More

    ಆತ್ಮೀಯರಿಂದಲೇ ನಿಷ್ಠುರ ಮಾತು ಕೇಳಬೇಕಾಗಬಹುದು ಈ ರಾಶಿಯವರಿಗೆ…

    ಮೇಷ: ಅನಿರೀಕ್ಷಿತ ವಾರ್ತೆಯಿಂದ ಕುಟುಂಬದಲ್ಲಿ ಹರ್ಷದ ವಾತಾವರಣ ಇರಲಿದೆ. ಆಪ್ತ ಮಿತ್ರರ ಜತೆ ಭೋಜನ ಸವಿಯಲಿದ್ದೀರಿ. ಶುಭಸಂಖ್ಯೆ: 1

    ವೃಷಭ: ಸಾಕಷ್ಟು ತಿರುಗಾಟಗಳನ್ನು ನಡೆಸಿದರೂ ಕೆಲಸ ಮುಂದುವರಿಸಲಾಗದು. ಅನುಭವವೇ ಮುಖ್ಯ ಬಂಡವಾಳವಾಗಲಿ. ಶುಭಸಂಖ್ಯೆ: 9

    ಮಿಥುನ:ವಿಶೇಷ ಕಾರ್ಯಕ್ರಮದ ನೆಪದಲ್ಲಿ ಅಪರೂಪದ ಬಂಧುಗಳ ಭೇಟಿ ಮಾಡುವಿರಿ. ಆರೋಗ್ಯದ ಬಗೆಗೂ ಸ್ವಲ್ಪ ಕಾಳಜಿ ವಹಿಸಿ. ಶುಭಸಂಖ್ಯೆ: 2

    ಕಟಕ: ಸಂಗಾತಿಯ ಬಳಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಂಕು ಆವರಿಸಿದವರ ಹಾಗೆ ಇರದೆ ಜಾಣ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 8

    ಸಿಂಹ:ನಿಮ್ಮ ಕಲ್ಪನಾಶಕ್ತಿಯ ವ್ಯಾಪ್ತಿ ವಿಸ್ತಾರವಾದುದು. ಗ್ರಹಗಳಿಂದಲೂ ಅನುಕೂಲ ವಾತಾವರಣವಿದೆ. ಕವಿಗಳಿಗೆ ಮನ್ನಣೆ ಲಭಿಸುವುದು. ಶುಭಸಂಖ್ಯೆ: 3

    ಕನ್ಯಾ: ತೀರ ಒಂಟಿಯಾಗಿಯೇ ಹೋರಾಡುತ್ತಿರಬೇಡಿ. ಹಿರಿಯರೊಬ್ಬರು ನಿಮಗೆ ಜಂಜಡಗಳಿಂದ ಹೊರಬರಲು ನೆರವಾಗುವರು. ಶುಭಸಂಖ್ಯೆ: 7

    ತುಲಾ:ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ನಿರ್ಧಾರ ಕೈಗೊಳ್ಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಸ್ಥಾನಮಾನ ಸಿಗಲಿದೆ. ಶುಭಸಂಖ್ಯೆ: 4

    ವೃಶ್ಚಿಕ: ಖರ್ಚಿನ ದಾರಿಯೇ ಎದುರಾಗಲಿದೆ. ಆದರೆ ಇದು ಕೂಡಿಡುವ ಸಂದರ್ಭವಾಗಿದೆ. ಹೀಗಾಗಿ ದುಂದುವೆಚ್ಚವನ್ನು ನಿಲ್ಲಿಸಿಬಿಡಿ. ಶುಭಸಂಖ್ಯೆ: 6

    ಧನಸ್ಸು: ಗೃಹ ನಿರ್ಮಾಣದ ಕನಸಿಗೆ ಗರಿ ಮೂಡಬಹುದು. ಆದರೆ ಸಾಲ ಮಾಡದೆಯೇ ಮುಂದುವರಿಯಲು ನಿರ್ಧಾರ ಮಾಡಿದರೆ ಉತ್ತಮ. ಶುಭಸಂಖ್ಯೆ: 5

    ಮಕರ: ಅನೇಕ ಕಡೆ ಸುಲಭದ ಗೆಲುವು ದೊರೆತರೂ ನಿಮ್ಮ ಮನದಲ್ಲಿ ಉದ್ವೇಗವೇ ಇದೆ. ಸಂಬಂಧಿಗಳ ಜತೆಗೆ ಅತಿಯಾದ ಸಲುಗೆ ಬೇಡ. ಶುಭಸಂಖ್ಯೆ: 1

    ಕುಂಭ: ಸಾಮಾಜಿಕ ತಾಣದ ಗೆಳೆಯರನ್ನೆಲ್ಲ ನಂಬದಿರಿ. ಆದಷ್ಟು ಹಸನ್ಮುಖಿಗಳಾಗಿರಿ. ಅದರಿಂದಲೇ ಲಾಭಕ್ಕೆ ಹೆಚ್ಚಿನ ಅವಕಾಶವಿದೆ. ಶುಭಸಂಖ್ಯೆ: 9

    ಮೀನ: ಆತ್ಮೀಯರು ಎನಿಸಿದವರಿಂದಲೇ ನಿಷ್ಠುರ ಮಾತು ಎದುರಾಗಲಿದೆ. ಹೆದರದಿರಿ. ಮೌನವಾಗಿದ್ದರೆ ಮುಂದೆ ನೆಮ್ಮದಿಯಿಂದಿರುವಿರಿ. ಶುಭಸಂಖ್ಯೆ: 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts