More

    ನಾಲ್ಕು ಸ್ಟಾಕ್​ಗಳ ಖರೀದಿಗೆ ಷೇರು ಮಾರುಕಟ್ಟೆ ತಜ್ಞನ ಸಲಹೆ: ಟಾರ್ಗೆಟ್​ ಪ್ರೈಸ್​, ಸ್ಟಾಪ್​ ಲಾಸ್ ಹೀಗಿದೆ…

    ಮುಂಬೈ: ಸ್ಟಾಕ್ ಮಾರುಕಟ್ಟೆಯು ತನ್ನ ಇತಿಹಾಸದಲ್ಲಿಯೇ ಅತ್ಯಂತ ವೇಗವಾಗಿ ಸಾಗುತ್ತಿದ್ದು, ಬಿಎಸ್ಇ ಮತ್ತು ನಿಫ್ಟಿ ಸೂಚ್ಯಂಕಗಳು ನಿರಂತರವಾಗಿ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಕೆಲವು ಮಾರುಕಟ್ಟೆ ತಜ್ಞರು ಹೇಳುವಂತೆ ಮಾರುಕಟ್ಟೆಯ ಬುಲ್ ಓಟ ಮುಂದುವರಿಯಬಹುದು ಮತ್ತು ಈ ಬುಲಿಶ್ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯದ ಷೇರುಗಳತ್ತ ಗಮನ ಹರಿಸಬೇಕು.

    ಏತನ್ಮಧ್ಯೆ, ಷೇರು ಮಾರುಕಟ್ಟೆ ತಜ್ಞ ಸಂಜೀವ್ ಭಾಸಿನ್ ಅವರು ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದ್ದು, ಜಿಡಿಪಿ ಸಂಖ್ಯೆಗಳು ಉತ್ತಮವಾಗಿ ಬರುತ್ತಿವೆ ಎಂದು ಹೇಳಿದ್ದಾರೆ. ಮಾರುಕಟ್ಟೆಯು ಏರಿಕೆಯಾಗಬಹುದು ಮತ್ತು ದೊಡ್ಡ ಕ್ಯಾಪ್‌ಗಳಿಗೆ ಇನ್ನೂ ಹೆಚ್ಚಿನ ಅವಕಾಶವಿದೆ ಎಂದು ಅವರು ಹೇಳಿದ್ದಾರೆ,

    ಮಾರುಕಟ್ಟೆಯು ಏರಿಳಿತ ಕಾಣುತ್ತಿದೆ. ಆದ್ದರಿಂದ ಹೂಡಿಕೆದಾರರು ಸ್ಟಾಕ್ ನಿರ್ದಿಷ್ಟವಾಗಿರಬೇಕು ಎಂದು ಮಾರುಕಟ್ಟೆ ತಜ್ಞ ಸಂಜೀವ್ ಭಾಸಿನ್ ಹೇಳಿದ್ದಾರೆ. ಕೆಲವು ಷೇರುಗಳು ಉತ್ತಮ ಮೌಲ್ಯಮಾಪನದಲ್ಲಿದ್ದು, ಖರೀದಿ ಯೋಗ್ಯವಾಗಿವೆ ಎಂದು ಅವರು ಹೇಳಿದ್ದಾರೆ. ಒಎಂಸಿ ಅಂದರೆ ಆಯಿಲ್ ಮಾರ್ಕೆಟಿಂಗ್ ಕಂಪನಿ ಮತ್ತು ಲೋಹದ ಷೇರುಗಳು ಏರಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾಸಿನ್ ಈ ಮಾರುಕಟ್ಟೆಯಲ್ಲಿ ನಾಲ್ಕು ಷೇರುಗಳನ್ನು ಹೆಸರಿಸಿದ್ದಾರೆ, ಅವುಗಳು ಈ ಕೆಳಗಿನಂತಿವೆ.

    ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (AU Small Finance Bank Ltd):

    ಈ ಬ್ಯಾಂಕ್ ಈಶಾನ್ಯ ಮತ್ತು ಉತ್ತರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಬ್ಯಾಂಕ್​ನ ಸ್ಟಾಕ್​ ಬೆಲೆ ಏರಿಕೆಯನ್ನು ಕಾಣಬಹುದು.
    ಈ ಷೇರು ಗುರುವಾರ 570.55 ರೂಪಾಯಿಗೆ ಮುಟ್ಟಿದೆ. ಇದರ ಗುರಿ ಬೆಲೆ (ಟಾರ್ಗೆಟ್​ ಪ್ರೈಸ್) 625 ರೂಪಾಯಿ ಆಗಿದೆ. ಎರಡನೇ ಗುರಿ ಬೆಲೆ 650 ರೂಪಾಯಿ ಇದೆ ಎಂದು ಭಾಸಿನ್ ಹೇಳಿದ್ದಾರೆ. ಈ ಷೇರಿನ ಸ್ಟಾಪ್ ಲಾಸ್ ಅನ್ನು ಅವರು 561 ರೂಪಾಯಿಗೆ ನಿಗದಿಪಡಿಸಿದ್ದಾರೆ.

    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Ltd):

    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಂದರೆ ಐಒಸಿ ಷೇರುಗಳು ಗುರುವಾರ 174.45 ರೂ. ಮುಟ್ಟಿವೆ. ಇದನ್ನು ಖರೀದಿಸಲು ಸಲಹೆ ನೀಡುವಾಗ, ಸಂಜೀವ್ ಭಾಸಿನ್ ಅದರ ಅಲ್ಪಾವಧಿಯ ಗುರಿ 185 ರೂ. ಮತ್ತು ಸ್ಟಾಪ್ ಲಾಸ್ ಅನ್ನು 165 ರೂ.ಗೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (Hindustan Petroleum Corp Ltd.):

    ಗುರುವಾರದಂದು ಎಚ್‌ಪಿಸಿಎಲ್ ಷೇರುಗಳ ಬೆಲೆ 509 ರೂ. ಇದೆ. ಭಾಸಿನ್ ಈ ಸ್ಟಾಕ್‌ನಲ್ಲಿ ಸಣ್ಣ ಸ್ಟಾಪ್ ಲಾಸ್​ ಮತ್ತು ದೊಡ್ಡ ಗುರಿಯನ್ನು ನೀಡಿದ್ದಾರೆ. 550 ರೂ. ಗುರಿ ನೀಡಿ ಖರೀದಿಸಿ; ಸ್ಟಾಪ್ ಲಾಸ್ 506 ರೂ.ಗೆ ನಿಗದಿಪಡಿಸಿ ಎಂದು ಸಲಹೆ ನೀಡಿದ್ದಾರೆ.

    ಪತಂಜಲಿ ಫುಡ್ಸ್ ಲಿಮಿಟೆಡ್ (Patanjali Foods Ltd.):

    ಈ ಷೇರುಗಳ ಬೆಲೆ ಗುರುವಾರ 1527 ರೂ. ಇತ್ತು. ಭಾಸಿನ್ ಅವರು ಪತಂಜಲಿ ಫುಡ್ಸ್ ಲಿಮಿಟೆಡ್ ಸ್ಟಾಕ್ ಅನ್ನು ರೂ 1900 ಗುರಿ ಇಟ್ಟು ಖರೀದಿಸಲು ಸಲಹೆ ನೀಡಿದರು. ಇದಕ್ಕಾಗಿ ಸ್ಟಾಪ್ ಲಾಸ್ ಅನ್ನು 1510 ರೂ. ನಿಗದಿಪಡಿಸಿದ್ದಾರೆ.

    ಗ್ರೇ ಮಾರ್ಕೆಟ್‌ನಲ್ಲಿ 250 ರೂಪಾಯಿ ಪ್ರೀಮಿಯಂನಲ್ಲಿ ಐಪಿಒ ಷೇರು ವಹಿವಾಟು: ಲಾಭ ಮಾಡಿಕೊಳ್ಳಲು ಸೋಮವಾರದವರೆಗೆ ದೊಡ್ಡ ಅವಕಾಶ

    ಸ್ಟಾಕ್​ ಬಯ್​ಬ್ಯಾಕ್ ಮಾಡುತ್ತಿದೆ ಸಕ್ಕರೆ ಕಂಪನಿ: ನಿಮ್ಮ ಬಳಿ ಈ ಷೇರು ಇದ್ದರೆ ತಕ್ಷಣವೇ 30% ಲಾಭ!!

    ಮುಂದಿನ ವಾರ ಮಾರುಕಟ್ಟೆಗೆ ಲಗ್ಗೆ ಹಾಕಲಿವೆ 7 ಐಪಿಒಗಳು: ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts