More

    ಕರೆಂಟ್ ಬಿಲ್ ಕಟ್ಟಿದ್ದರೂ ‘ಬಾಕಿ ಭಾಗ್ಯ’

    ಧಾರವಾಡ: ಹಣ ಕಟ್ಟಿದ್ದರೂ ಬಿಲ್‌ನಲ್ಲಿ ಬಾಕಿ ತೋರಿಸುತ್ತಿರುವುದರಿಂದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ವಿದ್ಯಾಗಿರಿಯ ಹೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆಯಿತು.
    ಹೆಸ್ಕಾಂ ಉಪ ವಿಭಾಗ ಕಚೇರಿಗೆ ಬಿಲ್ ತಿದ್ದುಪಡಿ ಮಾಡಿಸಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದೇ ವಿಚಾರವಾಗಿ ಜನರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದು ಹೆಸ್ಕಾಂ ವಿರುದ್ಧ ಕಿಡಿ ಕಾರಿದರು. ಈ ಕುರಿತು ಅಧಿಕಾರಿಗಳು ಸಮಜಾಯಿಶಿ ನೀಡಿ  ಸ್‌ಟಾವೇರ್ ಸಮಸ್ಯೆಯಿಂದ ಹಳೇ ಬಾಕಿ ಮತ್ತೆ ತೋರಿಸುತ್ತಿದೆ ಎಂದು ಹೇಳಿದರು.
    ಸಾಫ್ಟ್‌ವೇರ್ ಸಮಸ್ಯೆಯಿಂದ ಬಿಲ್‌ನಲ್ಲಿ ದೋಷ ಕಂಡುಬಂದಿದ್ದು, ಅದನ್ನು ತಿದ್ದುಪಡಿ ಮಾಡಿಸಲು ಜನರು ಹೆಸ್ಕಾಂ ಕಚೇರಿಗೆ ಬರುತ್ತಿದ್ದಾರೆ. ಆದರೆ, ಎಲ್ಲ ವಿದ್ಯುತ್ ಗ್ರಾಹಕರ ಇಂಥ ಬಿಲ್‌ಗಳನ್ನು ಒಂದೇ ಕಡೆ ತಿದ್ದುಪಡಿ ಮಾಡಲಾಗುತ್ತಿದೆ. ಈ ನಡುವೆ ಕಚೇರಿಯಲ್ಲಿ ಹೆಚ್ಚಿನ ಕೌಂಟರ್ ಇಲ್ಲದ ಕಾರಣ ಜನದಟ್ಟಣೆಯಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
    ಕೆಲವರು ಬೇಕಾಬಿಟ್ಟಿಯಾಗಿ ಬಿಲ್ ಕೊಡುತ್ತಿದ್ದಾರೆ. ಅದನ್ನು ತಿದ್ದುಪಡಿ ಮಾಡಿಸಲು ಓಡಾಡಿಸುತ್ತಿದ್ದಾರೆ. ಕಳೆದ ತಿಂಗಳು ತುಂಬಿದ ಹಣ ಬಿಲ್‌ಗೆ ಪುನಃ ಅರಿಯರ್ಸ್ ಎಂದು ಸೇರ್ಪಡೆಯಾಗಿದೆ. ಇದರಿಂದ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ ಎಂದು ಜನ ಕಿಡಿ ಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts