More

    ನಿತ್ಯಭವಿಷ್ಯ| ಈ ರಾಶಿಯರಿಗೆ ಇಂದು ವಿದೇಶದಿಂದ ಶುಭ ಸಮಾಚಾರವನ್ನು ಕೇಳುವ ಅವಕಾಶವಿದೆ..

    ಮೇಷ: ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ವ್ಯವಹಾರಗಳಲ್ಲಿ ಹಿತಶತ್ರುಗಳ ಕಾಟವಿದೆ. ಚಾಮುಂಡಿಯ ಧ್ಯಾನ ಮಾಡಿ. ಶುಭಸಂಖ್ಯೆ: 4

    ವೃಷಭ: ದ್ರವಪದಾರ್ಥಗಳನ್ನು ವ್ಯಾಪಾರ ಮಾಡುವವರಿಗೆ ಅಲ್ಪಪ್ರಮಾಣದ ಲಾಭವಿದೆ. ತಜ್ಞರ ಸಲಹೆ ಪಡೆದು ಹೊಸ ಕಾರ್ಯ ಆರಂಭಿಸಿ. ಶುಭಸಂಖ್ಯೆ: 2

    ಮಿಥುನ: ಆತ್ಮವಿಮರ್ಶೆ ಮಾಡಿಕೊಳ್ಳುವಿರಿ. ಹಣಕಾಸಿನ ಹೂಡಿಕೆಯು ಮಾತ್ರ ವ್ಯವಸ್ಥಿತವಾಗಿಯೇ ಇರಲಿ. ಮಹಾಲಕ್ಷೀ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 1

    ಕಟಕ: ಹಣಕಾಸಿನ ವ್ಯವಹಾರದಲ್ಲಿ ಏರಿಕೆಯಾಗಲಿದೆ. ದೂರದ ನೆಂಟರ ಆಗಮನದಿಂದ ಮನೆಯಲ್ಲಿ ಹರ್ಷದ ವಾತಾವರಣ ಇರಲಿದೆ. ಶುಭಸಂಖ್ಯೆ: 9

    ಸಿಂಹ: ವಾಹನ ಚಾಲನೆಯಿಂದ ಅಪಾಯವಾದೀತು. ಅಮೂಲ್ಯ ವಸ್ತುಗಳಿಗೆ ಹಾನಿಯಾಗಬಹುದು. ಭಕ್ತಿಯಿಂದ ಶಿವನನ್ನು ಸ್ಮರಿಸಿ. ಶುಭಸಂಖ್ಯೆ: 7

    ಕನ್ಯಾ: ಕೆಲಸದಲ್ಲಿ ಕೊಂಚ ಅಡೆತಡೆಗಳು ಬರಲಿವೆ. ಬಾಳಸಂಗಾತಿಯಿಂದ ಸಹಕಾರ ಸಿಗಲಾರದು. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 8

    ಕನ್ಯಾ: ಸಹಚರರಿಂದ ಅಸಹಕಾರ ಎದುರಾಗಬಹುದು. ಕೆಲಸದ ಪ್ರಗತಿಗಾಗಿ ಹೆಚ್ಚು ಹೆಚ್ಚು ಶ್ರಮಿಸುವುದು ಸದ್ಯಕ್ಕೆ ನಿಮಗೆ ಅತ್ಯಗತ್ಯವಾಗಿದೆ. ಶುಭಸಂಖ್ಯೆ: 6

    ವೃಶ್ಚಿಕ: ವಿದೇಶದಿಂದ ಶುಭ ಸಮಾಚಾರವನ್ನು ಕೇಳುವ ಅವಕಾಶವಿದೆ. ಪ್ರೇಮಿಗಳ ಮಧ್ಯೆ ಸಣ್ಣಪುಟ್ಟ ಕಲಹ ಜರುಗುವ ಸಾಧ್ಯತೆಯಿದೆ. ಶುಭಸಂಖ್ಯೆ: 3

    ಧನುಸ್ಸು: ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗಲಿದೆ. ಕಾರ್ಯದ ನಿಮಿತ್ತ ದೂರಪ್ರವಾಸ ಮಾಡುವಿರಿ. ವೈರಿಗಳನ್ನು ಜಯಿಸಲಿದ್ದೀರಿ. ಶುಭಸಂಖ್ಯೆ: 5

    ಮಕರ: ಮಕ್ಕಳ ಆಹಾರದ ಕುರಿತು ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ. ಆಪ್ತರೊಬ್ಬರು ಆಕಸ್ಮಿಕವಾಗಿ ಭೇಟಿ ಆಗಲಿದ್ದಾರೆ. ಶುಭಸಂಖ್ಯೆ: 2

    ಕುಂಭ: ಮನೋರಂಜನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ. ಕಾರ್ಯದಲ್ಲಿನ ಪ್ರಗತಿಗಾಗಿ ಮೇಲಧಿಕಾರಿಗಳ ಪ್ರಶಂಸೆ ಲಭ್ಯ. ಶುಭಸಂಖ್ಯೆ: 4

    ಮೀನ: ಉದ್ದೇಶಿತ ಕಾರ್ಯದಲ್ಲಿ ಬಂದ ವಿಘ್ನಗಳೆಲ್ಲ ದೂರವಾಗಲಿವೆ. ಸಹೋದ್ಯೋಗಿಗಳು ಕೂಡ ಉತ್ತಮ ಸಹಕಾರ ನೀಡಲಿದ್ದಾರೆ. ಶುಭಸಂಖ್ಯೆ: 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts