More

    ರೇಪ್​​ ಬಗ್ಗೆ ಹಾಸ್ಯ ಮಾಡಿರುವ ಈ ಜಾಹಿರಾತಿಗೆ ಭಾರೀ ಹಿನ್ನಡೆ! ಟ್ವಿಟ್ಟಿಗರಿಂದ ತರಾಟೆ

    ನವದೆಹಲಿ: ಏನೋ ಹೇಳಲು ಹೋಗಿ ಅತ್ಯಾಚಾರದ ಬಗ್ಗೆ ಅಪಹಾಸ್ಯ ಮಾಡಿರುವ ಈ ಜಾಹಿರಾತಿನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದ್ದು, ಸಂಸ್ಥೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಎರಡು ಜಾಹಿರಾತುಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.

    ಇದನ್ನು ವೀಕ್ಷಿಸಿದ ಟ್ವಿಟರ್​ ಬಳಕೆದಾರರು ಎಎಸ್​ಸಿಐ ಗೆ ಟ್ಯಾಗ್​ ಮಾಡಿ ದಯವಿಟ್ಟು ಇದರ ಪ್ರಸಾರಕ್ಕೆ ತಡೆಹಿಡಿಯಬೇಕೆಂದು ಮನವಿ ಮಾಡಿ ಅಭಿಯಾನವನ್ನೇ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಗೆ ನೊಟೀಸ್​​ ಜಾರಿ ಮಾಡಿದೆ.

    ಸಾರ್ವಜನಿಕರ ಹಿತಾಸಕ್ತಿ ಇಲ್ಲದ ಹಾಗೂ ಸಮಾಜದಲ್ಲಿ ಇನ್ನಷ್ಟು ಅತ್ಯಾಚಾರ ಪ್ರಕರಣಗಳಿಗೆ ಪ್ರಚೋದಿಸುವಂತಿರುವ ಈ ಜಾಹಿರಾತನ್ನು ಕೂಡಲೇ ಹಿಂಪಡೆಯಬೇಕೆಂದು ಅಡ್ವರ್ಟೈಸ್​​ಮೆಂಟ್​ ಸ್ಟಾಂಡರ್ಡ್​ ಆಫ್​ ಇಂಡಿಯಾ (ಎಎಸ್​ಸಿಐ) ಎಚ್ಚರಿಕೆ ನೀಡಿದೆ.

    ಶೂಟ್​​ ಎಂಬ ಹೆಸರಿನ ಬಾಡಿ ಸ್ಪ್ರೇ ಜಾಹಿರಾತು ಇದಾಗಿದ್ದು, ಇದರಲ್ಲಿ ಬಳಸಲಾಗಿರುವ ದೃಶ್ಯ ಹಾಗೂ ಪದಗಳು ಅತ್ಯಾಚಾರಕ್ಕೆ ಪ್ರೇರೇಪಿಸುವಂತಿದೆ. ಒಂದು ಜಾಹಿರಾತಿನಲ್ಲಿ ಕೋಣೆಯಲ್ಲಿ ಯುವಕ -ಯುವತಿ ಕುಳಿತಿರುತ್ತಾರೆ. ಇಲ್ಲಿ ನಾಲ್ವರು ಯುವಕರು ಬಂದು ಬಾಡಿ ಸ್ಪ್ರೇಯನ್ನು ಕೇಳುತ್ತಾರೆ. ಹಾಗೆ ಸೂಪರ್​ ಮಾರ್ಕೆಟ್​ನಲ್ಲಿ ಕೂಡ ಒಬ್ಬ ಯುವತಿಗೆ ನಾಲ್ವರು ಯುವಕರು ಬಾಡಿ ಸ್ಟ್ರೇ ಕೇಳುತ್ತಾರೆ. ಈ ಎರಡೂ ಜಾಹಿರಾತಿನಲ್ಲಿ ಬಳಸಿರುವ ಪದ ಅತ್ಯಾಚಾರಕ್ಕೆ ಪ್ರಚೋದಿಸುವಂತಿದೆ ಎಂಬುದು ಟ್ವಿಟ್ಟಿಗರ ಆರೋಪವಾಗಿದೆ. (ಏಜೆನ್ಸೀಸ್​)

    ಹೈದರಾಬಾದ್​​ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಟಿಆರ್​ಎಸ್​ ಮುಖಂಡನ ಪುತ್ರ ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts