹದಲ್ಲಿ ಶಾರೀರಿಕವಾಗಿ ಯಾವುದಾದರೂ ಭಂಗಿಗಳನ್ನು ಮಾಡುವಲ್ಲಿ ಕೊರತೆ ಇದ್ದಲ್ಲಿ ಅದು ಸರಿಯಾಗುತ್ತದೆ. ದೇಹದಲ್ಲಿ ಸಮತೋಲನ, ಹೊಂದಾಣಿಕೆ ಹೆಚ್ಚಾಗುತ್ತದೆ. ಹೃದಯದ ಆರೋಗ್ಯಕ್ಕೆ ಸಹ ಬಹಳ ಒಳ್ಳೆಯದು. ನೃತ್ಯ ಒಂದು ರೀತಿಯ ಏರೋಬಿಕ್ಸ್ ವ್ಯಾಯಾಮ ಇದ್ದಂತೆ ಎಂಬುದು ತಜ್ಞರ ಅಭಿಪ್ರಾಯ. ಮಕ್ಕಳ ಅತಿ ತೂಕವನ್ನು ಹತೋಟಿ ಮಾಡಲು ಸಹಕಾರಿಯಾಗಬಲ್ಲದು.

    ‘ಫ್ಯಾಮಿಲಿ ಟಾಕ್’ ನಿಯತಕಾಲಿಕದ ಪ್ರಕಾರ – ನೃತ್ಯವು ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗಬಲ್ಲದು. ಅವರ ಮಿದುಳು ವೈಜ್ಞಾನಿಕವಾಗಿ ಹಾಗೂ ಗಣಿತದ ವಿಚಾರದಲ್ಲಿ ಬೆಳವಣಿಗೆ ಹೊಂದಲು ಪ್ರಯೋಜನಕಾರಿಯಾಗಬಲ್ಲದು. ಮಕ್ಕಳಲ್ಲಿ ಧನಾತ್ಮಕ ಭಾವನೆಗಳನ್ನು ಹೆಚ್ಚಿಸಬಲ್ಲದು. ಅದರಲ್ಲಿಯೂ ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಅಸಮತೋಲನದಲ್ಲಿರುವವರಿಗೆ ಸಾಧ್ಯವಾದಲ್ಲಿ ನೃತ್ಯವನ್ನು ಅಭ್ಯಾಸ ಮಾಡಿಸುವುದರಿಂದ ಅವರ ಭೌತಿಕ ಆರೋಗ್ಯದೊಂದಿಗೆ ಮಾನಸಿಕ ಸ್ಥೈರ್ಯವೂ ವೃದ್ಧಿಯಾಗಬಲ್ಲದು. ಬೇರೆಯವರ ಭಾವನೆಗಳಿಗೆ ಸ್ಪಂದಿಸುವ ಗುಣ ಮಕ್ಕಳಲ್ಲಿ ಮೂಡಬಲ್ಲದು. ಮಕ್ಕಳಲ್ಲಿ ಅರಿವು ಮೂಡಿ, ಸಾಮಾಜಿಕ ಪ್ರಜ್ಞೆ ಹೆಚ್ಚಾಗುತ್ತದೆ.

    ಪಠ್ಯೇತರ ಚಟುವಟಿಕೆಗಳಲ್ಲಿನ ಅಭಿವೃದ್ಧಿಯು ಮಕ್ಕಳನ್ನು ಪಠ್ಯ ಚಟುವಟಿಕೆಗಳ ಬೆಳವಣಿಗೆಗೂ ಸಹಕರಿಸಿ ಪರಿಪೂರ್ಣ ವಿಕಾಸಕ್ಕೆ ಅನುವು ಮಾಡಿಕೊಡುತ್ತದೆ. ಆಟದಿಂದ ಪಾಠ; ಜೊತೆಯಲ್ಲಿ ಇಷ್ಟಪಟ್ಟು ಕಷ್ಟವಾದುದನ್ನು ಕಲಿಸುವ ಗುರು ‘ಕಲೆ’ ಎಂದರೆ ತಪ್ಪಾಗಲಾರದು. ಮಕ್ಕಳು ಇಂಥ ಚಟುವಟಿಕೆಯಲ್ಲಿ ಸಾಧ್ಯವಾದಷ್ಟು ಪಾಲ್ಗೊಳ್ಳುವಂತೆ ಮಾಡಿ ಜವಾಬ್ದಾರಿಯುತ ಸಮಾಜ ರೂಪಿಸೋಣ. ಪ್ರಸ್ತುತ ಸಮಯದ ಸದ್ಬಳಕೆಗೆ ಈ ಮೂಲಕ ಪಾಲಕರು ಹಾಗೂ ಮಕ್ಕಳು ಮುಂದಾಗುವುದು ಎಲ್ಲ ನಿಟ್ಟಿನಲ್ಲಿ ಸರಿಯಾದುದು.

    ಪಾಕಿಸ್ತಾನದಲ್ಲೂ ಕರೊನಾ ವೈರಸ್​ ಸೋಂಕು ಹರಡಿದ ತಬ್ಲಿಘಿಗಳು: ಜಮಾತ್​ನಲ್ಲಿ ಪಾಲ್ಗೊಂಡಿದ್ದ 20 ಸಾವಿರ ಮಂದಿ ಕ್ವಾರಂಟೈನ್​ನಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts