More

    ದಲಿತರ ಮೇಲಿನ ಹಲ್ಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

    ಗಂಗಾವತಿ/ ಕನಕಗಿರಿ: ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ದಲಿತರ ಮೇಲಿನ ಹಲ್ಲೆ ಖಂಡಿಸಿ ದಸಂಸ ಪದಾಧಿಕಾರಿಗಳು ಗಂಗಾವತಿ, ಕನಕಗಿರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಗಂಗಾವತಿಯಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ತಾಲೂಕು ಕಾರ್ಯಕರ್ತರು ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಸಲ್ಲಿಸಿದರು. ಸಮಿತಿ ತಾಲೂಕು ಸಂಚಾಲಕ ಮರಿಸ್ವಾಮಿ ಛಲವಾದಿ ಮಾತನಾದಿ, ವಜ್ರಬಂಡಿಯಲ್ಲಿ ಅಸ್ಪೃಶ್ಯತೆ ಜೀವಂತವಾಗಿದ್ದು, ಪ್ರಶ್ನಿಸಲು ಹೋಗಿದ್ದ ದಲಿತರ ಮೇಲೆ ಸವರ್ಣಿಯರು ಹಲ್ಲೆ ನಡೆಸಿದ್ದಾರೆ. ದಲಿತ ಕೇರಿಗೆ ನುಗ್ಗಿ ದಾಂಧಲೆ ನಡೆಸಿದರಲ್ಲದೇ, ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಹಲ್ಲೆ ನಡೆಸಿದ 109 ಜನರನ್ನು ಕೂಡಲೇ ಬಂಧಿಸಬೇಕಿದ್ದು, ಹಲ್ಲೆಗೊಳಗಾದ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ದಲಿತ ಮೇಲೆ ಹೂಡಿರುವ ಸುಳ್ಳು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ತಿಮ್ಮಣ್ಣ ಮುಂಡಾಸ್ತ್, ಉಡಚಪ್ಪ ತಳಕಲ್, ವಿರುಪಾಕ್ಷಿ, ವೀರೇಶ ಈಳಿಗೇನೂರು, ಸೋಮಣ್ಣ ಕಲಕೇರಿ, ಗೋಪಾಲ ಚಿಕ್ಕಜಂತಕಲ್, ಯಂಕಣ್ಣ, ಹನುಮಂತಪ್ಪ, ಮಂಜನಾಥ ಇತರರಿದ್ದರು.

    ಕನಕಗಿರಿಯಲ್ಲಿ ಉಪತಹಸೀಲ್ದಾರ್ ವಿಶ್ವೇಶ್ವರಯ್ಯಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಪಾಮಣ್ಣ ಅಳಿಗನೂರ ಮಾತನಾಡಿದರು. ಸಮಿತಿ ಪಧಾಧಿಕಾರಿಗಳಾದ ನೀಲಕಂಠ ಬಡಿಗೇರ, ಸಣ್ಣ ಹನಮಂತಪ್ಪ ಹುಲಿಹೈದರ,ವೆಂಕಟೇಶ ಬಡಿಗೇರ, ಪಂಪಾಪತಿ ಜಾಲಿಹಾಳ, ಶಾಂತಪ್ಪ ಬಸರಿಗಿಡದ, ಕಂಟೆಪ್ಪ ಮ್ಯಾಗಡೆ ಇದ್ದರು.

    ದಲಿತರ ಮೇಲಿನ ಹಲ್ಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
    ಕನಕಗಿರಿಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಉಪತಹಸೀಲ್ದಾರ್ ವಿಶ್ವೇಶ್ವರಯ್ಯಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts