More

    ಅಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮಕ್ಕಳು ಮಾಡಿದ್ದೇನು?

    ಆಗ್ರಾ: ಉತ್ತರ ಪ್ರದೇಶದಲ್ಲಿ ತಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ ಆತನ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡಿ ಫೇಸ್​ಬುಕ್​ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ತಮ್ಮ ತಂದೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

    ಶ್ರೇಯಾ ಮತ್ತು ಸಮರ್ಥ್ (ಹೆಸರು ಬದಲಿಸಲಾಗಿದೆ)​ ಈ ವಿಡಿಯೋವನ್ನು ಹರಿಬಿಟ್ಟಿರುವ ಮಕ್ಕಳಾಗಿದ್ದಾರೆ. ಇವರ ತಾಯಿ 2005ರಲ್ಲಿ ಮೃತಪಟ್ಟಿದ್ದರು. ಆಲಿಗಢದ ಶ್ರೀ ಗಾಂಧಿ ಸ್ಮಾರಕ ಇಂಟರ್​ ಕಾಲೇಜ್​ನಲ್ಲಿ 4ನೇ ದರ್ಜೆ ಉದ್ಯೋಗಿಯಾಗಿದ್ದ ತಂದೆ ರಾಮ್​ (ಹೆಸರು ಬದಲಿಸಲಾಗಿದೆ) ಆರೈಕೆಯಲ್ಲಿ ಮಕ್ಕಳು ಬೆಳೆಯುತ್ತಿದ್ದರು. ಆದರೆ, ದುರದೃಷ್ಟವಶಾತ್​, ಆ.3ರಂದು ಈ ಮಕ್ಕಳ ತಂದೆ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: 55 ಲಕ್ಷ ರೂ. ವಿತ್​ಡ್ರಾಯಲ್​ ಬಿಟ್ಟರೆ, ರಿಯಾ ಅಥವಾ ಸಂಬಂಧಿಕರ ಖಾತೆಗೆ ದೊಡ್ಡ ಮೊತ್ತ ವರ್ಗಾವಣೆಗೊಂಡಿಲ್ಲ

    ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರಾಮ್​, ತಮ್ಮ ಸಂಪೂರ್ಣ ವೇತನ ಬಿಡುಗಡೆ ಮಾಡಲು 2 ಲಕ್ಷ ರೂ. ಲಂಚ ಕೊಡುವಂತೆ ಕಾಲೇಜಿನ ಪ್ರಾಂಶುಪಾಲ ಮತ್ತು ಗುಮಾಸ್ತರು ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಇವರಿಬ್ಬರೂ ಸೇರಿ ರಾಮ್​ ಅವರಿಗೆ ಬೇಕೆಂದೇ ಅರ್ಧ ಸಂಬಳ ಕೊಡುತ್ತಿದ್ದರು ಮತ್ತು ಹಾಜರಾತಿ ಹಾಕಲು ಅಡ್ಡಿಪಡಿಸುತ್ತಿದ್ದರು ಎನ್ನಲಾಗಿದೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಚಿತ್ರೀಕರಿಸಿರುವ ರಾಮ್​, ತಾವು ಹೇಗೋ ಕಷ್ಟಪಟ್ಟು ಇಬ್ಬರಿಗೂ 1 ಲಕ್ಷ ರೂ. ಲಂಚ ಕೊಟ್ಟಿದ್ದಾಗಿಯೂ ಉಳಿದ ಹಣಕ್ಕಾಗಿ ಅವರಿಬ್ಬರೂ ಪೀಡಿಸುತ್ತಿರುವುದಾಗಿ ಆರೋಪಿಸಿದ್ದರು. ಅಲ್ಲದೆ, ಇವರಿಬ್ಬರ ಕಿರುಕುಳ ತಡೆಯಲಾರದೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.

    ರಾಮ್​ ಆತ್ಮಹತ್ಯೆ ಮಾಡಿಕೊಂಡ ಮರುದಿನ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದರು. ಆದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಇದರಿಂದ ಬೇಸತ್ತ ಸಹೋದರ ಮತ್ತು ಸಹೋದರಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.

    ಮಂಚದೊಳಗೆ ಕಾಳಿಂಗ ಸರ್ಪ: ಮೈ ಝುಂ ಎನಿಸುವ ವಿಡಿಯೋ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts