More

    ರಿಯಾಯಿತಿ ದರದಲ್ಲಿ ಕಡಲೆ ಬೇಳೆ, ಈರುಳ್ಳಿ ಮಾರಾಟ

    ಹುಬ್ಬಳ್ಳಿ : ಬೆಲೆ ಏರಿಕೆ ಬಿಸಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಹೊರೆ ತಪ್ಪಿಸಲು ’ಭಾರತ್ ದಾಲ್’ ಎಂಬ ಬ್ರಾಂಡ್​ನಲ್ಲಿ ಕೇಂದ್ರ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಕಡಲೆ ಬೇಳೆ ಮತ್ತು ಈರುಳ್ಳಿ ಮಾರಾಟ ಮಾರಾಟ ಆರಂಭಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.

    ದೀಪಾವಳಿ ಹಬ್ಬದ ಸಾಲಿನಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ದೀಪಾವಳಿ ಉಡುಗೊರೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೇಜಿಗೆ ಅಂದಾಜು 120 ರೂ. ಗಳಿಗೆ ಮಾರಾಟವಾಗುವ ಕಡಲೆ ಬೇಳೆಯನ್ನು ಕೇವಲ ಕೇಜಿಗೆ 1 ಕೆಜಿ ಪ್ಯಾಕ್​ಗೆ 60 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಪ್ರತಿ ಕೇಜಿಗೆ 80 ರೂ.ಗಳಿಗೆ ಮಾರಾಟವಾಗುತ್ತಿರುವ ಈರುಳ್ಳಿಯನ್ನು ಕೇಜಿಗೆ 25 ರೂ. ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಎರಡು ಹಾಗೂ ಧಾರವಾಡದಲ್ಲಿ ಒಂದು ಸಂಚಾರಿ ವಾಹನಗಳಲ್ಲಿ ಕಡಲೆ ಬೇಳೆ ಹಾಗೂ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ 1,153 ಕ್ವಿಂಟಾಲ್ ಕಡಲೆ ಬೇಳೆ ಮತ್ತು 176 ಕ್ವಿಂಟಾಲ್ ಈರುಳ್ಳಿ ಮಾರಾಟ ಮಾಡಲಾಗಿದೆ.

    ಕೇಂದ್ರ ಸರ್ಕಾರ ನಿತ್ಯ ಜೀವನಕ್ಕೆ ಅವಶ್ಯಕವಾಗಿ ಬೇಕಾಗಿರುವ ವಸ್ತುಗಳ ವಿತರಣೆ ಯೋಜನೆ ಆರಂಭ ಮಾಡಿದೆ ಎಂದು ತಿಳಿಸಿರುವ ಜೋಶಿ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ’ಭಾರತ್ ದಾಲ್’ ಬ್ರಾಂಡ್ ಯೋಜನೆಯನ್ನು ಅವಳಿ ನಗರದಲ್ಲಿಯೂ ಆರಂಭಿಸಿ ಸಂಚಾರಿ ವಾಹನಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದು ಹೇಳಿದ್ದಾರೆ.

    ಭಾರತ್ ದಾಲ್ ಅನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್​ನ (ನಾಫೆಡ್) ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts