More

    VIDEO| ಮುದ್ದಾದ ಮಗುವಿನ ನೃತ್ಯದ ವೀಡಿಯೊ ವೈರಲ್; ಆದರೆ ನೆಟ್ಟಿಗರ ಕಾಳಜಿಯೇ ಬೇರೆ, ನೀವೇನು ಹೇಳುತ್ತೀರಿ..?

    ಸಂಗೀತವೇ ಹಾಗೆ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿಬಿಡುತ್ತದೆ. ಇನ್ನು ಮುಗ್ಧ ಜನರ ಪಾಡೇನು ಹೇಳಿ?

    ಈ ವಿಡಿಯೋದಲ್ಲಿರುವ ಮಗು ನೋಡಿ. ಇಂತಹ ಮುಗ್ಧ ಕಂದಮ್ಮ ಕಾರಿನಲ್ಲಿ ಕೇಳಿಬರುತ್ತಿರುವ ಸಂಗೀತಕ್ಕೆ ತಲೆದೂಗುವ, ಮೈ ಕುಲುಕುವ ರೀತಿ ಯಾರನ್ನೂ ಮೋಡಿ ಮಾಡದೇ ಇರದು. ರೆಕ್ಸ್​ ಚಾಪ್​ ಮ್ಯಾನ್​ ಎಂಬುವವರು ಇದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

    ಇದು ಜೋನಸ್​ ಬ್ರದರ್ಸ್​ ಅವರು ಸಂಗೀತ ಸಂಯೋಜಿಸಿರುವ ಸಕ್ಕರ್​ ಆಲ್ಬಮ್​ನ ಓಲ್ಡ್​ ಟೌನ್​ ರೋಡ್​ ಎಂಬ ಗೀತೆಗೆ ಈ ಮಗು ತಲೆದೂಗಿರುವುದು. ಇದಕ್ಕೆ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಇದರ ಬಗ್ಗೆ ಇನ್ನು ಕೆಲವರು ಕಾಳಜಿಯ ಮಾತುಗಳನ್ನು ಹೇಳಿದ್ದಾರೆ.

    ಕಾರಿನಲ್ಲಿ ಬೇಬಿ ಸೀಟ್​ನಲ್ಲಿ ಕುಳಿತಿರುವ ಪುಟಾಣಿ, ಸೀಟ್​ ಬೆಲ್ಟ್​ ಹಾಕಿ ಕೊಂಡಿದೆ. ಆದರೆ ಅದು ಸಡಿಲವಾಗಿದ್ದು ಆ ಮಗು ಮೈದೂಗಲು ಅನುಕೂಲ ಮಾಡಿಕೊಟ್ಟಿದೆ. ಇದು ಒಳ್ಳೆಯದಲ್ಲ ಎಂಬುದು ಕೆಲವರ ಕಾಳಜಿ.

    “ಯಾರಾದರೂ ಆ ಪುಟಾಣಿಯ ಸೀಟ್​ ಬೆಲ್ಟ್​ನ್ನು ಬಿಗಿಗೊಳಿಸಿ” ಎಂದು ಕಮೆಂಟ್​ ಮಾಡಿದ್ದಾರೆ. ಏಕೆಂದರೆ ಅದು ಸುರಕ್ಷಿತವಲ್ಲ ಎನ್ನುವುದು ಅವರ ಅಭಿಪ್ರಾಯ.

    ಈ ಪುಟಾಣಿಗೆ ಅದೆಷ್ಟು ಸಂಗೀತದ ಮೋಹ ಇದೆ. ನನಗಿಂತ ಹೆಚ್ಚು ಸಂಗೀತದ ಪ್ರೀತಿ ಈಕೆಗೆ. ಮೂಗಿನ ಮೇಲೆ ಬೆರಳಿಡುವಷ್ಟು ಕ್ಯೂಟ್​” ಎಂದು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಓಹ್​ ಇದು ಕ್ಯೂಟ್​ಗಿಂತ ಹೆಚ್ಚಿನದು ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts