More

    ದ.ಕ ಜಿಲ್ಲೆಯಲ್ಲಿ 428 ಪಾಸಿಟಿವ್

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಶುಕ್ರವಾರ ಏಳು ಸಾವು ಸೇರಿದಂತೆ 428 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.
    227 ಮಂದಿಯಲ್ಲಿ ಸೋಂಕಿನ ಲಕ್ಷಣಗಳಿದ್ದರೆ 201 ಮಂದಿಯಲ್ಲಿ ಯಾವುದೇ ಲಕ್ಷಣಗಳಿಲ್ಲ. ಮಂಗಳೂರು ತಾಲೂಕೊಂದರಲ್ಲೇ 222 ಮಂದಿಗೆ ಪಾಸಿಟಿವ್ ಆಗಿದ್ದರೆ, ಬಂಟ್ವಾಳ 61, ಪುತ್ತೂರು 54, ಸುಳ್ಯ 45, ಇತರ ಜಿಲ್ಲೆಯ 18 ಮಂದಿಯಲ್ಲೂ ಸೋಂಕು ಕಂಡುಬಂದಿದೆ. ಒಟ್ಟು 222 ಮಂದಿ ಸೋಂಕು ಮುಕ್ತರಾಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 10,928ಕ್ಕೇರಿದೆ. ಒಟ್ಟು ಪಾಸಿಟಿವ್ ಸಂಖ್ಯೆ 14223 ತಲುಪಿದ್ದರೆ ಸಕ್ರಿಯ ಪ್ರಕರಣಗಳು 2904 ಇವೆ. ಒಟ್ಟು ಸಾವಿನ ಸಂಖ್ಯೆ 391ಕ್ಕೇರಿದೆ.

    ಉಡುಪಿ 186 ಮಂದಿಗೆ ಸೋಂಕು
    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 186 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಇಬ್ಬರು ಹಿರಿಯ ನಾಗರಿಕರಿಗೆ ಕೋವಿಡ್ ದೃಢಪಟ್ಟಿದೆ. ಸಾವಿನ ಸಂಖ್ಯೆ 108ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 12,329ಕ್ಕೆೆ ಏರಿಕೆಯಾಗಿದೆ. 1,172 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 247 ಮಂದಿಯ ವರದಿ ಬರಲು ಬಾಕಿ ಇದೆ. 1967 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಕಾಸರಗೋಡಲ್ಲಿ 236
    ಕಾಸರಗೋಡು: ಜಿಲ್ಲೆಯ 236 ಮಂದಿ ಸೇರಿ ಕೇರಳದಲ್ಲಿ ಶುಕ್ರವಾರ 2479 ಮಂದಿಗೆ ಕೋವಿಡ್-19 ತಗುಲಿದೆ. ಕಾಸರಗೋಡು ಮಂಜೇಶ್ವರ ನಿವಾಸಿ ಒಳಗೊಂಡಂತೆ ಕೋವಿಡ್ ಬಾಧಿಸಿ ರಾಜ್ಯದಲ್ಲಿ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 326ಕ್ಕೇರಿದೆ. ಕಾಸರಗೋಡು ಜಿಲ್ಲೆಯ 72 ಮಂದಿ ಸಹಿತ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ 2716ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts