More

    ಭಾರತದ ಇಂಟರ್​​​​​ನೆಟ್​​​ ಬಳಕೆದಾರರು ಹೆಚ್ಚು ಇಷ್ಟಪಟ್ಟು ನೋಡುವ ವಿಷಯಗಳಿವು, ಇದರಲ್ಲಿ ಹಳ್ಳಿ ಮಂದಿಯೂ ಹಿಂದೆ ಬಿದ್ದಿಲ್ಲ!

    ಭಾರತ: ಭಾರತದಲ್ಲಿ ಇಂಟರ್​​​​​ನೆಟ್​​​​ ಬಳಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದೀಗ ದೇಶದಲ್ಲಿ ಬಳಕೆದಾರರ ಸಂಖ್ಯೆ 82 ಕೋಟಿ 10 ಲಕ್ಷ ತಲುಪಿದೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ. ವಿಶೇಷವೆಂದರೆ ನಮ್ಮ ದೇಶದಲ್ಲಿ ಹಳ್ಳಿಗಳ ಜನರು ಹೆಚ್ಚು ಇಂಟರ್​​​ನೆಟ್​​​​ ಬಳಸುತ್ತಾರೆ, ಅವರ ಸಂಖ್ಯೆ 44 ಕೋಟಿ 20 ಲಕ್ಷ. ನಗರದಲ್ಲಿ 37 ಕೋಟಿ 80 ಲಕ್ಷ ಜನರು ಅಂತರ್ಜಾಲದಲ್ಲಿ ಸಕ್ರಿಯರಾಗಿದ್ದಾರೆ.

    ಇಂಟರ್​​​​​ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾದ ವರದಿಯು ಭಾರತೀಯ ಜನಸಂಖ್ಯೆಯ ಸುಮಾರು 86 ಪ್ರತಿಶತದಷ್ಟು ಜನರು ಇಂಟರ್​​​​​ನೆಟ್ ಬಳಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಅದರಲ್ಲೂ ಹೆಚ್ಚಿನ ಡೇಟಾವನ್ನು OTT ನಲ್ಲಿ ಬಳಸಲಾಗುತ್ತದೆ. ಭಾರತದಲ್ಲಿನ 80 ಕೋಟಿ ಬಳಕೆದಾರರಲ್ಲಿ, ಸುಮಾರು 70 ಕೋಟಿ ಜನರು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಆಡಿಯೊ ಮತ್ತು ವಿಡಿಯೋವನ್ನು ವೀಕ್ಷಿಸುತ್ತಿದ್ದಾರೆ.

    ಭಾರತೀಯ ಬಳಕೆದಾರರು ಹೆಚ್ಚು ಹುಡುಕುವ ವಿಷಯಗಳಿವು
    ಇತ್ತೀಚಿನ ವರದಿಗಳು ಭಾರತದಲ್ಲಿ OTT ಪ್ಲಾಟ್‌ಫಾರ್ಮ್‌ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ ಎಂದು ತೋರಿಸುತ್ತವೆ. ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಜಿಯೋ ಸಿನಿಮಾ, ಅಮೆಜಾನ್ ಪ್ರೈಮ್ ವಿಡಿಯೋ, Zee5 ಭಾರತದಲ್ಲಿನ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಸೇರಿವೆ. ಹಳ್ಳಿ ಮತ್ತು ನಗರದ ಬಳಕೆದಾರರು ಇವುಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. 

    ಆನ್​​​​ಲೈನ್ ​​ಚಟುವಟಿಕೆ ಬಳಕೆದಾರರ ಸಂಖ್ಯೆ
    ಒಟಿಟಿ ವಿಷಯ 70 ಕೋಟಿ 70 ಲಕ್ಷ
    ಸಂವಹನ 62 ಕೋಟಿ 10 ಲಕ್ಷ
    ಸಾಮಾಜಿಕ ಮಾಧ್ಯಮ 57 ಕೋಟಿ 50 ಲಕ್ಷ
    ಆನ್​​​​ಲೈನ್ ​​ಗೇಮಿಂಗ್ 43 ಕೋಟಿ 80 ಲಕ್ಷ
    ಆನ್​​​​ಲೈನ್ ಶಾಪಿಂಗ್ 42 ಕೋಟಿ 70 ಲಕ್ಷ
    ಡಿಜಿಟಲ್ ಪಾವತಿ 37 ಕೋಟಿ
    ಆನ್​​​​ಲೈನ್ ​​ಕಲಿಕೆ 2 ಕೋಟಿ 40 ಲಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts