More

    ರೈತರಿಗೆ ಹೈನುಗಾರಿಕೆ ವರದಾನ

    ಕಲಘಟಗಿ: ಇಂದಿನ ದಿನಗಳಲ್ಲಿ ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಪ್ರಮುಖ ಕಸುಬಾಗಿ ಲಕ್ಷಾಂತರ ರೈತರಿಗೆ ಆದಾಯದ ಮೂಲವಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಗೀತಾ ಮರಲಿಂಗಣ್ಣವರ ಹೇಳಿದರು. ತಾಲೂಕಿನ ಬಗಡಗೇರಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಂಘ 2022-23ನೇ ಸಾಲಿನಲ್ಲಿ 6,31,000 ರೂಪಾಯಿ ನಿವ್ವಳ ಲಾಭ ಗಳಿಸಿದೆ. 2021-22ನೇ ಸಾಲಿನ ಬೋನಸ್ 2,51,000 ರೂ.ಗಳನ್ನು ಹಾಲು ಉತ್ಪಾದಕರಿಗೆ ಶೀಘ್ರದಲ್ಲಿ ನೀಡಲಾಗುವುದು. ಕಳೆದ ಸಾಲಿನಲ್ಲಿ ಸಂಘಕ್ಕೆ ಹಾಲು ಪೂರೈಸಿದ 163 ಸದಸ್ಯರಿಗೆ ಕ್ಯಾನ್ ವಿತರಿಸಲಾಯಿತು ಎಂದರು. ಉಪಾಧ್ಯಕ್ಷೆ ಮಲ್ಲವ್ವ ಇಂದೂರ, ನಿಂಗವ್ವ ಹೊನ್ನಿಹಳ್ಳಿ, ವಿಜಯಲಕ್ಷ್ಮೀ ನೀಲಣ್ಣವರ, ರೇಣವ್ವ ಕುಂದಗೋಳ, ಮಹಾದೇವಿ ಬಾರಕೇರ, ಸಾವಕ್ಕ ಮಳಲಿ, ಸರೋಜಾ ಹರಿಜನ, ಜನ್ನತಬಿ ತಡಸ, ಸುರೇಶ ನೀಲಣ್ಣವರ, ಸೋಮಣ್ಣ ಕುಂದಗೋಳ, ಚನಬಸಪ್ಪ ಹೊನ್ನಿಹಳ್ಳಿ, ದಾವಲಸಾಬ್ ಹುಲಮನಿ, ಬಸಪ್ಪ ಮಳಲಿ ಇದ್ದರು. ನಿವೇದಿತಾ ಹೊನ್ನಿಹಳ್ಳಿ ಪ್ರಾರ್ಥಿಸಿದರು, ಎಸ್.ಎಸ್. ಮರಲಿಂಗಣ್ಣವರ ವರದಿ ವಾಚಿಸಿದರು. ಸುರೇಶ ಮರಲಿಂಗಣ್ಣವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts