More

    ಮೈಚಾಂಗ್ ಚಂಡಮಾರುತ: ಆಂಧ್ರಕ್ಕೆ ರೂ. 493 ಕೋಟಿ; ತಮಿಳುನಾಡಿಗೆ ರೂ. 450 ಕೋಟಿ ಕೇಂದ್ರ ನೆರವು

    ನವದೆಹಲಿ: ಮೈಚಾಂಗ್ ಚಂಡಮಾರುತದಿಂದ ಪ್ರವಾಹಕ್ಕೆ ತುತ್ತಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಆಂಧ್ರಪ್ರದೇಶಕ್ಕೆ 493.60 ಕೋಟಿ ರೂ. ಮತ್ತು ತಮಿಳುನಾಡಿಗೆ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವಾಲಯಕ್ಕೆ ಸೂಚಿಸಿದ್ದಾರೆ.
    ಎಸ್‌ಡಿಆರ್‌ಎಫ್‌ ನಿಧಿಗೆ ಕೇಂದ್ರದ ಕೊಡುಗೆಯ ಎರಡನೇ ಕಂತು ಆಗಿ ಮುಂಚಿತವಾಗಿಯೇ ಈ ಹಣ ಬಿಡುಗಡೆ ಮಾಡಲು ಅವರು ತಿಳಿಸಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್ ಪೋಸ್ಟ್‌ನಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.

    ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಎಂಎಫ್) ಅಡಿಯಲ್ಲಿ ಚೆನ್ನೈ ಜಲಾನಯನ ಯೋಜನೆಗಾಗಿ ಸಮಗ್ರ ನಗರ ಪ್ರವಾಹ ನಿರ್ವಹಣಾ ಚಟುವಟಿಕೆಗಳಿಗಾಗಿ 561.29 ಕೋಟಿ ರೂಪಾಯಿಗಳ ನಗರ ಪ್ರವಾಹ ತಗ್ಗಿಸುವ ಮೊದಲ ಯೋಜನೆಯನ್ನು ಪ್ರಧಾನಿ ಅನುಮೋದಿಸಿದ್ದಾರೆ, ಇದರಲ್ಲಿ 500 ಕೋಟಿ ರೂಪಾಯಿಗಳ ಕೇಂದ್ರ ಸಹಾಯವೂ ಸೇರಿದೆ ಎಂದು ಶಾ ಹೇಳಿದರು.

    ಚಂಡಮಾರುತ ಮೈಚಾಂಗ್ ಆಂಧ್ರಪ್ರದೇಶದಲ್ಲಿ ಸಾಕಷ್ಟು ವಿನಾಶ ಸೃಷ್ಟಿಸಿದೆ. 770 ಕಿಲೋ ಮೀಟರ್ ರಸ್ತೆಗಳನ್ನು ಹಾನಿಗೊಳಿಸಿದೆ. ಮರಗಳನ್ನು ನೆಲಕ್ಕುರುಳಿಸಿದೆ. ಇದರಿಂದಾಗಿ ಸಾಕಷ್ಟು ಜಾನುವಾರುಗಳು ಸಾವನ್ನಪ್ಪಿವೆ.

    ಆಂಧ್ರ ಮುಖ್ಯಮಂತ್ರಿಗಳ ಕಚೇರಿ ಹಂಚಿಕೊಂಡ ಮಾಹಿತಿಯ ಪ್ರಕಾರ, 25 ಹಳ್ಳಿಗಳ ಮುಳುಗಡೆ ಸೇರಿದಂತೆ 194 ಹಳ್ಳಿಗಳು ಮತ್ತು ಎರಡು ಪಟ್ಟಣಗಳ ಅಂದಅಜು 40 ಲಕ್ಷ ಜನರು ಮೈಚಾಂಗ್ ಚಂಡಮಾರುತದಿಂದ ತೊಂದರೆಗೆ ಒಳಗಾಗಿದ್ದಾರೆ.

    ತಮಿಳುನಾಡಿನಲ್ಲಿಮೈಚಾಂಗ್ ಚಂಡಮಾರುತವು ರಾಜಧಾನಿ ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಅಪಾರ ವಿನಾಶ ಉಂಟು ಮಾಡಿದೆ. ಹಲವಾರು ಪ್ರದೇಶಗಳಲ್ಲಿ ನೀರು ಮತ್ತು ವಿದ್ಯುತ್ ಅಡಚಣೆಯಿಂದ ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ.

    ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ ವರದಿ: ಲೋಕಸಭೆಯಲ್ಲಿ ಸೃಷ್ಟಿಯಾಗಬಹುದು ಕೋಲಾಹಲ

    ಪಿಒಕೆಯಿಂದ ಕನಿಷ್ಠ ಒಂದು ಆ್ಯಪಲ್​ ತನ್ನಿ: ಅಮಿತ್ ಶಾಗೆ ಕಾಂಗ್ರೆಸ್​ ನಾಯಕ ಅಧೀರ್ ಸವಾಲು

    ವಾಟ್ಸಪ್ ಸ್ಟೇಟಸ್​ ನೋಡಿ ದೂರು ದಾಖಲಿಸಿದ ಗಂಡ; ಹೆಂಡತಿ, ಅಳಿಯನಿಗೆ ಈಗ ಬಂಧನದ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts