More

    ನೋಡಿದಿರಾ… ಶ್ವೇತವರ್ಣದ ಮಯೂರ ನಾಟ್ಯ?

    ಒಲವಿನ ಸಂಗಾತಿಯನ್ನು ಮೆಚ್ಚಿಸಿಕೊಳ್ಳಲು ಹರಸಾಹಸ ಪಡುವ ಪರಿಪಾಠ ಕೇವಲ ಮನುಷ್ಯ ಜೀವಿಯಲ್ಲಿ ಮಾತ್ರವೇ ಇಲ್ಲ. ಅದು ಪ್ರಾಣಿ, ಪಕ್ಷಿ ಸಂಕುಲದಲ್ಲೂ ಇದ್ದೇ ಇದೆ. ಸಂಗಾತಿಯನ್ನು ಒಲಿಸಿಕೊಳ್ಳಲು ಜಿರಾಫೆ ನೆಕ್​ ಟು ನೆಕ್ ಗುದ್ದಾಡಿದ್ದಾಯಿತು. ಇದೀಗ ನವಿಲಿನ ಸರದಿ.
    ತಮ್ಮ ಸಂಗಾತಿಯನ್ನು ಒಲಿಸಿಕೊಳ್ಳಲು ಬಣ್ಣದ ನವಿಲು ಗರಿಬಿಚ್ಚಿ ನರ್ತಿಸುವುದನ್ನು ನೋಡಿದ್ದೇವೆ. ಆದರೆ ಇದೇ ರೀತಿ ಬಿಳಿ ನವಿಲು ನರ್ತಿಸುವುದನ್ನು ನೋಡಿದ್ದೀರಾ?

    ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೊವಿಡ್​-19 ಟೆಸ್ಟ್ ರಿಪೋರ್ಟ್​ನಲ್ಲಿ ಹೊರಬಿದ್ದ ಸತ್ಯವೇ ಬೇರೆ…

    ಬಿಳಿ ನವಿಲು ತಮ್ಮ ಸಂಗಾತಿಯನ್ನು ಆಕರ್ಷಿಸುವ ಪ್ರಯತ್ನದಲ್ಲಿ ಗರಿ ಬಿಚ್ಚಿ ನರ್ತಿಸುವ ವೀಡಿಯೋ ವೈರಲ್ ಆಗಿ ಜನಮನ ಗೆದ್ದಿದೆ.
    ಮಳೆಯಾದಾಗ, ಮನಸ್ಸಿಗೆ ಹಿತವಾದಾಗ ನವಿಲು ಗರಿಬಿಚ್ಚಿ ನಲಿಯುತ್ತವೆ. ಅದರಲ್ಲೂ ಸಂಗಾತಿಯ ಮನ ಗೆಲ್ಲಲು ನವಿಲು ಮೈಮರೆತು ನರ್ತಿಸುತ್ತವೆ. ಮನಕ್ಕೆ ಮುದ ನೀಡುವ ಬಣ್ಣ ಬಣ್ಣದ ಗರಿಯ ನವಿಲು ನಾಟ್ಯ ಸಾಮಾನ್ಯವಾಗಿ ನೋಡಲು ಸಿಗುತ್ತದೆ. ಆದರೆ ಇಲ್ಲಿ ಕಾಣಸಿಗುವುದು ಅಪರೂಪದ ಶ್ವೇತ ವರ್ಣದ ಮಯೂರ ನಾಟ್ಯ.

    ಇದನ್ನೂ ಓದಿ: ನಾಸಾದ ಮಾಜಿ ಬಾಹ್ಯಾಕಾಶಯಾನಿ 68ರ ಮಹಿಳೆಯ ವಿಶಿಷ್ಠ ದಾಖಲೆ!

    ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಇತ್ತೀಚೆಗೆ “ಪ್ರಣಯದ ಪ್ರದರ್ಶನದಲ್ಲಿ ಬಿಳಿ ನವಿಲು. ಅದು ಸಂಗಾತಿಯ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆಯೇ ? ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯಾವಳಿಯನ್ನು ಮೂಲತಃ ವಿಶಾಖಪಟ್ಟಣಂನ ಇಂದಿರಾ ಗಾಂಧಿ ಪ್ರಾಣಿಶಾಸ್ತ್ರದ ಉದ್ಯಾನದ ಟ್ವಿಟರ್​​​ನಲ್ಲಿ ಹಂಚಿಕೊಳ್ಳಲಾಗಿದೆ.
    ಈ ವಿಡಿಯೋ ಬಿಳಿ ನವಿಲು ತನ್ನ ಸಂಗಾತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ಪ್ರಣಯದ ನೃತ್ಯವನ್ನು ತೋರಿಸುತ್ತದೆ. 45 ಸೆಕೆಂಡುಗಳ ವೀಡಿಯೊದಲ್ಲಿ ನವಿಲಿನ ಪೂರ್ಣ ವೈಭವ ಬಿತ್ತರಗೊಳ್ಳುತ್ತದೆ. ಅದು ಸುಂದರವಾದ ಬಿಳಿ ಗರಿಗಳನ್ನು ಹೊಂದಿದೆ.

    ಇದನ್ನೂ ಓದಿ: ಅತ್ತ ಪತಿರಾಯ ಜವರಾಯನ ಮಡಿಲಿಗೆ, ಇತ್ತ ಮಗು ತಾಯಿಯ ಮಡಿಲಿಗೆ…

    ವೀಡಿಯೊದಲ್ಲಿ ಗಂಡು ನವಿಲಿನ ಸುತ್ತಲೂ ಚಲಿಸುವ ಹೆಣ್ಣು ನವಿಲನ್ನು ಸಹ ಕಾಣಬಹುದು. ಗಂಡು ನವಿಲು ನಿರಂತರವಾಗಿ ಅದರ ಹಿಂದೆ ಚಲಿಸುವ ಮೂಲಕ ಅದನ್ನು ಮೆಚ್ಚಿಸಲು ಪ್ರಯತ್ನಿಸುತ್ತದೆ. ಆನುವಂಶಿಕ ರೂಪಾಂತರದಿಂದಾಗಿ ನವಿಲುಗಳು ಹೀಗೆ ಬಿಳಿಯದಾಗಿ ಕಾಣಿಸಿಕೊಳ್ಳುತ್ತವೆ. ವಿಡಿಯೊ ಹಂಚಿಕೊಂಡ ಕೂಡಲೇ ವೈರಲ್ ಆಗಿದೆ. ಇದು 5,000 ಬಾರಿ ವೀಕ್ಷಣೆಗೊಳಪಟ್ಟಿದ್ದು, ಮತ್ತು 500 ಕ್ಕೂ ಹೆಚ್ಚು ಮೆಚ್ಚುಗೆ ಗಳಿಸಿದೆ.

    ಪಾಕ್​ ಮಾಜಿ ಪ್ರಧಾನಿಗೆ ಕರೊನಾ ಸೋಂಕು: ಸಚಿವರಿಗೂ ಬಿಡದ ಮಹಾಮಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts