More

    ದೃಢ ಮನಸ್ಸಿದ್ದರೆ ಬಯಸಿದ್ದೆಲ್ಲವೂ ಸಿಗಲಿದೆ ; ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಭಿಮತ

    ತುಮಕೂರು : ತುಮಕೂರು ವಿವಿ ಪ್ರಸಾರಾಂಗ ವತಿಯಿಂದ ಆಯೋಜಿಸಿದ್ದ 14ನೇ ದಲೈಲಾಮ ಅವರ ಕೃತಿ ‘ಕೈಂಡ್ನೆಸ್ ಕ್ಲಾರಿಟಿ ಆ್ಯಂಡ್ ಇನ್ಸೈಟ್’ ಇಂಗ್ಲಿಷ್ ಉಪನ್ಯಾಸಗಳ ಕನ್ನಡ ಅನುವಾದಿತ ಕೃತಿ ಕಾರುಣ್ಯ ಅನ್ನು ತುಮಕೂರು ವಿವಿ ಸಭಾಂಗಣದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

    ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದರ ಮೇಲೆ ಯಶಸ್ಸು ಅವಲಂಭಿಸಿರುತ್ತದೆ ಎಂದರು. ಪ್ರಸ್ತುತ ಜಗತ್ತಿನಲ್ಲಿ ಅಸಾಧ್ಯವಾಗಿರುವುದು ಮನುಷ್ಯನಿಗೆ ಯಾವುದೂ ಇಲ್ಲ, ಸತತ ಪ್ರಯತ್ನದ ಮೂಲಕ ಶ್ರಮವಹಿಸಿದರೆ ಬಯಸಿದ್ದೆಲ್ಲವನ್ನೂ ಸಾಧಿಸಲು ಸಾಧ್ಯವಿದೆ, ದೃಢ ಮನಸ್ಸಿನಿಂದ ಇದೆಲ್ಲವೂ ಸಾಧ್ಯ. ಎಲ್ಲರಿಗೂ ಪ್ರೇರಣೆಯಾಗುವ ಬಗ್ಗೆ ದಲೈಲಾಮ ಅವರು ನೀಡಿರುವ ಉಪನ್ಯಾಸಗಳು ಕನ್ನಡಕ್ಕೆ ಅನುವಾದವಾಗಿದ್ದು ಇದೊಂದು ಉಪಯುಕ್ತ ಕೃತಿ ಎನಿಸಿದೆ ಎಂದರು.

    ಮನುಷ್ಯ ಕೇಂದ್ರಿತ ಚಟುವಟಿಕೆಗಳೇ ತುಂಬಿರುವ ಪ್ರಸ್ತುತ ಜಗತ್ತಿನಲ್ಲಿ ಜೀವ ಕೇಂದ್ರಿತ ಚಟುವಟಿಕೆ ಆರಂಭವಾಗಬೇಕು, ದಲೈಲಾಮಾ ನೀಡಿದ ಜೀವನ ಸಂದೇಶಗಳು ನಮಗೆಲ್ಲಾ ಸಾರ್ವಕಾಲಿಕ ಮಾರ್ಗದರ್ಶಿ ಎನಿಸಿದೆ, ಮನುಷ್ಯ, ಪ್ರಕೃತಿ, ಪರಿಸರ ತಮ್ಮ ಒಟ್ಟು ಚಿಂತನೆಗಳು ಜೀವಕೇಂದ್ರಿತವಾಗಬೇಕು ಎಂಬುದು ಅವರ ಕೃತಿಯಲ್ಲಿರುವ ಆಶಯ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರ ಜಿ.ವೆಂಕಟೇಶ ಹೇಳಿದರು.

    ಎಲ್ಲೆಡೆಯೂ ಯಂತ್ರಗಳ ಅಬ್ಬರ ತಾಂಡವವಾಡುತ್ತಿದೆ, ಯಂತ್ರ ನಾಗರಿಕತೆ ಜೀವನಕ್ಕೆ ಒಂದು ಉಪಾಯವಾಗಬೇಕೆ ಹೊರತು ಅಪಾಯವಾಗಬಾರದು, ಎಲ್ಲರೂ ಈ ನಿಟ್ಟಿನಲ್ಲಿ ದಲೈಲಾಮ ಅವರ ಜೀವನ ಸಂದೇಶದ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದರು.

    ಸೆರಾ ಜೆ ಮೊನಾಸ್ಟಿಕ್ ವಿವಿ ಮುಖ್ಯ ಕಾರ್ಯದರ್ಶಿ ಗೀಶೆ ನವಾಂಗ್ ಝಾಂಗ್ ಫೋ, ಮಂತ್ರೋಕ್ತಿ ಮುಖ್ಯಸ್ಥ ಗೆಂಡೆನ್ ದರ್ಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃತಿ ಸಂಪಾದಕ ಪ್ರೊ.ಕೆ.ಜಿ.ಪರಶುರಾಮ್, ಪ್ರಸಾರಾಂಗ ನಿರ್ದೇಶಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಕುಲಸಚಿವ ಪ್ರೊ.ಬಿ.ಟಿ.ಸಂಪತ್‌ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts