More

    ಈ ರಾಶಿಯವರಿಗಿಂದು ಶುಭದಾಯಕ ದಿನ: ನಿತ್ಯಭವಿಷ್ಯ

    ಮೇಷ: ದಾಂಪತ್ಯ ಕಲಹ ಸಾಧ್ಯತೆ. ಸಮಾಧಾನದಿಂದಿರಿ. ಮಕ್ಕಳ ವಿಷಯದಲ್ಲಿ ಸಂತಸದ ಕ್ಷಣಗಳು. ಶಿಕ್ಷಕರಿಗೆ ಉತ್ತಮ ಫಲ. ಶುಭಸಂಖ್ಯೆ: 9

    ವೃಷಭ: ಅಧಿಕಾರಿಗಳಿಂದ ಪ್ರಶಂಸೆ ಲಭಿಸಲಿದೆ. ಆಭರಣ ವ್ಯಾಪಾರಿಗಳಿಗೆ ಶುಭದಾಯಕ ದಿನ. ವೇದಾಂತ ಅಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 5

    ಮಿಥುನ: ಅತಿಯಾದ ಪ್ರಯಾಣ ಮಾಡುವ ಅನಿವಾರ್ಯತೆ. ಸಾಲ ಮರುಪಾವತಿಯಾಗಿ ನಿರಾಳರಾಗುವಿರಿ. ವಿವಾಹ ಪ್ರಯತ್ನದಲ್ಲಿ ಯಶ. ಶುಭಸಂಖ್ಯೆ: 2

    ಕಟಕ: ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ ಹೊರಬೇಕಾಗುವುದು. ಪ್ರಯಾಣದಿಂದ ಅಧಿಕ ವೆಚ್ಚವಾಗುವ ಸಾಧ್ಯತೆ. ಮಾನಸಿಕ ಅಶಾಂತಿ. ಶುಭಸಂಖ್ಯೆ: 7

    ಸಿಂಹ: ಅಧ್ಯಾತ್ಮದತ್ತ ಒಲವು ಜಾಸ್ತಿಯಾಗುವುದು. ಅಭ್ಯಾಸದಿಂದ ಜ್ಞಾನ ಸಂಪಾದನೆ. ಗಣ್ಯವ್ಯಕ್ತಿಗಳ ಭೇಟಿಯಿಂದ ಸಂತಸಪಡುವಿರಿ. ಶುಭಸಂಖ್ಯೆ: 1

    ಕನ್ಯಾ: ಬಂಧುಗಳಿಂದ ವಿರೋಧ ಎದುರಿಸಬೇಕಾದೀತು. ಸಹೋದರರ ಕಲಹ ವಿಕೋಪಕ್ಕೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ. ಶುಭಸಂಖ್ಯೆ: 3

    ತುಲಾ: ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಮಾತೃ ವರ್ಗದವರಿಂದ ಸಹಾಯ ಸಿಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವಾಗಿ ಸಂತಸ. ಶುಭಸಂಖ್ಯೆ: 8

    ವೃಶ್ಚಿಕ: ಸಮಾರಂಭ ಅಯೋಜಿಸುವುದಕ್ಕಾಗಿ ಹಣ ವ್ಯಯ. ಮನಸ್ಸಿನಲ್ಲಿ ಅಸ್ವಸ್ಥತೆಯ ಲಕ್ಷಣ ಕಾಣುವುದು. ಅನವಶ್ಯಕ ವಾಗ್ವಾದ ಬೇಡ. ಶುಭಸಂಖ್ಯೆ: 6

    ಧನಸ್ಸು: ಸ್ಥಿರವಾದ ಮನಸ್ಸು. ಕೆಲಸ ಕಾರ್ಯಗಳಲ್ಲಿ ಯಶ ದೊರಕಿ ನೆಮ್ಮದಿ. ರಾಜಕೀಯದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ. ಶುಭಸಂಖ್ಯೆ: 9

    ಮಕರ: ಮಂಡಿ ನೋವಿನ ಸಮಸ್ಯೆ ಕಾಡುವುದು. ಅಧಿಕ ಕೆಲಸದೊತ್ತಡದಿಂದ ಮಾನಸಿಕ ಅಶಾಂತಿ. ದಿನಸಿ ವ್ಯಾಪಾರಿಗಳಿಗೆ ಚಿಂತೆ. ಶುಭಸಂಖ್ಯೆ: 2

    ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆತಂಕ. ಪತ್ನಿಯೊಂದಿಗೆ ವಾಗ್ವಾದ. ದುಡುಕಿನ ನಿರ್ಧಾರದಿಂದ ಹಾನಿ. ಶುಭಸಂಖ್ಯೆ: 7

    ಮೀನ: ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವುದು. ಮನಸ್ಸಿನಲ್ಲಿ ಭೀತಿ ಕಾಡಲಿದೆ. ಮಾತಿನಲ್ಲಿ ನಿಯಂತ್ರಣ ಇದ್ದಷ್ಟೂ ಒಳ್ಳೆಯದು. ಶುಭಸಂಖ್ಯೆ: 3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts