More

    1.25 ಲಕ್ಷ ಕೋಟಿ ರೂಪಾಯಿ – ಸೈಬರ್ ಕ್ರೈಂನಿಂದಾಗಿರುವ ನಷ್ಟ: ಇನ್ನೂ ಹೆಚ್ಚಾಗಲಿದೆಯಂತೆ ಅಪರಾಧ!

    ನವದೆಹಲಿ: ನಮ್ಮ ದೇಶದಲ್ಲಿ ಕಳೆದ ವರ್ಷ ಸೈಬರ್ ಅಪರಾಧಗಳಿಂದಾಗಿ ಆಗಿರುವ ನಷ್ಟದ ಪ್ರಮಾಣ ಬರೋಬ್ಬರಿ 1.25 ಲಕ್ಷ ಕೋಟಿ ರೂಪಾಯಿ!. ದೇಶ ಸ್ಮಾರ್ಟ್​ ಸಿಟಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು 5ಜಿ ನೆಟ್​ವರ್ಕ್ ಹಾಗೂ ಇನ್ನಿತರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಅಪರಾಧ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ನ್ಯಾಷನಲ್​ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್​ ಲೆಫ್ಟಿನೆಂಟ ಜನರಲ್​ ಡಾ. ರಾಜೇಶ್ ಪಂತ್ ಮಂಗಳವಾರ ಎಚ್ಚರಿಸಿದ್ದಾರೆ.

    ಆಸ್ಪತ್ರೆಗಳೇ ಈಗ ಟಾರ್ಗೆಟ್​

    ಅವರಿಗೆ ಯಾವುದೇ ಕರುಣೆ ಇಲ್ಲ, ನಿರ್ದಾಕ್ಷಿಣ್ಯವಾಗಿ ಕನ್ನ ಹಾಕುವ ಕೆಲಸ ಮಾಡುತ್ತಾರೆ. ಕ್ರಿಮಿನಲ್​ಗಳು ಮನೆಯಲ್ಲಿದ್ದುಕೊಂಡೇ ಕನ್ನ ಹಾಕುವ ಕೆಲಸ ಮುಂದುವರಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳವರು ದುಡ್ಡು ಕೊಟ್ಟೇ ಕೊಡುತ್ತಾರೆ ಎಂಬುದನ್ನು ಅಪರಾಧಿಗಳು ಬಲ್ಲರು ಎಂದು ಪಂತ್ ಹೇಳಿದ್ದಾರೆ.

    ಕಳೆದ ವರ್ಷ (2019)ದ ಲೆಕ್ಕಾಚಾರ ಪ್ರಕಾರ ಆಗಿರುವ ನಷ್ಟದಲ್ಲಿ ಸೈಬರ್ ವಂಚನೆಗಳ ಕೊಡುಗೆಯೇ ಹೆಚ್ಚು. ರಾನ್ಸಮ್​ವೇರ್ ದಾಳಿಗಳು ನಿತ್ಯವೂ ಹೆಚ್ಚಾಗುತ್ತಿದೆ. ಜನರಷ್ಟೇ ಅಲ್ಲ, ಆಸ್ಪತ್ರೆಗಳು, ವಾಣಿಜ್ಯೋದ್ಯಮಗಳೂ ಈ ಕ್ರಿಮಿನಲ್ ಅಪರಾಧಿಗಳ ಟಾರ್ಗೆಟ್​ ಆಗುತ್ತಿವೆ. ಆ್ಯಪ್​ಗಳ ಮೂಲಕವಷ್ಟೇ ಅಲ್ಲ, ಬೇರೆ ಬೇರೆ ವಿಧಾನಗಳ ಮೂಲಕ ಈ ಅಪರಾಧ ಕೃತ್ಯ ನಡೆಯುತ್ತಿದೆ ಎಂದು ಪಂತ್ ಎಫ್​ಐಸಿಸಿಐ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವರಿಸಿದರು.

    ಇದನ್ನೂ ಓದಿ: 20 ವಿದೇಶಿ ತಬ್ಲಿಘಿಗಳ ಬಿಡುಗಡೆ: ಸಾಕ್ಷ್ಯಸಂಗ್ರಹಿಸುವಲ್ಲಿ ಎಡವಿದ ತನಿಖಾ ಸಂಸ್ಥೆಗಳು

    ನಮ್ಮ ವಿಶ್ಲೇಷಣೆ ಪ್ರಕಾರ ಈ ಕ್ರಿಮಿನಲ್​ಗಳು ಮೊಬೈಲ್ ಫೋನ್​ಗಳನ್ನು ಆ್ಯಪ್​ಗಳಷ್ಟೇ ಅಲ್ಲ, ಹದಿನೈದು ಬೇರೆ ಬೇರೆ ದಾಳಿ ವಿಧಾನಗಳ ಮೂಲಕ ಖಾತೆಗೆ ಕನ್ನ ಹಾಕುವ ಕೆಲಸ ಮಾಡುತ್ತಾರೆ. ಇದರಲ್ಲಿ, ಆಪರೇಟಿಂಗ್ ಸಿಸ್ಟಮ್​, ಮೊಬೈಲ್ ಫೋನ್​ನ ಪ್ರೊಸೆಸರ್​, ಮೆಮೋರಿ ಚಿಪ್​, ಕಮ್ಯೂನಿಕೇಶನ್ಸ್ ಇಂಟರ್​ಫೇಸ್​, ಬ್ಲೂಟೂತ್​, ವೈಫೈಗಳೂ ಒಳಗೊಂಡಿವೆ ಎಂದು ಪಂತ್ ಹೇಳಿದರು. (ಏಜೆನ್ಸೀಸ್)

    ಹಾಥರಸ್ ಪ್ರಕರಣ: ಪಿಎಫ್​ಐ ನಂಟಿನ ಕೇರಳದ ಪತ್ರಕರ್ತ ಮತ್ತು ಮೂವರ ನ್ಯಾಯಾಂಗ ಬಂಧನ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts