More

    ದ.ಕ. ಜಿಲ್ಲೆಯಲ್ಲಿ ಸೋಂಕಿತರು 10 ಸಾವಿರ ಸನಿಹ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ 10 ಸಾವಿರ ಸಮೀಪಿಸುತ್ತಿದೆ.
    ಬುಧವಾರ 234 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣ 9535ಕ್ಕೇರಿದೆ. ಬುಧವಾರ ನಾಲ್ವರ ನಿಧನದೊಂದಿಗೆ ಕರೊನಾಗೆ ಬಲಿಯಾದವರ ಸಂಖ್ಯೆ 290 ತಲಪಿದೆ.
    ಐಎಲ್‌ಐ ಹೊಂದಿದ್ದ 104 ಮಂದಿ, ಸಂಪರ್ಕವೇ ಪತ್ತೆಯಾಗದ 76 ಮಂದಿ, ಪ್ರಾಥಮಿಕ ಸಂಪರ್ಕದಿಂದ 35 ಮಂದಿ, ತೀವ್ರ ಉಸಿರಾಟ ತೊಂದರೆ ಇದ್ದ 18 ಮಂದಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು 10 ಸಾವಿರ ಪ್ರಕರಣವಿದ್ದರೂ ಅದರಲ್ಲಿ ಸಕ್ರಿಯ ಇರುವುದು 2,303 ಮಾತ್ರ ಎನ್ನುವುದು ಸಮಾಧಾನಕರ ಅಂಶ. ಬುಧವಾರ 115 ಮಂದಿ ವಿವಿಧ ಆಸ್ಪತ್ರೆ, ಹೋಮ್ ಐಸೊಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಒಟ್ಟು ಸಂಖ್ಯೆ 6942 ಆಗಿದೆ.

    ಉಡುಪಿಯಲ್ಲಿ 1608 ನೆಗೆಟಿವ್
    ಉಡುಪಿ: ಜಿಲ್ಲೆಯಲ್ಲಿ ಬುಧವಾರ 375 ಮಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು 1608 ಮಂದಿಯ ವರದಿ ನೆಗೆಟಿವ್ ಬಂದಿದೆ. 700 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ.
    ಉಡುಪಿಯಲ್ಲಿ 215, ಕುಂದಾಪುರದಲ್ಲಿ 131, ಕಾರ್ಕಳದಲ್ಲಿ 27 ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ತಗುಲಿದೆ. ಇದರಲ್ಲಿ 99 ಮಂದಿ ರೋಗ ಲಕ್ಷಣ ಹೊಂದಿದ್ದು, 276 ಮಂದಿಯಲ್ಲಿ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 93 ಮಂದಿಗೆ, ಹೋಂ ಐಸೋಲೇಶನ್‌ನಲ್ಲಿ 282 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1597 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 111 ಮಂದಿ ಆಸ್ಪತ್ರೆಗಳಿಂದ, 70 ಮಂದಿ ಹೋಂ ಐಸೋಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2831 ಸಕ್ರಿಯ ಪ್ರಕರಣಗಳಿದ್ದು, 1303 ಆಸ್ಪತ್ರೆಯಲ್ಲಿ , 1528 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾಸರಗೋಡಿನ 174 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 174 ಮಂದಿ ಸೇರಿದಂತೆ ಕೇರಳದಲ್ಲಿ 2,333 ಮಂದಿಯಲ್ಲಿ ರೋಗ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಬುಧವಾರ ಏಳು ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರೋಗಬಾಧಿತರಲ್ಲಿ 60 ಮಂದಿ ವಿದೇಶದಿಂದ, 98 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಒಟ್ಟು 2151 ಮಂದಿಗೆ ಸಂಪರ್ಕದಿಂದ ರೋಗ ತಗುಲಿದ್ದು, ಇವರಲ್ಲಿ 53 ಮಂದಿಯ ಸಂಪರ್ಕ ಮೂಲ ಪತ್ತೆ ಸಾಧ್ಯವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts