More

    ಅಂತಾರಾಜ್ಯ ಸೈಬರ್​ ವಂಚಕರು ಅಂದರ್​

    ಹುಬ್ಬಳ್ಳಿ: ಇಲ್ಲಿನ ಸ್ಟೇಶನ್​ ರಸ್ತೆಯ ಬ್ಯಾಂಕ್​ವೊಂದರ ಮ್ಯಾನೇಜರ್​ಗೆ ಗ್ರಾಹಕರ ಸೋಗಿನಲ್ಲಿ ಮೊಬೈಲ್​ ಹಾಗೂ ಇಮೇಲ್​ ಮೂಲಕ ಸಂಪಕಿರ್ಸಿ, ಬರೋಬ್ಬರಿ 62 ಲಕ್ಷ ರೂ. ವಂಚಿಸಿದ್ದ ಪ್ರಕರಣದಲ್ಲಿ ಮೂವರು ಅಂತಾರಾಜ್ಯ ಸೈಬರ್​ ಕಳ್ಳರನ್ನು ಸಿಇಎನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಬ್ಯಾಂಕ್​ನ ಗ್ರಾಹಕರೊಬ್ಬರು ತಮ್ಮ ಉದ್ಯಮದ ಸಲುವಾಗಿ ಆಗಾಗ ದೊಡ್ಡ ಪ್ರಮಾಣದ ಹಣದ ವ್ಯವಹಾರ ಮಾಡುತ್ತಿದ್ದರು. ತುರ್ತಾಗಿ ಹಣ ಬೇಕಿದ್ದಾಗ ಮೊಬೈಲ್​, ಇಮೇಲ್​ ಮೂಲಕ ಸಂಪಕಿರ್ಸಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಕದ್ದ ಸೈಬರ್​ ಕಳ್ಳರು ಜು.30ರಂದು ಆ ಗ್ರಾಹಕನ ಸೋಗಿನಲ್ಲಿ ಮ್ಯಾನೇಜರ್​ಗೆ ಕರೆ ಮಾಡಿ ಆರ್​ಟಿಜಿಎಸ್​ ಮುಖಾಂತರ ಹಂತ ಹಂತವಾಗಿ 62 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಗೊತ್ತಾದ ಕೂಡಲೇ ಮ್ಯಾನೇಜರ್​ ಸಿಇಎನ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
    ಇನ್​ಸ್ಪೆಕ್ಟರ್​ ಎಂ.ಎಸ್​.ಹೂಗಾರ ಹಾಗೂ ಸಿಬ್ಬಂದಿ ಗುಜರಾತ್​ನ ಗಾಂಧಿ ನಗರದಲ್ಲಿ ಇಬ್ಬರು ಹಾಗೂ ಬಿಹಾರದ ಗೋಪಾಲಗಂಜನಲ್ಲಿ ಒಬ್ಬನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ತಂಡದ ಕಾರ್ಯವನ್ನು ಆಯುಕ್ತರು ಶ್ಲಾಘಿಸಿದ್ದಾರೆ.
    ಕಿಂಗ್​ಪಿನ್​ ಹ್ಯಾಕರ್ಸ್​ ನಾಪತ್ತೆ
    ವಂಚನೆ ಪ್ರಕರಣದಲ್ಲಿ ಕಿಂಗ್​ಪಿನ್​ಗಳು ಎನ್ನಲಾದ ಹ್ಯಾಕರ್ಸ್​ ತಲೆಮರೆಸಿಕೊಂಡಿದ್ದಾರೆ. ಬಂಧಿತರ ಮೂವರು ಈ ಹ್ಯಾಕರ್ಸ್​ಗೆ ಸಹಕಾರ ನೀಡುತ್ತಿದ್ದರು. 5, 10 ಸಾವಿರ ರೂ. ಕೊಟ್ಟು ಅಮಾಯಕರ ಹೆಸರಲ್ಲಿ ಬ್ಯಾಂಕ್​ ಖಾತೆ ತೆರೆಯಿಸಿ ಅದರ ಮೂಲಕ ವಂಚಕರ ಹಣ ವರ್ಗಾವಣೆಗೆ ದಾರಿ ಮಾಡಿಕೊಡುತ್ತಿದ್ದರು. ಪ್ರಮುಖ ಆರೋಪಿಗಳಾದ ಹ್ಯಾಕರ್ಸ್​ ಬಂಧನಕ್ಕೆ ಖಾಕಿ ತಂಡ ಬಲೆ ಬೀಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts