More

    ‘ದೇಶದಲ್ಲಿ ರೇಪ್​ ಕೇಸ್ ಹೆಚ್ಚಲು ಯುವಕರ ಕುತೂಹಲ, ಇಂಟರ್ನೆಟ್​ ಕಾರಣ…’

     ಜೈಪುರ: ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಬಹುಶಃ ಕುತೂಹಲ ಮತ್ತು ಇಂಟರ್ನೆಟ್​ ಕಾರಣ ಇರಬಹುದೆಂದು ರಾಜಸ್ಥಾನದ ಡಿಜಿಪಿ ಭೂಪೇಂದ್ರ ಸಿಂಗ್​ ಯಾದವ್​ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    'ದೇಶದಲ್ಲಿ ರೇಪ್​ ಕೇಸ್ ಹೆಚ್ಚಲು ಯುವಕರ ಕುತೂಹಲ, ಇಂಟರ್ನೆಟ್​ ಕಾರಣ...'ಉತ್ತರ ಪ್ರದೇಶದ ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ​ ಗ್ಯಾಂಗ್​ರೇಪ್​ ಪ್ರಕರಣ ಸೇರಿದಂತೆ ದೇಶದಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ರೇಪ್​ ಪ್ರಕರಣಗಳ ಬೆನ್ನಲ್ಲೇ ರಾಜಸ್ಥಾನ ಡಿಜಿಪಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ, ಯುವ ಜನಸಂಖ್ಯಾ ಏರಿಕೆ, ಇಂಟರ್ನೆಟ್​ ಮತ್ತು ಕುತೂಹಲವೇ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳಾಗಿವೆ ಎಂದು ಹೇಳಿಕೆ ನೀಡಿದ್ದಾರೆ.

    ಇಡೀ ಉತ್ತರ ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಕ್ರೂರ ಅಪರಾಧಗಳು ಹೆಚ್ಚುತ್ತಲೇ ಇರುವುದು ನಮ್ಮ ಅನುಭವಕ್ಕೆ ಬಂದಿದೆ. ಇದಕ್ಕೆ ಹಲವು ಕಾರಣಗಳಿವೆ. ಕೆಲ ಮಕ್ಕಳು ಇಂಟರ್ನೆಟ್​ ಅನ್ನು ಸ್ಪೂರ್ತಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಅಕ್ಕನ ಮಗನ ಹೊಟ್ಟೆ ಬಗೆದು ರಕ್ತ ಕುಡಿದಳು, ಹೃದಯವನ್ನೂ ಕಿತ್ತೆಸೆದಳು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ ಇದು!

    ಇನ್ನು ಯುವಕರಲ್ಲಿ ಕುತೂಹಲವು ಸಹ ಅಪರಾಧಗಳಿಗೆ ಪ್ರಚೋದನೆಯಾಗಿದೆ. ಸಾಮಾನ್ಯವಾಗಿ 18 ವರ್ಷಕ್ಕಿಂತ ಕೆಳಗಿನವರಿಗೆ ಸಂಬಂಧಗಳಲ್ಲಿ ಪ್ರವೇಶಿಸಲು ಕಾನೂನಾತ್ಮಕವಾಗಿ ಅವಕಾಶ ನೀಡುವುದಿಲ್ಲ. ಆದರೆ, ಇದೇ ಕುತೂಹಲದಿಂದ ಅಂತರ್ಜಾಲದಲ್ಲಿ ಅವರು ಏನನ್ನು ನೋಡುತ್ತಾರೆ, ಅದರ ಫಲಿತಾಂಶ ಫ್ರೆಂಡ್​ಶಿಪ್​ನಲ್ಲಿ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

    ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಅನೇಕ ಅತ್ಯಾಚಾರ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಲೇ ಇವೆ. ಅದರಲ್ಲೂ ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಪ್ರಕರಣ ದೇಶಾದ್ಯಂತ ಆಕ್ರೋಶದ ಕಿಚ್ಚು ಹಚ್ಚಿದೆ. ಇದೇ ಸಮಯದಲ್ಲಿ ಡಿಜಿಪಿ ಹೇಳಿಕೆ ನೀಡಿರುವುದು ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್​)

    ಚುನಾವಣಾಧಿಕಾರಿಯಾಗಿ ತೃತೀಯ ಲಿಂಗಿ: ಇತಿಹಾಸ ಸೃಷ್ಟಿಸಿದ ಬಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts