More

    ಪ್ಯಾಟ್ ಕಮ್ಮಿನ್ಸ್ ಕ್ವಾರಂಟೈನ್, ಕೊನೇಕ್ಷಣದಲ್ಲಿ ಸ್ಟೀವನ್ ಸ್ಮಿತ್ ನಾಯಕ

    ಅಡಿಲೇಡ್: ಕೋವಿಡ್-19 ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದಿಂದಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಆಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದರು. ಅವರ ಗೈರಿನಲ್ಲಿ ಉಪನಾಯಕ ಸ್ಟೀವನ್ ಸ್ಮಿತ್ ಹಂಗಾಮಿ ಸಾರಥ್ಯ ವಹಿಸಿಕೊಂಡರು.

    ಸ್ಮಿತ್ ಚೆಂಡು ವಿರೂಪ ಪ್ರಕರಣದ ಬಳಿಕ ಮೊದಲ ಬಾರಿಗೆ ಅಂದರೆ 2018ರ ಮಾರ್ಚ್ ಬಳಿಕ ಮೊದಲ ಬಾರಿಗೆ ಆಸೀಸ್ ತಂಡದ ನಾಯಕತ್ವ ನಿರ್ವಹಿಸಿದರು. ಅಂದರೆ ಮೂರು ವರ್ಷಗಳ ಬಳಿಕ ಸ್ಮಿತ್‌ಗೆ ಮರಳಿ ನಾಯಕತ್ವ ಒಲಿಯಿತು. ಇದರಿಂದ ಆಸೀಸ್ ಸತತ 3ನೇ ಟೆಸ್ಟ್ ಪಂದ್ಯದಲ್ಲಿ ಭಿನ್ನ ನಾಯಕರೊಂದಿಗೆ ಆಡಿದಂತಾಗಿದೆ. ಕಮ್ಮಿನ್ಸ್‌ಗೆ ಮುನ್ನ ಟಿಮ್ ಪೇನ್ ನಾಯಕರಾಗಿದ್ದರು.

    ಕಮ್ಮಿನ್ಸ್ ವರದಿ ನೆಗೆಟಿವ್ ಬಂದಿದ್ದರೂ ಇನ್ನು 7 ದಿನಗಳ ಕಾಲ ಅವರು ಕ್ವಾರಂಟೈನ್‌ನಲ್ಲಿರಬೇಕಿದೆ. ಕಮ್ಮಿನ್ಸ್ ಬಯೋಬಬಲ್ ನಿಯಮ ಉಲ್ಲಂಸಿಲ್ಲ. ರೆಸ್ಟೋರೆಂಟ್‌ನಲ್ಲಿ ಬುಧವಾರ ರಾತ್ರಿ ಊಟ ಮಾಡುತ್ತಿರುವಾಗ ಸೋಂಕಿತನ ಸಂಪರ್ಕವಾಗಿದೆ. ಟಾಸ್‌ಗೆ 3 ಗಂಟೆ ಮೊದಲಷ್ಟೇ ಈ ಬಗ್ಗೆ ತಿಳಿದು, ಕಮ್ಮಿನ್ಸ್ ಪಂದ್ಯದಿಂದ ಹೊರಗುಳಿಯಬೇಕಾಯಿತು. 3ನೇ ಟೆಸ್ಟ್‌ಗೆ ಅವರು ಲಭ್ಯರಾಗಲಿದ್ದಾರೆ.

    ಮೈಕೆಲ್ ನೇಸರ್ ಪದಾರ್ಪಣೆ
    ಕಮ್ಮಿನ್ಸ್ ಗೈರಿನಲ್ಲಿ ವೇಗಿ ಮೈಕೆಲ್ ನೇಸರ್ ಆಸೀಸ್ ಪರ ಟೆಸ್ಟ್ ಪದಾರ್ಪಣೆ ಅವಕಾಶ ಪಡೆದರು. ಅವರು ಬ್ಯಾಗಿ ಗ್ರೀನ್ ಕ್ಯಾಪ್ ಧರಿಸಿದ 462ನೇ ಆಟಗಾರ ಎನಿಸಿದರು. ಈ ಮುನ್ನ 17 ಟೆಸ್ಟ್‌ಗಳಲ್ಲಿ ಆಸೀಸ್ ತಂಡದ ಜತೆಗಿದ್ದರೂ ಅವರು ಆಡುವ ಅವಕಾಶ ಪಡೆದಿರಲಿಲ್ಲ. ಇದೀಗ 31 ವರ್ಷದ ನೇಸರ್‌ಗೆ ಕೊನೆಗೂ ಅದೃಷ್ಟ ಒಲಿದಿದೆ. ಗಾಯಾಳು ಜೋಶ್ ಹ್ಯಾಸಲ್‌ವುಡ್ ಬದಲಿಗೆ ಜೇ ರಿಚರ್ಡ್‌ಸನ್ ಆಡಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮತ್ತು ಜಾಕ್ ಲೀಚ್ ಬದಲಿಗೆ ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್‌ಸನ್ ಮತ್ತು ಸ್ಟುವರ್ಟ್ ಬ್ರಾಡ್ ಕಣಕ್ಕಿಳಿದರು.

    ಭಾರತೀಯ ಕ್ರಿಕೆಟ್‌ನಲ್ಲಿ ಈಗ ವಿರಾಟ್ ಕೊಹ್ಲಿ V/s ಸೌರವ್ ಗಂಗೂಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts