More

    ಕ್ವಾರಂಟೈನ್ ಕೇಂದ್ರದಲ್ಲಿ ರಾತ್ರಿ ಭರ್ಜರಿ ನೃತ್ಯ ಪ್ರದರ್ಶನ; ಜಿಲ್ಲಾಡಳಿತ ಕೆಂಡಾಮಂಡಲ

    ಪಟನಾ: ಕ್ವಾರಂಟೈನ್​ನಲ್ಲಿ ಇರುವವರಿಗೆ ಸಮಯ ಕಳೆಯುವುದು ಕಷ್ಟವಾಗುತ್ತಿದೆ. ಊಟ-ತಿಂಡಿ, ಅಗತ್ಯ ವಸ್ತುಗಳೆಲ್ಲ ಅವರಿದ್ದಲ್ಲಿಗೇ ತಲುಪುತ್ತವೆ. ಆದರೆ ಕೆಲವು ಕಡೆ ಕ್ವಾರಂಟೈನ್​ನಲ್ಲಿ ಇದ್ದವರನ್ನು ಕಾಯುವುದೇ ದೊಡ್ಡ ಕಷ್ಟವಾಗಿಬಿಟ್ಟಿದೆ.

    ಒಳಗೆ ಬೇಸರ ಎನ್ನುತ್ತಾರೆ..ಕದ್ದು ಮುಚ್ಚಿ ಹೊರಹೋಗಲು ನೋಡುತ್ತಾರೆ, ಸುಮ್ಮನೆ ಹೊರಗೆ ಬಂದು ನಿಂತು ಆತಂಕ ಸೃಷ್ಟಿಸುತ್ತಿರುವ ಘಟನೆಗಳು ನಡೆಯುತ್ತಿವೆ.
    ಆದರೆ ಬಿಹಾರದ ಕರಖ್​ ಗ್ರಾಮದ ಕ್ವಾರಂಟೈನ್​ ಕೇಂದ್ರದಲ್ಲಿ ಇದೆಲ್ಲಕ್ಕೂ ಮೀರಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ.

    ಇದನ್ನೂ ಓದಿ: ನವವಿವಾಹಿತೆ ಆತ್ಮಹತ್ಯೆ; ನೋವಿನ ಕಾರಣವನ್ನು ತಂದೆ-ತಾಯಿಗೆ ಹೇಳಿದ್ದಳಾಕೆ…

    ಸಮಸ್ತಿಪುರ ಜಿಲ್ಲೆಯ ಕರಖ್​ ಗ್ರಾಮದಲ್ಲಿ ಕರೊನಾ ಸೋಂಕು ಶಂಕಿತರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆದರೆ ಸೋಮವಾರ ತಡರಾತ್ರಿ ಸ್ಥಳೀಯರೇ ಯಾರೋ ಒಂದು ಎಡವಟ್ಟು ಮಾಡಿದ್ದಾರೆ. ಹೊರಗಿನಿಂದ ಕೆಲವು ನೃತ್ಯಗಾರ್ತಿ (ಡ್ಯಾನ್ಸರ್​)ಯರನ್ನು ಕ್ವಾರಂಟೈನ್​ ಕೇಂದ್ರಕ್ಕೆ ಕರೆಸಿ ಅವರಿಂದ ನೃತ್ಯ ಪ್ರದರ್ಶನ ಏರ್ಪಡಿಸಿದ್ದಾರೆ. ಕೇಂದ್ರದಲ್ಲಿ ಇದ್ದವರೆಲ್ಲ ಕುಳಿತು ಡ್ಯಾನ್ಸ್ ವೀಕ್ಷಣೆ ಮಾಡಿದ್ದಾರೆ.

    ಈ ಬಗ್ಗೆ ಸ್ಥಳೀಯ ಹೆಚ್ಚುವರಿ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ಕ್ವಾರಂಟೈನ್​ ಕೇಂದ್ರದಲ್ಲಿ ಟಿವಿ ಕೂಡ ಇಟ್ಟಿದ್ದೇವೆ. ಅಲ್ಲಿದ್ದವರಿಗೆ ಮನವರಂಜನೆ ಸಿಗಲಿ ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇವೆ. ಆದರೆ ಅವರು ಹೊರಗಿನಿಂದ ಡ್ಯಾನ್ಸರ್ ಕರೆಸಿ ನೃತ್ಯ ಪ್ರದರ್ಶನ ಏರ್ಪಡಿಸಿದ್ದರು. ಇದು ನಿಯಮ ಉಲ್ಲಂಘನೆ. ಇಂಥದ್ದಕ್ಕೆಲ್ಲ ನಮ್ಮ ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ಸ್ವಯಂ ದೂರು ದಾಖಲಿಸಿಕೊಂಡು, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ಬೆನ್ನಲ್ಲೇ ಕೇಂದ್ರದಿಂದ ಹೊರಬಿತ್ತು ಸಮಾಧಾನಕರ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts