More

    ದಲಿತ ಮುಖಂಡನ ಕೊಲೆ ಪ್ರಕರಣ; 13 ಆರೋಪಿಗಳ ಬಂಧನ..

    ತುಮಕೂರು: ದಲಿತ ಮುಖಂಡ ಗುಬ್ಬಿಯ ನರಸಿಂಹಮೂರ್ತಿಯ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 13 ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ತುಮಕೂರು ಎಸ್​ಪಿ ರಾಹುಲ್​ಕುಮಾರ್​ ಶಹಾಪುರ್ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.

    ಗುಬ್ಬಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ, ಪಪಂ ಮಾಜಿ ಉಪಾಧ್ಯಕ್ಷ ಜಿ.ಸಿ.ನರಸಿಂಹಮೂರ್ತಿ ಅಲಿಯಾಸ್​ ಕುರಿ ಮೂರ್ತಿಯನ್ನು ಜೂ. 15ರ ಮಧ್ಯಾಹ್ನ ಗುಬ್ಬಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ.

    ಪ್ರಕರಣದಲ್ಲಿ ಏಳು ಮಂದಿ ನೇರವಾಗಿ ಕೊಲೆಯಲ್ಲಿ ಪಾಲ್ಗೊಂಡಿದ್ದರೆ, ಇನ್ನು 6 ಮಂದಿ ಆರೋಪಿಗಳು ಅವರಿಗೆ ಸಹಕರಿಸಿದ್ದಾರೆ. ಬಂಧಿತರಲ್ಲಿ ಒಟ್ಟು ಆರು ಜನ ಗುಬ್ಬಿ ಟೌನ್ ಆರೋಪಿಗಳು. ಒಬ್ಬ ರಾಮನಗರದವನಾಗಿದ್ದರೆ, ಮಂಡ್ಯ, ಮೈಸೂರು, ರಾಮನಗರ ಮೂಲದ ತಲಾ ಇಬ್ಬರು ಬಂಧಿತರಲ್ಲಿದ್ದಾರೆ.

    ಇದನ್ನೂ ಓದಿ: ಗುಬ್ಬಿ ಪಟ್ಟಣದಲ್ಲಿ ದಸಂಸ ಮುಖಂಡನ ಬರ್ಬರ ಹತ್ಯೆ: ಐವರನ್ನ ವಶಕ್ಕೆ ಪಡೆದ ಪೊಲೀಸರು

    ಬಂಧಿತರ ಪೈಕಿ ಕಿರಣ್, ರಾಜ, ಮಂಜು, ಅಭಿಷೇಕ್ ರೌಡಿಶೀಟರ್​ಗಳು. ನಯಾಜ್, ವೆಂಕಟೇಶ್, ಕೀರ್ತಿ, ಚಂದ್ರಶೇಖರ್, ಭರತ್, ಧೀರಜ್, ವೆಂಕಟೇಶ, ಬಸವರಾಜು, ನಾಗರಾಜು ಇತರ ಆರೋಪಿಗಳು.

    ನರಸಿಂಹಮೂರ್ತಿ ಹಾಗೂ ಪ್ರಮುಖ ಆರೋಪಿ ಕಿರಣ್ ಕಳೆದೆರಡು ವರ್ಷಗಳಿಂದ ಪರಿಚಯಸ್ಥರು. ಆದರೆ ಕಳೆದ ಕೆಲವು ದಿನಗಳಿಂದ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಭೂವಿವಾದ ಹಾಗೂ ಹಣದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

    ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts