More

    ನನ್ನ ತಲೆ ಕತ್ತರಿಸಿ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇಕೆ?

    ಕೋಲ್ಕತ: ಕರೊನಾ ಭೀತಿಯ ನಡುವೆಯೂ ಅಂಫಾನ್​ ಚಂಡಮಾರುತದ ಅಪ್ಪಳಕ್ಕೆ ನಲುಗಿರುವ ಪಶ್ಚಿಮ ಬಂಗಾಳದಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಮೂಲಸೌಕರ್ಯ ಮತ್ತು ಬೆಳೆಗಳಿಗೆ ಹಾನಿಯಾಗಿದ್ದು, ಅಂಫಾನ್​ನಿಂದ ಉಂಟಾಗಿರುವ ವಿದ್ಯುತ್ ಹಾಗೂ ಇತರೆ ಅಗತ್ಯ ಸೇವೆಗಳ ಸಮಸ್ಯೆಯನ್ನು ಬಗೆಹರಿಸಲು ಸಮಯಾವಕಾಶ ನೀಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ರಾಜ್ಯದ ಜನತೆಯ ಬಳಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್​ರನ್ನು ಬಾಂಬ್​ ಸ್ಪೋಟಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ದುರಂತ ಸಂಭವಿಸಿ ಎರಡು ದಿನಗಳು ಮಾತ್ರ ಕಳೆದಿವೆ. ಇದರಿಂದಾಗಿರುವ ಸಮಸ್ಯೆ ಬಗೆಹರಿಸಲು ನಾವು ಹಗಲು ರಾತ್ರಿ ಶ್ರಮಿಸುತ್ತಿದ್ದೇವೆ. ಆದಷ್ಟು ಬೇಗ ಎಲ್ಲವನ್ನು ಮರುಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಮತಾ ಅವರು ಮಾತನಾಡಿದರು.

    ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಭಾರಿ ಅಸಮಾಧಾನ ಕೇಳಿಬರುತ್ತಿದೆ ಎಂದು ಮಮತಾ ಅವರನ್ನು ಕೇಳಿದ್ದಕ್ಕೆ, ನಾನು ಒಂದು ವಿಚಾರವನ್ನು ಮಾತ್ರ ಹೇಳುತ್ತೇನೆ “ನನ್ನ ತಲೆಯನ್ನು ಕತ್ತರಿಸಿ” ಎಂದು ಅಸಹಾಯಕತೆಯನ್ನು ಹೊರಹಾಕಿದರು. ಇದೇ ವೇಳೆ ಪರಿಸ್ಥಿತಿಯನ್ನು ನಿರ್ವಹಿಸಲು ಸೇನಾ ನೆರವನ್ನು ಕೇಳಿರುವುದಾಗಿ ಮಮತಾ ಅವರು ಘೋಷಿಸಿದರು.

    ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಇನ್ನು ಶನಿವಾರ ಕೋಲ್ಕತದ ವಿವಿಧ ಏರಿಯಾಗಳಲ್ಲಿ ರಸ್ತೆಗಿಳಿದ ಜನರು ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು. ಅಂಫಾನ್​ ಸೃಷ್ಟಿಸಿರುವ ಭೀಕರತೆ ಸಮಯದಲ್ಲಿ ಪ್ರವಾಹ ಮತ್ತು ವಿದ್ಯುತ್​ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮಂದಗತಿಯಲ್ಲಿ ಸ್ಪಂದಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ವಿವಿಧೆಡೆ ರಸ್ತೆ ತಡೆ ಮಾಡಿ ತಕ್ಷಣವೇ ವಿದ್ಯುತ್​ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.

    ಅಂಫಾನ್​ ಹೊಡೆತಕ್ಕೆ ಈವರೆಗೆ ಪಶ್ಚಿಮ ಬಂಗಾಳದಲ್ಲಿ 86 ಮಂದಿ ಸಾವಿಗೀಡಾಗಿದ್ದು, ಲಕ್ಷಾಂತರ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಕರೊನಾ ಭೀಕರತೆ ನಡುವೆ ಅಂಫಾನ್​ ಹೊಡೆತ ಪಶ್ಚಿಮ ಬಂಗಾಳಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. (ಏಜೆನ್ಸೀಸ್​)

    ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್​ ನೀಡಲು ಇಡಿ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts