More

    ಈ ರಾಶಿಯವರಿಗಿಂದು ಪ್ರೀತಿ-ಪ್ರೇಮದಲ್ಲಿ ತೊಂದರೆ: ನಿತ್ಯಭವಿಷ್ಯ

    ಮೇಷ: ಆಧ್ಯಾತ್ಮಿಕ ಚಿಂತನೆ. ಧರ್ಮಕಾರ್ಯದಲ್ಲಿ ವಿಶೇಷ ಆಸಕ್ತಿ ತಾಳುವಿರಿ. ದೂರ ಪ್ರಯಾಣ ಸಾಧ್ಯತೆ. ದಾಂಪತ್ಯದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 6

    ವೃಷಭ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ. ವಕೀಲರಿಗೆ ವಿಶೇಷ ದಿನ. ಅಡೆತಡೆಗಳಿಂದ ಕಾರ್ಯ ಜಯ. ಆರ್ಥಿಕ ಅನುಕೂಲ. ಶುಭಸಂಖ್ಯೆ: 3

    ಮಿಥುನ: ಉದ್ಯೋಗ ಅರಸಿ ಬರಲಿದೆ. ಪ್ರೀತಿ-ಪ್ರೇಮದಲ್ಲಿ ತೊಂದರೆ. ಮಕ್ಕಳ ನಡವಳಿಕೆಯಿಂದ ಬೇಸರ. ಆರ್ಥಿಕ ಸ್ಥಿತಿ ಮಂದಗತಿ. ಶುಭಸಂಖ್ಯೆ: 9

    ಕಟಕ: ಆಸ್ತಿ ತೊಂದರೆಗಳು. ತಂದೆಯಿಂದ ಸಹಾಯ. ವೈದ್ಯಕೀಯ ವೃತ್ತಿಯಲ್ಲಿ ಕೀರ್ತಿ. ಸಾಲ ಮಾಡುವಿರಿ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ:3

    ಸಿಂಹ: ಕೋರ್ಟ್​ಗೆ ಅಲೆದಾಟ. ಸೋಲು ನಷ್ಟ ನಿರಾಸೆಗಳು. ನೆರೆಹೊರೆಯವರಿಂದ ತೊಂದರೆ. ಮಕ್ಕಳಿಂದ ಎಡ ವಟ್ಟುಗಳು. ಸ್ತ್ರೀಯರಿಗೆ ಆಸ್ತಿ ಲಾಭ. ಶುಭಸಂಖ್ಯೆ: 3

    ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆ. ಆರ್ಥಿಕ ಚೇತರಿಕೆ. ಮಾತಿನಿಂದ ತೊಂದರೆ. ಕುಟುಂಬ ಕಲಹ. ಮಗಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 5

    ತುಲಾ: ಸ್ವಯಂಕೃತ ಅಪರಾಧಗಳು.ಉಡಾಫೆತನದಿಂದ ಅಮೂಲ್ಯ ವಸ್ತು ನಷ್ಟ. ವಿದ್ಯಾಭ್ಯಾಸದಲ್ಲಿ ಸೋಮಾರಿ ತನ.ಅಧ್ಯಾತ್ಮದತ್ತ ಒಲವು.ಶುಭಸಂಖ್ಯೆ: 1

    ವೃಶ್ಚಿಕ: ದುಃಸ್ವಪ್ನಗಳು. ದೈವ ಚಿಂತನೆ. ಆಧ್ಯಾತ್ಮಿಕ ಖರ್ಚುಗಳು. ಮಕ್ಕಳಲ್ಲಿ ಮಂದತ್ವ. ರಹಸ್ಯ ಯೋಜನೆಗಳು ಕಾರ್ಯಗತ. ಶುಭಸಂಖ್ಯೆ: 3

    ಧನುಸ್ಸು: ಯಂತ್ರೋಪಕರಣಗಳ ವ್ಯವಹಾರದಲ್ಲಿ ಎಳೆದಾಟ. ಗುಪ್ತ ಧನಾಗಮನ. ಆರೋಗ್ಯದಲ್ಲಿ ಚೇತರಿಕೆ. ಸ್ಥಿರಾಸ್ತಿ ವಾಹನ ಯೋಗ. ಶುಭಸಂಖ್ಯೆ:8

    ಮಕರ: ಉದ್ಯೋಗದಲ್ಲಿ ನಿರಾಸಕ್ತಿ. ಪ್ರಯಾಣ. ಕುಟುಂಬದಿಂದ ಅಂತರ. ಕಾಲೇಜು ಉಪನ್ಯಾಸಕರಿಗೆ ಅಧಿಕ ಒತ್ತಡ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 6

    ಕುಂಭ: ಹೈನುಗಾರಿಕೆಯಲ್ಲಿ ನಷ್ಟ. ಕೃಷಿಕರಿಗೆ ಲಾಭ. ತಂದೆಯ ಆರೋಗ್ಯ ವ್ಯತ್ಯಾಸ. ಪ್ರಯಾಣ ವಿಘ್ನ. ಉನ್ನತ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ:7

    ಮೀನ: ಆಕಸ್ಮಿಕ ಅವಘಡಗಳು. ಸ್ವಯಂಕೃತ ಅಪರಾಧದಿಂದ ನಷ್ಟ, ನಿರಾಸೆ. ಅಪರಿಚಿತ ಮಹಿಳೆಯರಿಂದ ಮೋಸ ಹೋಗುವಿರಿ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts