More

    ಡಿವೋರ್ಸ್ ಆದ ಮಹಿಳೆಯರೆ ಈತನ ಟಾರ್ಗೆಟ್, ಯಾಮಾರಿದ್ರೆ ಅಂಗೈಯಲ್ಲಿ ತೋರಿಸುತ್ತಾನೆ ಆಕಾಶ..

    ಹಾವೇರಿ: ಮದುವೆಯಾಗುವುದಾಗಿ ವಿಚ್ಚೇದಿತ ಮಹಿಳೆಯನ್ನು ವಂಚಿಸಿದ ವ್ಯಕ್ತಿಯೊಬ್ಬ ಇದೀಗ ಹುಬ್ಬಳ್ಳಿಯಲ್ಲಿ ಪೊಲೀಸರ ಅತಿಥಿ. ಬಂಧಿತನನ್ನು ರವಿ ಮುಡ್ಡೆಣ್ಣನವರ ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆಯ ವ್ಯಕ್ತಿ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಅನುಸರಿಸುತ್ತಿದ್ದ ವಂಚನಾ ಕ್ರಮ ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ.

    ಡಿವೋರ್ಸ್ ಆದ ಮಹಿಳೆಯರೆ ಈತನ ಟಾರ್ಗೆಟ್. ಯಾವ ಮಹಿಳೆಯಾದರೂ ಯಾಮಾರಿದ್ರೆ ಅಂಗೈಯಲ್ಲಿ ಅರಮನೆಯನ್ನು ತೋರಿಸುವಷ್ಟು ಚಾಲಾಕಿ. ಶಾದಿ ಡಾಟ್ ಕಾಮ್​ನಲ್ಲಿ ಬಯೋಡೇಟಾ ಅಪ್ಲೋಡ್ ಮಾಡಿದ್ದ. ಅಲ್ಲಿ, ಡಿವೋರ್ಸ್ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹಾಯ್​ ಎಂದು ಪರಿಚಯ ಮಾಡಿಕೊಳ್ತಿದ್ದ. ಮೂರು, ನಾಲ್ಕು ದಿನಗಳ ಮಾತುಕತೆ, ಒಡನಾಟದ ಮೂಲಕ ನಂಬಿಕೆ ಹುಟ್ಟಿಸಿ, ಚಿನ್ನಾ, ರನ್ನಾ, ನಿನ್ನ ಮದುವೆ ಆಗುತ್ತೇನೆ ಎಂದು ಭರವಸೆಯನ್ನೂ ನೀಡುತ್ತಿದ್ದ.

    ಈ ರೀತಿಯ ಮಾತುಗಳಿಗೆ ಮರುಳಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಶಿಕ್ಷಕಿಯೊಬ್ಬರು ಈತನ ಬಲೆಗೆ ಬಿದ್ದಿದ್ದರು. ಪೂನಾದಲ್ಲಿ ಬಿಡ್ಡಿಂಗ್ ಮಾಡಲು ಹಣದ ಕೊರತೆ ಆಗಿದೆ. ದಯವಿಟ್ಟು ಸಹಾಯಮಾಡಿ ಎಂದು ಅವರಿಂದ ಲಕ್ಷ ಗಟ್ಟಲೆ ಹಣವನ್ನು ವಸೂಲಿ ಮಾಡಿದ್ದ ವಂಚಕ. ಮೋಸದ ಮಾತಿಗೆ ಮರುಳಾಗಿ ಶಿಕ್ಷಕಿ 4 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಮೋಸ ಹೋಗಿರುವುದು ಅರಿವಾಗುತ್ತಲೇ ಆ ಶಿಕ್ಷಕಿ ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಯಾಕೆ ಹೀಗೆ ಮಾಡಿದ್ದ: ಪ್ರಾಥಮಿಕ ತನಿಖೆಯ ಪ್ರಕಾರ, ಈ ವಂಚಕ ಪತ್ನಿ ತವರುಮನೆ ಸೇರಿದ್ದು, ಪರಿಸ್ಥಿತಿಯ ಲಾಭ ಗಿಟ್ಟಿಸಿಕೊಂಡು ಮಜಾ ಮಾಡಲು ಮುಂದಾಗಿದ್ದ ವಂಚಕ ರವಿ. ಹೀಗಾಗಿಯೇ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ ಚಿದಾನಂದ, ಪಿಎಸ್ಐ ಜೆ ಕೆ ಬಳೆಗಾರ, ಆನಂದ ದೊಡ್ಡ ಕುರಬರ. ಎಂ ಜಿ ಎರೆಸೀಮಿ,ಮಂಜುನಾಥ , ಪುಟ್ಟಪ್ಪ ಈಗೇರ್ , ಶಿವಾನಂದ ಜಾಡರ್ ಅವರನ್ನು ಒಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದೆ.

    VIDEO: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಡ್ಯಾನ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಹಳೆಯ ವಿಡಿಯೋ ವೈರಲ್ ಮಾಡಿದ ಆಯಾಳ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts